Oplus_131072 
ಜಿಲ್ಲೆ

ವಾಣಿಜ್ಯ ಮಹಾವಿದ್ಯಾಲಯದ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಆಚರಣೆ.

Gadag - Shivanand Hiremath
Gadag: ನಗರದ ಆದರ್ಶ ಶಿಕ್ಷಣ ಸಂಸ್ಥೆಯ ಸಮಿತಿಯ ಶ್ರೀ ವಿ.ಆರ್ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಕೆ ಗಿರಿರಾಜಕುಮಾರ್ ರವರು ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿ ಮಹರ್ಷಿ ವಾಲ್ಮೀಕಿ ರವರನ್ನು 'ಆದಿಕವಿ' ಎಂಬ ಎಂಬ ಬಿರುದಾಂಕಿತದಿಂದ ಕರೆದರು ಮತ್ತು ಅವರು ಸಂಸ್ಕೃತ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ ವಾಲ್ಮೀಕಿಯವರ ಜಯಂತಿಯು ಅಶ್ವಯುಜ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ.
ವಾಲ್ಮೀಕಿ ಸಂಸ್ಕೃತದ ಮೊದಲ ಮಹಾಕಾವ್ಯವಾದ ರಾಮಾಯಣವನ್ನು ರಚಿಸಿದ ಗಣ್ಯ ಸಾಹಿತಿ. ಆದ್ದರಿಂದ ಅವರನ್ನು 'ಆದಿಕವಿ' ಎಂದು ಕರೆಯಲಾಗುತ್ತದೆ.ಅವರ ಮೂಲ ಹೆಸರು 'ರತ್ನಾಕರ' ಆಗಿತ್ತು ಎಂಬ ದಂತಕಥೆ ಇದೆ. ನಂತರ ಅವರು ಸಂತರಾಗಿ, ಮಹರ್ಷಿಯಾಗಿ ಪರಿವರ್ತನೆಗೊಂಡರು.
ವಾಲ್ಮೀಕಿಯು "ರಾಮಾಯಣ" ಬರೆದಿದ್ದು, ಇದು ಸಂಸ್ಕೃತದ ಅತ್ಯಂತ ಹಳೆಯ ಮಹಾಕಾವ್ಯಗಳಲ್ಲಿ ಒಂದಾಗಿದ್ದು.
ರಾಮನ ಜೀವನ ಘಟನೆಗಳನ್ನು ಅರಿತು, ಸೀತೆಯು ವಾಲ್ಮೀಕಿ ಆಶ್ರಮದಲ್ಲಿ ಆಶ್ರಯ ಪಡೆದು ಲವ, ಕುಶರಿಗೆ ಜನ್ಮ ನೀಡಿದ ಕಥೆಯನ್ನು ತಮ್ಮ ಮಾತುಗಳಲ್ಲಿ ಹಂಚಿಕೊಂಡರು.
ಮಹಾವಿದ್ಯಾಲಯದ ಉಪ ಪ್ರಾಚಾರ್ಯರು ಹಾಗೂ ಐಕ್ಯೂ ಏ ಸಿ ಕೋ ಆರ್ಡಿನೇಟರ್ ಡಾ ವಿ.ಡಿ. ನಾಯಕರವರು ಮಾತನಾಡಿ ವಾಲ್ಮೀಕಿ ಮಹರ್ಷಿಗಳ ಆರಂಭಿಕ ಹೆಸರು ರತ್ನಾಕರ. ವಾಲ್ಮೀಕಿಯವರು ಮಹರ್ಷಿಗಳಾಗಿ ಬದಲಾಗುವುದಕ್ಕೂ ಮುನ್ನ ದರೋಡೆಕಾರರಾಗಿದ್ದವರು. ಅವರು ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ಪ್ರತಿಯೊಬ್ಬರನ್ನು ದರೋಡೆ ಮಾಡುತ್ತಿದ್ದರು. ಪ್ರಯಾಣಿಕರನ್ನು ಭಯಭೀತಗೊಳಿಸುತ್ತಿದ್ದರು. ಒಂದು ದಿನ ಅವರು ಹೀಗೆ ದರೋಡೆ ಮಾಡಲು ಹೋಗುತ್ತಿದ್ದಾಗ ಅವರಿಗೆ ನಾರದ ಮಹರ್ಷಿಗಳು ಎದುರಾಗುತ್ತಾರೆ. ನಾರದರು ವಾಲ್ಮೀಕಿ ಮಹರ್ಷಿಗಳಿಗೆ ರಾಮನ ಭಕ್ತಿಯ ಕಡೆಗೆ ಮಾರ್ಗದರ್ಶನವನ್ನು ನೀಡುತ್ತಾರೆ. ಇದರಿಂದಾಗಿ ರತ್ನಾಕರನಾಗಿದ್ದ ವಾಲ್ಮೀಕಿಯವರ ಜೀವನ ಬದಲಾವಣೆಯನ್ನು ಪಡೆಯಿತು. ವರ್ಷಗಳ ಕಾಲ ತಪಸ್ಸು ಮಾಡಿದರು. ರಾಮ ನಾಮ ಪಠಣದ ಮೂಲಕ, ರತ್ನಾಕರ ಆಧ್ಯಾತ್ಮಿಕ ಜ್ಞಾನೋದಯವನ್ನು ಪಡೆದು ಮಹರ್ಷಿ ವಾಲ್ಮೀಕಿಯಾದರು. ದರೋಡೆಕೋರನಿಂದವನು ಋಷಿಯಾಗಿ ಅವರ ಪ್ರಯಾಣವು ಪಶ್ಚಾತ್ತಾಪ, ಭಕ್ತಿ ಮತ್ತು ರೂಪಾಂತರದ ಶಕ್ತಿಯನ್ನು ಸಂಕೇತಿಸುತ್ತದೆ, ಲಕ್ಷಾಂತರ ಭಕ್ತರಿಗೆ ಸದಾಚಾರದ ಮಾರ್ಗವನ್ನು ಅನುಸರಿಸಲು ಪ್ರೇರೇಪಿಸುತ್ತದೆ ಅಂತ ಒಬ್ಬ ಶ್ರೇಷ್ಠ ಮಹಾತ್ಮರ ಜಯಂತಿ ಮಹಾವಿದ್ಯಾಲಯದಲ್ಲಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಮ್ಮ ಮಾತುಗಳಲ್ಲಿ ಹಂಚಿಕೊಂಡರು.
  ಕಾರ್ಯಕ್ರಮದಲ್ಲಿ ಡಾ.  ಎಸ್ ಡಿ ಬಂಡಾರ್ಕರ್, ಪ್ರೊ. ಸಲ್ಮಾ ಬೆಳಗಾಂ, ಪ್ರೊ. ಈಶ್ವರ್ ಯವಗಲ್ ಪ್ರೊ. ಮೋಹನ್ ಡಿ , ಪ್ರೊ. ಸುನಿತಾ ಪ್ರೊ ಬಾಹುಬಲಿ ಪಿ ಜೈನರ ಮಹಾವಿದ್ಯಾಲಯದ ಶಿಕ್ಷಕ ಹಾಗೂ ಸಿಬ್ಬಂದಿ ಶ್ರೀ ರವೀಶ್, ಶಿವು ಕಣವಿ, ಶ್ರೀ ಬಡಿಗೇರ್, ಬಸವರಾಜ್ ಹಳ್ಳಿಕೇರಿ ಯಶ್ವಂತ್ ಯಾವಗಲ್ ಸಿಬ್ಬಂದಿ ವರ್ಗದವರು  ಜಯಂತೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.