Gadag: ನಗರದ ಆದರ್ಶ ಶಿಕ್ಷಣ ಸಮಿತಿಯ ಶ್ರೀ ವಿ ಆರ್ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಸ್ವಚ್ಛ ಹಿ ಸೇವಾ ಕಾರ್ಯಕ್ರಮದ ಅಡಿಯಲ್ಲಿ ಎನ್ ಎಸ್ ಎಸ್ ವಿಭಾಗದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಆರಂಭದಲ್ಲಿ ಸ್ವಯಂಸೇವಕ್ಕಿ ವರ್ಷ ಅವರಿಂದ ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಿದರು.
ತದನಂತರ ಸ್ವಯಂಸೇವಕ ಸೇವಕಿಯರಿಂದ ಸ್ವಚ್ಛತಾ ಜಾಗೃತಿಯ ನೃತ್ಯ ಪ್ರದರ್ಶನವನ್ನು ನೀಡಿದರು.
ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ಬಿ.ಪಿ ಜೈನರ ಅವರು ಮಾತನಾಡಿ ದೇಶದಲ್ಲೆಡೆ ಈ ಸ್ವಚ್ಛ ಹಿ ಸೇವಾ ಕಾರ್ಯಕ್ರಮ ಸಪ್ಟಂಬರ್ 17 ರಿಂದ ಅಕ್ಟೋಬರ್ 2ರವರೆಗೆ ಅಂದರೆ ಹದಿನೈದು ದಿನಗಳವರೆಗೆ ಹಮ್ಮಿಕೊಂಡಿದ್ದು ಸ್ವಯಂಸೇವಕರು ಪೌರಕಾರ್ಮಿಕರನ್ನು ಗೌರವಿಸುವುದು, ವನಮೋತ್ಸವ ಕಾರ್ಯಕ್ರಮ ಆಯೋಜನೆ, ಐತಿಹಾಸಿಕ ದೇವಾಲಯಗಳು ಸ್ವಚ್ಛತಾ ಕಾರ್ಯ, ನಾಟಕಗಳ ಆಯೋಜನೆ ಜಾಗೃತಿಯನ್ನು ಮೂಡಿಸುವದು, ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆ ಅದರೊಂದಿಗೆ ನೃತ್ಯಗಳ ಮೂಲಕ ಜನರಲ್ಲಿ ಸ್ವಚ್ಛತೆಯ ಮಹತ್ವವನ್ನು ಸಾರುವಂಥ ಒಂದು ವಿನುತನ ಕಾರ್ಯಕ್ರಮ ಹಮ್ಮಿಕೊಂಡ ಎಲ್ಲ ಸ್ವಯಂಸೇವಕ ಸೇವಕರಿಗೆ ತಮ್ಮ ಮಾತುಗಳಲ್ಲಿ ಅಭಿನಂದನೆಗಳನ್ನ ಸಲ್ಲಿಸಿದರು. ಸ್ವಚ್ಛತೆಯ ಬಗ್ಗೆ ಯುವ ವಿದ್ಯಾರ್ಥಿಗಳು ಪಣತೊಟ್ಟರೆ ಈ ಒಂದು ಯೋಜನೆಯನ್ನು ಯಶಸ್ವಿಗೊಳಿಸಬೇಕು ಹೀಗಾಗಿ ತಾವೆಲ್ಲರೂ ತಮ್ಮಂದಿಷ್ಟು ಸಾಧ್ಯವೋ ಅಷ್ಟು ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಕಾರ್ಯದರ್ಶಿಗಳಾದ ಮನೋಜ್ ದಳಬಂಜನ್ ಶಿವಯೋಗಿ ಗಡ್ಡದ್ಮಠ ,ಆದರ್ಶ ಅಕ್ಕಿ, ಜನಕ ರೆಡ್ಡಿ, ಅಭಿಷೇಕ್ ಮಾಗಡಿ ಸ್ವಯಂಸೇವಕ ಸೇವಕರು ಉಪಸ್ಥಿತರಿದ್ದರು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಸ್ವಯಂ ಸೇವಕರಿಗೆ ವೇದಿಕೆ ಮೇಲೆ ಪ್ರಶಸ್ತಿಗಳನ್ನ ನೀಡಿ ಅಭಿನಂದಿಸಲಾಯಿತು.