ಜಿಲ್ಲೆ

ಡಿ. ಎಸ್​. ಕುರ್ತಕೋಟಿ ಮೆಮೋರಿಯಲ್​ ಪಿಯು ಕಾಲೇಜಿನಲ್ಲಿ ಕ್ರೀಡಾ ಚಟುವಟಿಕೆ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಇಂದಿನ ವಿದ್ಯಾಥಿರ್ಗಳ ಸಾಧನೆಯನ್ನು ಗುರಿತಿಸಿ ನೀಡಿದಂತಹ ಪುರಸ್ಕಾರ ಜೀವನವಿಡಿ ಪ್ರೇರಣೆಯ ಸೆಲೆಯಾಗಿರುತ್ತದೆ ಮತ್ತು ನಿಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದು ಹುಬ್ಬಳ್ಳಿಯ ಕೆ. ಎಲ್​. ಇ ಸಂಸ್ಥೆಯ ಪಿ. ಸಿ. ಜಾಬಿನ್​ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾ ಕುಲಕಣಿರ್ ಹೇಳಿದರು.

ಆದರ್ಶ ಶಿಕ್ಷಣ ಸಮಿತಿಯ ಡಿ. ಎಸ್​. ಕುರ್ತಕೋಟಿ ಮೆಮೋರಿಯಲ್​ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಾಂಸತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಯಶಸ್ಸಿಗೆ ಸ್ಥಳ ಅಥವಾ ಬೋಧನೆಯ ಮಾಧ್ಯಮ ಯಾವುದು ಅಡ್ಡಿಯ ಅಲ್ಲ. ನಿಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕೆಂದರೆ ನೀವು ಮೊದಲು ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು. ಶಿಕ್ಷಣ ಅಂಕಗಳಷ್ಟೇ ಅಲ್ಲ. ಅದು ಆತ್ಮವಿಶ್ವಾಸಕ್ಕೆ ಬಲ ತುಂಬುತ್ತದೆ. ಸ್ವಯಂ ನಂಬಿಕೆ ಇಡುವುದರಿಂದ ಆತ್ಮವಿಶ್ವಾಸ ವರ್ಧನೆಗೊಳ್ಳುತ್ತದೆ ಎಂದರು.

ಎ. ಎಲ್​. ಪೋತ್ನಿಸ ಮಾತನಾಡಿ, ವಿದ್ಯಾಥಿರ್ಗಳು ಅವಶ್ಯಕತೆಗಿಂತ ಮಿರಿ ಹೆಚ್ಚಿನ ಅಧ್ಯಯನವನ್ನು ಮಾಡಿದಾಗ ಮಾತ್ರ ವಿದ್ಯಾಥಿರ್ಗಳು ಸಾಧನೆ ಮಾಡಲು ಸಾಧ್ಯ. ವಿದ್ಯಾಥಿರ್ಗಳ ಛಲ, ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಗುರುಗಳು ಒಳ್ಳೆಯ ಮಾರ್ಗದರ್ಶನ ನೀಡಬೇಕು. ವಿದ್ಯಾಥಿರ್ಗಳು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.

ಆದರ್ಶ ಶಿಕ್ಷಣ ಸಮಿತಿಯ ಅಧ್ಯಕ್ಷ ಕೆ. ವಿ ಕುಷ್ಟಗಿ ರವರು ಸಾಧನೆ ಮಾಡಿದ ವಿದ್ಯಾಥಿರ್ಗಳನ್ನು ಸನ್ಮಾನಿಸಿದರು. ಈ ಸಮಾರಂಭದಲ್ಲಿ 2024&-25 ನೇ ಸಾಲಿನ ದ್ವೀತಿಯ ಪಿಯುಸಿ ವಾಷಿರ್ಕ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 10ನೇ ಸ್ಥಾನ ಗಳಿಸಿದ ವಿಜಯ ಶಿದ್ದಲಿಂಗ್​ ಮತ್ತು ರಾಜ್ಯಕ್ಕೆ 15ನೇ ಸ್ಥಾನ ಗಳಿಸಿದ ಸಂಜನಾ ಮೆರವಾಡೆ ಹಾಗೂ ರಾಜ್ಯಕ್ಕೆ 17ನೇ ಸ್ಥಾನ ಗಳಿಸಿದ ಆಗಮ ಬಾಗಮಾರ ವಿದ್ಯಾಥಿರ್ಗಳನ್ನು ಸನ್ಮಾನಿಸಲಾಯಿತು. ಶೇ. 85ರಷ್ಟು ಅಂಕ ಪಡೆದ 35 ವಿದ್ಯಾಥಿರ್ಗಳನ್ನು ಗೌರವಿಸಲಾಯಿತು.

ಆರ್​. ಆರ್​. ಕುಲಕಣಿರ್, ಬಸವರಾಜ ಟಿ. ಪಿ., ಉಪನ್ಯಾಸಕರು, ವಿದ್ಯಾಥಿರ್ಗಳು ಹಾಗೂ ಭೋಧಕೇತರ ಸಿಬ್ಬಂದಿಗಳು, ಆದರ್ಶ ಶಿಕ್ಷಣ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಇತರರು ಇದ್ದರು.