ಜಿಲ್ಲೆ

ಜಾತ್ರೆಯಲ್ಲಿ ಪ್ರಾಣಿಬಲಿ ನಿಲ್ಲಿಸಿ: ದಯಾನಂದ ಶ್ರೀಗಳು

Gadag - Shivanand Hiremath

ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಬೊಮ್ಮಸಾಗರ ಗ್ರಾಮದಲ್ಲಿ ಫೆ.20 ರಿಂದ ಫೆ.24 ರ ವರೆಗೆ ಜರಗುವ ದುರ್ಗಾದೇವಿ ಜಾತ್ರೆಯಲ್ಲಿ ಕೋಣ ಬಲಿಯನ್ನು ಜಿಲ್ಲಾಡಳಿತ ತಡೆಯಬೇಕು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಶ್ರೀಗಳು ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲೇ ಈ ಜಾತ್ರೆಯಲ್ಲಿ ಅತ್ಯಧಿಕ ಕೋಣ ಬಲಿ ನೀಡಲಾಗುತ್ತದೆ. ತಾಲೂಕು, ಜಿಲ್ಲೆ ಹಾಗೂ ಹೊರ ಜಿಲ್ಲೆಯಿಂದ ಕೋಣಗಳನ್ನು ತಂದು ಬಲಿ ಕೊಡಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ, ಜಿಲ್ಲಾಡಳಿತಕ್ಕೆ ಈಗಾಗಲೇ ಹೈಕೋರ್ಟ್ ಆದೇಶ ನೀಡಿದೆ. ಪ್ರಾಣಿ ಬಲಿ ತಡೆಯುವಂತೆ ನೀಡಿರುವ ಹೈಕೋರ್ಟ್ ಆದೇಶವನ್ನು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಪಾಲಿಸದೇ ಇದ್ದರೆ ನ್ಯಾಯಾಂಗ ನಿಂಧನೆ ಪ್ರಕರಣ ದಾಖಲಿಸಲಾಗುವುದು ಎಂದು ಶ್ರೀಗಳು ಹೇಳಿದರು.

ಪ್ರಾಣಿ ಬಲಿ ತಡೆಯುವಂತೆ ಫೆ. 20 ರಿಂದ ಗದಗ ಜಿಲ್ಲಾಡಳಿತ ಭವನದಿಂದ ಬೊಮ್ಮಸಾಗರ ವರೆಗೆ ಜಾಗೃತಿ ಮೆರವಣಿ ಹಮ್ಮಿಕೊಳ್ಳಲಾಗುವುದು. ಈ ಮೆರವಣಿಗೆ ಮೇಲೆ ದಾಳಿ ನಡೆಯುವ ಸಂಭವ ಇದ್ದು, ಪೊಲೀಸರು ರಕ್ಷಣೆ ನೀಡಬೇಕು, ಹೈಕೋರ್ಟ್ ಸೂಚನೆಯಂತೆ ಪ್ರಾಣಿಬಲಿ ಪ್ರತಿಬಂಧಕ ನಿಯಮವನ್ನು ಜಿಲ್ಲಾಡಳಿತ ಪಾಲೀಸಬೇಕು ಎಂದು ಹೇಳಿದರು.