Gadag: ನಗರದ ಆದರ್ಶ ಶಿಕ್ಷಣ ಸಮಿತಿಯ ಶ್ರೀ.ವಿ.ಆರ್ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಗದುಗಿನ ಐತಿಹಾಸಿಕ ಪುರಾತನ ದೇವಾಲಯಗಳಲ್ಲಿ ಒಂದಾದ ಶ್ರೀ ತ್ರಿಕೂಟೇಶ್ವರ ದೇವಸ್ಥಾನದ ಆವರಣವನ್ನು ಸ್ವಚ್ಛತಾ ಸಮಾಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತ್ರಿಕೋಟೇಶ್ವರ, ವೀರನಾರಾಯಣ ದೇವಾಲಯ, ಜುಮ್ಮಾ ಮಸೀದಿ ಟ್ರಸ್ಟಿನ ಚೇರ್ಮನ್ ಶ್ರೀ ಕುಶಾಲ್ ಗೋಡ್ಕಿಂಡಿ ಚಾಲನೆ ನೀಡಿ ಮಾತನಾಡಿ ಶ್ರಮದಾನವು ಸಮಾಜದ ಅಭಿವೃದ್ಧಿಗೆ ಅತ್ಯಗತ್ಯವಾದ ಸಮಾಜ ಸೇವೆಯಾಗಿದ್ದು, ಇದು ಸಮುದಾಯದ ಒಗ್ಗೂಡುವಿಕೆ ಮತ್ತು ಸಮಾಜದಲ್ಲಿನ ನೈರ್ಮಲ್ಯ ಹಾಗೂ ಹಸಿರು ಪರಿಸರಕ್ಕಾಗಿ ಸ್ವಯಂಪ್ರೇರಿತವಾಗಿ ಕೆಲಸ ಮಾಡುವುದನ್ನು ಒಳಗೊಂಡಿದೆ. ಶ್ರಮದಾನವು ವ್ಯಕ್ತಿಗಳಲ್ಲಿ ಒಗ್ಗಟ್ಟು, ನೈರ್ಮಲ್ಯ ಮತ್ತು ಪರಿಸರದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತದೆ ಮತ್ತು ಸಮಾಜದ ಸಮಗ್ರ ಬೆಳವಣಿಗೆಗೆ ಇದು ಸಹಕಾರಿಯಾಗಿದೆ.
ಶ್ರಮದಾನವು ವ್ಯಕ್ತಿಗಳಲ್ಲಿ ಸೇವಾ ಮನೋಭಾವ, ನೈರ್ಮಲ್ಯ ಕಾಪಾಡುವ ಜಾಗೃತಿ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುತ್ತದೆ. ಇದು ಸರಳತೆ ಮತ್ತು ಸ್ವಚ್ಛತೆಯ ಮಹತ್ವವನ್ನು ತಿಳಿಸುತ್ತದ. ವಿದ್ಯಾರ್ಥಿಗಳು "ಸಮಾಜಕ್ಕಾಗಿ ನಾವು" ಎಂಬ ಸೇವಾ ಮನೋಭಾವವನ್ನು ಬೆಳೆಸಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮಿ, ಸಮಾಜಮುಖಿ ಮೌಲ್ಯಗಳನ್ನು ಬೆಳೆಸಬೇಕು. ಇಂದಿನ ಶಿಕ್ಷಣದಲ್ಲಿ ಪಠ್ಯ ಕಲಿಕೆಗಿಂತಲೂ ನೈತಿಕ ಶಿಕ್ಷಣ ಅಗತ್ಯವಾಗಿದೆ. ಜ್ಞಾನ ನೀಡಿದರೆ ನೈತಿಕ ಶಿಕ್ಷಣ ಬದುಕು ಕಲಿಸುತ್ತದೆ’ ಇವತ್ತಿನ ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮಾಡಿಕೊಳ್ಳುವ ಮೂಲಕ ತಮ್ಮ ವ್ಯಕ್ತಿತ್ವವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಇತರನಾದ ಪರಿಸರ ಸಂರಕ್ಷಣೆ ಸೇವ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಭಾಗಿಯಾಗಿರುವುದು ನನಗೆ ಸಂತಸ ತಂದಿದೆ ಹಾಗೆ ಇಂತಹ ಸುಡು ಬಿಸಿಲಿನಲ್ಲಿ ಗದುಗಿನ ಆದರ್ಶ ಶಿಕ್ಷಣ ಸಮಿತಿಯ ಕಾಮರ್ಸ್ ಕಾಲೇಜ್ ಎನ್ ಎಸ್ ಎಸ್ ಘಟಕವು ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಟ್ರಸ್ಟಿನ ಪರವಾಗಿ ಸಂಸ್ಥೆಯ ಮುಖ್ಯಸ್ಥರಿಗೆ ಹಾಗೂ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ಬಿ.ಪಿ ಜೈನರ, ಶ್ರೀ ಆದಿತ್ಯ ಜೋಶಿ, ವಿಭಾಗದ ಮಾಜಿ ವಿದ್ಯಾರ್ಥಿ ಕಾರ್ಯದರ್ಶಿ ಡಾ. ಡಿ.ಸಿ ಪಾವಟೆ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿ ಕು ಮನೋಜ್ ದಲಬಂಜನ್ , ಜನಕ ರೆಡ್ಡಿ ಎಚ್, ಕು. ವರ್ಷ ಕಲ್ಕಂಬಿ ಕು. ನಮೃತಾ ಪಾಟೀಲ್ ಹಾಗೂ ಸ್ವಯಂಸೇವಕ ಸೇವಕಿಯರು ಉಪಸ್ಥಿತರಿದ್ದರು.