ಗದಗ: ವಿಶೇಷ ಅಗತ್ಯವುಳ್ಳ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿದರೆ ಅವರಲ್ಲಿಯೂ ವಿಶೇಷ ಪ್ರತಿಭೆ, ಸಾಧನೆ ಹೊರಹೊಮ್ಮಲು ಸಾಧ್ಯ ಎಂದು ಉದ್ಯಮಿ ಸಂಕೇತ ಹೆಬಸೂರು ಹೇಳಿದರು.
ನಗರದ ಸೇವಾ ಭಾರತಿ ಟ್ರಸ್ಟ್ನ ಅರುಣೋದಯ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ಭಾನುವಾರ ಜರುಗಿದ ವಾಷಿರ್ಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಬೇಕಾಗಿರುವದು ಅನುಕಂಪ ಅಲ್ಲ ಅವಕಾಶ ಮತ್ತು ಪ್ರೋತ್ಸಾಹ. ಸಾಮಾನ್ಯ ಮಕ್ಕಳಿಗಿಂತಲೂ ವಿಶೇಷ ಅಗತ್ಯವುಳ್ಳ ಮಕ್ಕಳು ಸಾಹಸ, ಸಾಧನೆ ಮಾಡಿರುವದನ್ನು ನಾವಿಂದು ಕಾಣಬಹುದು. ಆದ್ದರಿಂದ ಇಂತಹ ಮಕ್ಕಳಿಗೆ ಪಾಲಕ ಪೋಷಕರು, ಸಮಾಜ ಗೌರವದಿಂದ ಕಾಣಬೇಕು ಎಂದರು.
ಉದ್ಯಮಿ ಸಾಗರ ಪವಾರ ಮಾತನಾಡಿ, ವಿಶೇಷ ಅಗತ್ಯವುಳ್ಳ ಮಕ್ಕಳ ೇಮಾಭಿವೃದ್ಧಿಗೆ ಶ್ರಮಿಸುತ್ತಿರುವ ಸೇವಾ ಭಾರತಿ ಟ್ರಸ್ಟ್ನ ಅರುಣೋದಯ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆ ನಿಜಕ್ಕೂ ಒಳ್ಳೆಯ ಹಾಗೂ ಮಾನವೀಯತೆ ಕಳಕಳಿಯಿಂದ ಕಾರ್ಯ ಮಾಡುತ್ತಿದೆ. ಶಾಲೆಗೆ ಸಹಾಯ ಸಹಕಾರ ಮಾಡಲಾಗುವುದು ಎಂದರು. ಸಾಧಕ ವಿದ್ಯಾಥಿರ್ಗಳನ್ನು ಸನ್ಮಾನಿಸಲಾಯಿತು. ವಿಶೇಷ ಮಕ್ಕಳಿಂದ ಸಾಂಸತಿಕ, ಮನರಂಜನೆ ಕಾರ್ಯಕ್ರಮಗಳು ಜರುಗಿದವು.
ತುಕಾರಾಮಸಿಂಗ್ ಜಮಾದಾರ, ಜಯರಾಜ ಮುಳಗುಂದ, ಡಾ.ಉಮೇಶ ಹಾದಿ, ಬಸವರಾಜ ಪಟ್ಟಣಶೆಟ್ಟಿ, ಮಲ್ಲಪ್ಪ ಹಕ್ಕಿ, ಜಗದೀಶ ಹಡಪದ ಇತರರು ಉಪಸ್ಥಿತಿ ಇದ್ದರು.