Oplus_131072 
ಜಿಲ್ಲೆ

ಹೊಸ ಉದ್ಯಮವನ್ನು ಆರಿಸುವ ಮುನ್ನ ಮಾರುಕಟ್ಟೆಯ ರೂಪರೇಷೆ ಅಧ್ಯಯನ ಅಗತ್ಯ- ಆನಂದ್ ಪೋತ್ನಿಸ್

Gadag: ನಗರದ ಆದರ್ಶ ಶಿಕ್ಷಣ ಸಂಸ್ಥೆಯ ಶ್ರೀ ವಿ ಆರ್ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ನ ಐ ಕ್ಯೂ ಎ ಸಿ ಅಡಿಯಲ್ಲಿ ಕನ್ನಡ ವಿಭಾಗ ಹಾಗೂ ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸಹಯೋಗದಲ್ಲಿ ಶ್ರೇಷ್ಠ ಉದ್ದಿಮೆದಾರ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಉದ್ಯಮದರೊಂದಿಗೆ ಸಂವಾದ ಕಾರ್ಯಗಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದರ್ಶ ಶಿಕ್ಷಣ ಸಂಸ್ಥೆಯ ಚೇರ್ಮನ್ನರಾದ ಶ್ರೀ ಆನಂದ್ ಎಲ್ ಪೋತ್ನಿಸ್ ರವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಯಾವುದೇ ಒಂದು ಹೊಸ ಉದ್ಯೋಗ ಆರಂಭಿಸುವ ಮುನ್ನ ಉದ್ದಿಮೆ ಕುರಿತಂತೆ ಸಮಗ್ರ ರೂಪ ರೇಶಿಯೋಗಳನ್ನ ಮೊದಲು ಸಿದ್ಧಪಡಿಸಿಕೊಳ್ಳಬೇಕು ಅದರೊಂದಿಗೆ ಮಾರುಕಟ್ಟೆಯ ಅಧ್ಯಯನವನ್ನು ಮಾಡಬೇಕು
ಹೊಸ ಉದ್ಯೋಗ ಆರಂಭಿಸುವ ಮುನ್ನ ಉದ್ಯೋಗ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆದು ಸಾಧ್ಯವಾದರೆ ತರಬೇತಿಯನ್ನು ಪಡೆದುಕೊಳ್ಳಬೇಕು ತದನಂತರ ಆಸಕ್ತಿ ಇರುವ ನಿರುದ್ಯೋಗಿಗಳಿಗೆ ಉದ್ಯೋಗವನ್ನು ಕಲ್ಪಿಸಿಕೊಡಬೇಕು. ಕಾರಣ ಇಡೀ ಜಗತ್ತಿನಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ ಪ್ರತಿ ವರ್ಷ ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಪದವೀಧರರು ತೇರ್ಗಡೆಯಾಗುತ್ತಿದ್ದು ಇವರೆಲ್ಲರಿಗೂ  ಉದ್ಯೋಗ ನೀಡುವದು ಸರ್ಕಾರದಿಂದ ಅಸಾಧ್ಯ ಆದ್ದರಿಂದ ಸ್ವಂತ ಉದ್ಯೋಗ ಆರಂಭಿಸುವ ಕುರಿತು ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡ ಕನ್ನಡ ವಿಭಾಗಕ್ಕೆ ಹಾಗೆ ಆಯ್ಕೆಯಾದ 10 ಶ್ರೇಷ್ಠ ಯುವ ಉದ್ದಿಮೆದಾರರಿಗೆ ತಮ್ಮ ಉದ್ಘಾಟನಾ ನುಡಿಗಳಲ್ಲಿ ಅಭಿನಂದನೆ ಸಲ್ಲಿಸಿದರು.
     ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಆಗಮಿಸಿದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಕನ್ನಡ ಹಿರಿಯ ಪ್ರಾಧ್ಯಾಪಕರು ಡಾ. ಶಿವಪ್ಪ ಕುರಿಯವರು ಮಾತನಾಡಿ ವಿದ್ಯಾರ್ಥಿಗಳು ಇವತ್ತಿನ ದಿನಮಾನಗಳಲ್ಲಿ ಮಾತುಗಾರಿಕೆ ಬಹಳಷ್ಟು ಅವಶ್ಯಕವಾಗಿದೆ ವಿದ್ಯಾರ್ಥಿಗಳಿಗೆ ಪಠ್ಯ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆಗಳು ಕೂಡ ಅಷ್ಟೇ ಮುಖ್ಯ ಅದರಲ್ಲೂ ವಾಣಿಜ್ಯ ವಿದ್ಯಾರ್ಥಿಗಳಿಗೆ ಮಾತೇ ಬಂಡವಾಳವಾಗಿರುವುದರಿಂದ ಮಾತಿನ ಕಲೆ, ಹಿರಿಯರನ್ನ ಗೌರವಿಸುವುದು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು  ಹಾಗೆ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕಾಗಿ ತಮ್ಮ ಮಾತುಗಳಲ್ಲಿ ಅಭಿನಂದನೆಗಳನ್ನು ಸಲ್ಲಿಸಿದರು. ಕಾರ್ಯಕ್ರಮದ  ವಿಶೇಷ ಅತಿಥಿಗಳಾಗಿ ಹಿರಿಯರು ಹಾಗೂ ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷರಾದ ಮಾನ್ಯ ಶ್ರೀ ತಾತನ ಗೌಡ ಪಾಟೀಲ್ ಆಗಮಿಸಿದ್ದರು ಈ ಇರುವರಿಗೆ ಮಹಾವಿದ್ಯಾಲಯದಿಂದ ಗೌರವ ಸಮರ್ಪಣೆ ಮಾಡಲಾಯಿತು.
  ಶ್ರೇಷ್ಠ ಯುವ ಉದ್ಯಮಿದಾರ ಪ್ರಶಸ್ತಿಗೆ ಆಯ್ಕೆಯಾದ. ಶ್ರೀ ಲಿಂಗರಾಜ್ ತೋಟದ, ಶ್ರೀ ಬಸವರಾಜ್ ತಿರ್ಲಾಪುರ, ಶ್ರೀ ಸತೀಶ ಓಸವಾಲ, ಶ್ರೀ ಮನೀಶ್ ಬನಸಾಲಿ, ಶ್ರೀ ಸುಭಾಷ್ ಚನ್ನಪ್ಪನವರ್, ಶ್ರೀ ಶೈಲೇಶ್ ಶಹಾ, ಶ್ರೀ ಶೈಲೇಶ್ ಭಾಗಮಾರ, ಶ್ರೀ ಗೌತಮ್ ಕುಮಾರ್ ಜೈನ್, ಶ್ರೀಮತಿ ದಿವ್ಯ ಸಂಕಣ್ಣವರ, ಶ್ರೀ ಪವನ್ ದಾವಣಗೆರೆ ಎಲ್ಲ ಉದ್ದಿಮೆದಾರರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
          ವೇದಿಕೆ ಮೇಲೆ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಎ.ಡಿ ಗೋಡಕಿಂಡಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಕೆ ಗಿರಿರಾಜ ಕುಮಾರ್, ಉಪ ಪ್ರಾಚಾರ್ಯರು ಹಾಗೂ ಐ ಕ್ಯೂ ಎ ಸಿ ಕೋ ಆರ್ಡಿನೇಟರ್  ಡಾ. ವಿ. ಟಿ ನಾಯ್ಕರ್ ಗದಗ್ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನ್ ಪದಾಧಿಕಾರಿಗಳು, ಆದರ್ಶ ಶಿಕ್ಷಣ ಸಂಸ್ಥೆಗೆ ಬಿ ಬಿ ಎ ಹಾಗೂ ಬಿ ಸಿ ಎ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಲಿಂಗರಾಜ್ ರಶ್ಮಿ, ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಬಿ.ಪಿ ಜೈನರ ಬೇರೆ ಬೇರೆ ಮಹಾವಿದ್ಯಾಲಯಗಳ ಗೌರವಾನ್ವಿತ ಕನ್ನಡ ಉಪನ್ಯಾಸಕರು, ಯುವ ಉದ್ದಿನದರರಾದ ಶ್ರೀ ಪ್ರವೀಣ್ ಜೋಳದ ಹಾಗೂ ಆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಈ  ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.