Gadag: ನಗರದ ಆದರ್ಶ ಶಿಕ್ಷಣ ಸಂಸ್ಥೆಯಿಂದ ಮುದ್ರಣಗೊಂಡ 2025 ಸಾಲಿನ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಚೇರ್ಮನ್ ಶ್ರೀ ಆನಂದ್ ಪೋತ್ನಿಸ್ ರವರು ಬಿಡುಗಡೆಗೊಳಿಸಿ ಮಾತನಾಡಿ ಈ ಒಂದು ದಿನದರ್ಶಿಕೆ ಸಂಸ್ಥೆಯ ಸಾಧನೆಗಳನ್ನು ಒಳಗೊಂಡಿದೆ ಅದರೊಂದಿಗೆ ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳಾದ ಪಿ.ಯು.ಸಿ, ಬಿ,ಕಾಂ. ಬಿ ಬಿ ಎ, ಬಿ ಸಿ ಎ, ಎಂ ಕಾಂ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಭಾವಚಿತ್ರ ಹಾಗೆ ವಿಶ್ವವಿದ್ಯಾಲಯದಿಂದ ಪ್ರಶಸ್ತಿ ಸಹಿತ ಪಾಸಾದ ವಿದ್ಯಾರ್ಥಿಗಳ ಫೋಟೋ ಅವರ ಸಾಧನೆ ಮಾಹಿತಿಯನ್ನು ಈ ಒಂದು ದಿನದರ್ಶಿಕೆಯಲ್ಲಿ ಮುದ್ರಣ ಗೊಳಿಸಲಾಗಿದ್ದು ಸಂಸ್ಥೆಯಿಂದ ಮುದ್ರಣ ಗೊಂಡಿದ್ದು ಬಹಳಷ್ಟು ಸಂತಸ ತಂದಿದೆ ಎಂದು ತಮ್ಮ ಉದ್ಘಾಟನೆ ನುಡಿಗಳಲ್ಲಿ ಹಂಚಿಕೊಂಡರು.
ದಿನದರ್ಶಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಆದರ್ಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ ವಿ ಕುಷ್ಟಗಿ ಕಾರ್ಯದರ್ಶಿಗಳಾದ ಶ್ರೀ ಎ.ಡಿ ಗೋಡಕಿಂಡಿ. ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊಫೆಸರ್ ಕೆ ಗಿರಿರಾಜ್ ಕುಮಾರ್ ಉಪ ಪ್ರಾಚಾರ್ಯರು ಹಾಗೂ ಐಕ್ಯೂಎಸಿ ಕೋಆರ್ಡಿನೇಟರ್ ಡಾ. ವಿ ಟಿ ನಾಯ್ಕರ್, ಬಿ ಬಿ ಎ ಹಾಗೂ ಬಿ ಸಿ ಎ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ ಲಿಂಗರಾಜ್ ರಶ್ಮಿ ಅಂಗ ಸಂಸ್ಥೆಗಳ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.