Gadag: ನಗರದ ಸಮಿತಿಯ .ವಿ. ಆರ್ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ನಲ್ಲಿ 38 ವರ್ಷಗಳ ಕಾಲ ಬೆರಳಚ್ಚುಗಾರರಾಗಿ ಕಾರ್ಯವನ್ನು ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ ವಿಜಯಕುಮಾರ ಲಕ್ಷ್ಮಣಸ ಕಲಬುರ್ಗಿ ಅವರ ಸೇವ ನಿವೃತ್ತಿ ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಗೆ ಚೇರ್ಮನ್ ಆನಂದ್ ಪೋತ್ನಿಸ್ ಅವರು ಮಾತನಾಡಿ ಮನುಷ್ಯನ ಜೀವನದಲ್ಲಿ ಕಾಯಕ ಎಂಬುದು ಬಹು ಮುಖ್ಯವಾಗಿದೆ ಈ ಪ್ರಪಂಚಕ್ಕೆ ಬಂದ ಮನುಷ್ಯನ ಜೀವನ ಸಾರ್ಥಕವಾಗುವುದು ಅವನು ಮಾಡಿದ ಸತ್ಕಾರ್ಯಗಳಿಂದ ಪಡೆದ ಜ್ಞಾನದಿಂದ ಅಂತಹ ಜ್ಞಾನದ ಮೂಲಕ ವಿ. ಎಲ್ ಕಲ್ಬುರ್ಗಿಯವರು ಧಣಿವರಿಯದೆ ದುಡಿದು ನಿಷ್ಠೆ ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಕೆಲಸ ಮಾಡಿದ ಪರಿಯಿಂದ ಆಡಳಿತ ಮಂಡಳಿಯ ಮೆಚ್ಚುಗೆಗೆ ಪಾತ್ರರಾದವರು ನಿರಂತರ ಕ್ರಿಯಾಶೀಲತೆಯ ಕಾರ್ಯಗಳ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡವರು ಹೀಗಾಗಿ ಮುಂಬರುವ ಸಿಬ್ಬಂದಿಗೆ ರೋಲ್ ಮಾಡೆಲ್ ಎಂದು ತಮ್ಮ ಮಾತುಗಳಲ್ಲಿ ಹಂಚಿಕೊಂಡರು.
ಸಂಸ್ಥೆಯ ಕಾರ್ಯದರ್ಶಿಗಳಾದ ಎ ಡಿ ಗೋಡಕಿಂಡಿಯವರು ಮಾತನಾಡಿ ನಿವೃತ್ತಿಯು ಒಬ್ಬರ ಜೀವನದಲ್ಲಿ ಒಂದು ರೋಮಾಂಚನಕಾರಿ ಮತ್ತು ಕಹಿ ಸಮಯವಾಗಿರುತ್ತದೆ ಎಂದರೆ ತಪ್ಪಾಗಲಾರದು. ವರ್ಷಗಳ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ನಂತರ ಒಬ್ಬರ ದುಡಿಮೆಯ ಫಲವನ್ನು ಆನಂದಿಸಲು ಮತ್ತು ಹೊಸ ಸಾಹಸಗಳನ್ನು ಪ್ರಾರಂಭಿಸುವ ಸಮಯವಾಗಿರುತ್ತದೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಆರೋಗ್ಯದಲ್ಲಿ ಅನೇಕ ಸಮಸ್ಯೆಗಳಿದ್ದರೂ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವ ಮೂಲಕ ಇನ್ನೊಬ್ಬರಿಗೆ ಮಾದರಿಯಾಗಿದ್ದಾರೆ. ನಿಮ್ಮ ಜೀವನದ ಈ ಹೊಸ ಅಧ್ಯಾಯವು ಸಂತೋಷ ಮತ್ತು ಉತ್ಸಾಹ ಆರೋಗ್ಯದಿಂದ ತುಂಬಿರಲಿ ಎಂದು ಶುಭ ಹಾರೈಸಿದರು. ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಕೆ. ಗಿರಿರಾಜ ಕುಮಾರ್ ಸ್ವಾಗತದೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಉಪ ಪ್ರಾಚಾರ್ಯರು ಡಾ. ವಿ. ಟಿ ನಾಯ್ಕರ್ ,ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ರವೀಂದ್ರ ಕುಲಕರ್ಣಿ, ವ್ಯವಹಾರ ಆಡಳಿತ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಲಿಂಗರಾಜ್ ರಶ್ಮಿ, ಆಫೀಸ್ ಸುಪ್ರಿಡೆಂಟ್ ಶ್ರೀ ರವೀಶ್ ಪ್ರೊ. ಸಲ್ಮಾ ಬೆಳಗಾವ್, ಪ್ರೊ. ಮೋಹನ್ ಡಿ, ಶ್ರೀಯುತ ಅಂಗಡಿ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಆದರ್ಶ ಶಿಕ್ಷಣ ಸಂಸ್ಥೆ ಹಾಗೂ ಪದವಿ ಮಹಾವಿದ್ಯಾಲಯಗಳಿಂದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಶ್ರೀ. ವಿ.ಎಲ್ ಕಲಬುರ್ಗಿ ಅವರು ಮಾತನಾಡಿ ಸಂತೋಷ ಮತ್ತು ಸಂತೃಪ್ತಿಯಿಂದ ನಾನು ನನ್ನ ಸೇವೆಯನ್ನು ಪೂರ್ಣಗೊಳಿಸುತ್ತಿದ್ದೇನೆ. ಸಂಸ್ಥಾಪಕ ಅಧ್ಯಕ್ಷರಾದ ದಿ.ವಿ. ಆರ್ ಕುಷ್ಟಗಿ ಅವರು ನನಗೆ ತೋರಿಸಿದ ಪ್ರೀತಿ ಕಾಳಜಿ ನನ್ನ ಜೀವಮಾನದಲ್ಲಿ ಮರೆಯಲು ಅಸಾಧ್ಯ. ದಿವಂತರುಗಳಾದ ವಿ ಆರ್ ಮಾಳೆಕೊಪ್ಪಮಠ, ಡಿ.ಎಸ್ ಕುರ್ತುಕೋಟಿ, ಎಲ್ ಎ ಪೋತ್ನಿಸ್ ಹಾಗೆ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ಹರಿದಾಸ್ , ಮಾಗಿ, ಟೋಪಿಗಿ ಲಕ್ಕುಂಡಿ ಇವರನ್ನ ಕೃತಜ್ಞತೆಯ ಮೂಲಕ ಈ ವೇದಿಕೆ ಮೇಲೆ ಸ್ಮರಿಸುತ್ತಾ ಧನ್ಯವಾದ ಅರ್ಪಿಸಿದರು. ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಶ್ರೀ. ಜೆ ಎಸ ಕೊರ್ಲಹಳ್ಳಿ, ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಪಿ ಆರ್ ಅಡವಿ ರವರು ಈಗಲೂ ನನ್ನ ಬಗ್ಗೆ ಪ್ರೀತಿಯಿಂದ ನನ್ನ ಆರೋಗ್ಯದ ಬಗ್ಗೆ ವಿಚಾರಿಸಿ ಯಾವಾಗ ಬೇಕಾದರೂ ತಮ್ಮ ಸಹಾಯವನ್ನು ಪಡೆಯಲು ಹಿಂಜರಿಯ ಬಾರದೆಂದು ಹೇಳುತ್ತಾರೆ ಅವರ ಕಾಳಜಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳುತ್ತಾ. ನಿವೃತ್ತ ಪ್ರಾಚಾರ್ಯರುಗಳಾದ ಯಾದ್ವಾಡ ಸರ್, ಡಾ. ಬಾಲಾಜಿ ರಾವ್ ಸರ್, ಡಾ. ಗುಳೇದಗುಡ್, ಬೆಳ್ಳಿಕಟ್ಟಿ ಸರ್, ಪಾಟೀಲ್ ಸರ್ ಇವರಿಗಳ ತೋರಿದ ಪ್ರೀತಿ ಕಾಳಜಿಗೆ ನಾನು ಚಿರಋಣಿಯಾಗಿದ್ದೇನೆ ಅವರೊಂದಿಗೆ ಸೇವೆ ಸಲ್ಲಿಸಿದ ತಮ್ಮ ಪ್ರಾಚಾರ್ಯ ಹಾಗೂ ಸಿಬ್ಬಂದಿ ವರ್ಗದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಆದರ್ಶ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಗಳ ಪ್ರಾಚಾರ್ಯರಗಳು, ಶಿಕ್ಷಕ , ಸಿಬ್ಬಂದಿ ವರ್ಗ ಆಫೀಸ್ ಸುಪ್ರಡೆಂಟ್ ಪ್ರಾಣೇಶ್ ಬೆಳ್ಳಟ್ಟಿ ಹಾಗೂ ಕಲಬುರ್ಗಿ ಪರಿವಾರದ ಸದಸ್ಯರು ಉಪಸ್ಥಿತರಿದ್ದರು.