ನಗರದ ಆದರ್ಶ ಶಿಕ್ಷಣ ಸಮಿತಿಯ ಶ್ರೀ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜು ಕಾಮರ್ಸ್ ನ ಐ ಕ್ಯೂ ಎ ಸಿ ಅಡಿಯಲ್ಲಿ ಮಹಿಳಾ ವಿಭಾಗದಿಂದ ಸಂಸ್ಥೆಯ ಅಧ್ಯಕ್ಷರಾದ ದಿ. ವಿಶ್ವನಾಥ್ ರಾಮಚಂದ್ರಪ್ಪ ಕುಷ್ಟಗಿ ಇವರ ಜನ್ಮ ಶತಮಾನೋತ್ಸವ ನಿಮಿತ್ಯ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಸೌಖ್ಯದ ಆಸ್ಪತ್ರೆಯ ಹಿರಿಯ ವೈದ್ಯಾಧಿಕರಗಳಾದ ಡಾ. ತೇಜಸ್ವಿನಿ ಹಿರೇಮಠ ರವರು ಸಸಿಗೆ ನೀರರೆಯುವ ಮೂಲಕ ಈ ಒಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಇವತ್ತಿನ ದಿನಮಾನಗಳಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಆರೋಗ್ಯದ ಮೇಲೆ ಹೆಚ್ಚಿನ ಗಮನ ಹರಿಸಬೇಕು ಅದರಲ್ಲೂ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳುವ ಮೂಲಕ ಯೋಗಾಸನ ಉತ್ತಮ ಆಹಾರ ಸೇವನೆ ಉತ್ತಮ ವಿಚಾರಗಳ ವಿನಿಮಯ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಹೇಳಿದರು.
ಸಭೆಯನ್ನ ಉದ್ದೇಶಿಸಿ ಮಾತನಾಡ ಮಹಿಳೆಯರು ಮತ್ತು ಹುಡುಗಿಯರು ಗುಣಮಟ್ಟದ ಆರೋಗ್ಯ ಸೇವೆಗಳಿಂದ ಪ್ರಯೋಜನ ಪಡೆಯುವುದನ್ನು ತಡೆಯುವ ಕೆಲವು ಸಾಮಾಜಿಕ-ಸಾಂಸ್ಕೃತಿಕ ಅಂಶಗಳು ಮತ್ತು ಅತ್ಯುತ್ತಮವಾದ ಆರೋಗ್ಯದ ಮಟ್ಟವನ್ನು ಸಾಧಿಸುವುದು ಪುರುಷರು ಮತ್ತು ಮಹಿಳೆಯರ ನಡುವಿನ ಅಸಮಾನ ಶಕ್ತಿ ಸಂಬಂಧಗಳು ಶಿಕ್ಷಣ ಮತ್ತು ಪಾವತಿಸಿದ ಉದ್ಯೋಗಾವಕಾಶಗಳನ್ನು ಕಡಿಮೆ ಮಾಡುವ ಸಾಮಾಜಿಕ ರೂಢಿಗಳು ಮಹಿಳೆಯರ ಸಂತಾನೋತ್ಪತ್ತಿ ಪಾತ್ರಗಳ ಮೇಲೆ ವಿಶೇಷ ಗಮನ ಮತ್ತು
ದೈಹಿಕ, ಲೈಂಗಿಕ ಮತ್ತು ಭಾವನಾತ್ಮಕ ಹಿಂಸೆಯ ಸಂಭಾವ್ಯ ಅಥವಾ ನಿಜವಾದ ಅನುಭವ ಹೀಗೆ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ತಮ್ಮ ಉಪನ್ಯಾಸದಲ್ಲಿ ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಎ.ಡಿ ಗೋಡಕಿಂಡಿಯವರು ವಹಿಸಿಕೊಂಡು ಇವತ್ತಿನ ದಿನಮಾನಗಳಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಈ ಆರೋಗ್ಯದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಯುಕ್ತವಾಗುತ್ತದೆ ಎಂದು ಕಾರ್ಯಕ್ರಮ ಸಂಘಟಿಕರಿಗೆ ಅಭಿನಂದನೆ ಸಲ್ಲಿಸಿದರು. ವೇದಿಕೆ ಮೇಲೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ ವಿ ಕುಷ್ಟಗಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಕೆ ಗಿರಿರಾಜಕುಮಾರ್ ಸ್ವಾಗತ ಕೋರಿದರು, ಮಹಿಳಾ ವಿಭಾಗದ ಮುಖ್ಯಸ್ಥರಾದ ಪ್ರೊ. ಸಲ್ಮಾ ಬೆಳಗಾಂ ಅತಿಥಿಗಳ ಪರಿಚಯವನ್ನು ನೆರವೇರಿಸಿದರು. ಇವಂದು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಬಿ ಕಾಂ, ಬಿ ಬಿ ಎ, ಮತ್ತು ಎಂ ಕಾಂ ಮಹಾವಿದ್ಯಾಲಯಗಳ ವಿದ್ಯಾರ್ಥಿನಿಯರು, ಅಂಗ ಸಂಸ್ಥೆಗಳ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗ , ಪಾಲಕರು ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಮುಖ್ಯ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ನಗರದ ಹಿರಿಯ ವೈದ್ಯಾಧಿಕಾರಿಗಳಾದ ಡಾ. ತೇಜಸ್ವಿ ಹಿರೇಮಠ ಅವರನ್ನು ಸಂಸ್ಥೆ ಹಾಗೂ ಮಹಾವಿದ್ಯಾಲಯದಿಂದ ಗೌರವಿಸಲಾಯಿತು.