oplus_2 
ಜಿಲ್ಲೆ

ಸಮಾನತೆ ರಥಯಾತ್ರೆ - ಸಮಾನತೆ ಬುತ್ತಿ ಕಾರ್ಯಕ್ರಮ: ಅನಿಲ ಮೆಣಸಿನಕಾಯಿ

Gadag - Shivanand Hiremath

ಸಮಾನತೆ ರಥಯಾತ್ರೆ - ಸಮಾನತೆ ಬುತ್ತಿ ಕಾರ್ಯಕ್ರಮ: ಅನಿಲ ಮೆಣಸಿನಕಾಯ

ವಿಜಯವಾಣಿ ಸುದ್ದಿಜಾಲ ಗದಗ

ಸಮಾಜದಲ್ಲಿ ಸಮಾನತೆ ಸೃಷ್ಟಿಸಲು ಏ.14 ರಿಂದ 15 ದಿನಗಳ ಕಾಲ ಸಮಾನತೆ ರಥಯಾತ್ರೆ ನಡೆಸಲಾಗುವುದು. ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಯಾತ್ರೆಗೆ ಚಾಲನೆ ನೀಡಲಾಗುವುದು. ಗ್ರಾಮಗಳಲ್ಲಿಯೂ ಈ ರಥಯಾತ್ರೆ ಜರುಗಲಿದೆ. ಪ್ರತಿಯೊಂದು ದಿನ ವಾಲ್ಮೀಕಿ ರಾಮಾಯಣ, ಭಜನೆ, ಅಂಬೇಡ್ಕರ್ ಸಿದ್ಧಾಂತಗಳ ಚರ್ಚೆ ಸೇರಿದಂತೆ ಹಲವು ವಿಷಯಗಳು ಚರ್ಚೆ ನಡೆಸಲಾಗುವುದು. ಪ್ರತಿ ದಿನ ಸಂಜೆ ಬುತ್ತಿ ಜಾತ್ರೆ ಮಾಡಲಾಗುವುದು ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಮಾನತೆ ಮಂದಿರ ನಿರ್ಮಾಣಕ್ಕೆ ಕುರ್ತಕೋಟಿ ಗ್ರಾಮದಲ್ಲಿ ಜನರು ಎರಡು ಎಕೆರೆ ಜಮೀನು ದಾನವಾಗಿ ಕೊಟ್ಟಿದ್ದಾರೆ. ಈ ಸಂಕಲ್ಪ ನೆರವೇರಿಸಲು ಗದಗ ಬೆಂಗಳೂರು ಸೇರಿದಂತೆ ಹಲವಾರು ದಾನಿಗಳು ಮಂದಿರ ನಿರ್ಮಿಸಲು ಸಹಕಾರ ನೀಡಲು ಮುಂದೆ ಬಂದಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಮಂದಿರ ನಿರ್ಮಾಣಕಾರ್ಯ ಪೂರ್ಣ ಗೊಳಿಸಲಾಗುವುದು ಎಂದುರು.

ಸಮಾನತೆ ರಥಯಾತ್ರೆಯಲ್ಲಿ ಬುದ್ಧ, ಬಸವ, ಅಂಬೇಡ್ಕರ್, ದಾಸರು ಸೇರಿದಂತೆ ಹಲವರ ಪ್ರತಿಮೆಗಳು ಮೆರವಣಿಗೆ ಮಾಡಲಾಗುವುದು. ಜಯಂತಿ ಮಾಡುವ ಮೂಲಕ ಕೇವಲ ಅವರ ಜಯಂತಿ ಮಹನೀಯರನ್ನು ಸ್ಮರಣೆ ಮಾಡಲಾಗುತ್ತದೇ ವಿನಹ, ಅವರ ಸ್ಮರಣೆ ನಿತ್ಯ ನಿರಂತರ ಆಗಬೇಕು. ಹಾಗಾಗಿ ಸಮಾನತೆ ಮಂದಿರ. ಈ ಮಂದಿರವು ಕೇವಲ ಪೂಜಾ ಸ್ಥಾನವಾಗಿ ಮಾಡುತ್ತಿಲ್ಲ. ಇಲ್ಲಿ ಜ್ಞಾನವನ್ನು ಪಸರಿಸುವ ಕಾರ್ಯಕ್ಕೆ ನಾಂದಿ ಹಾಡಲಾಗುತ್ತಿದೆ. ಹಾಗಾಗಿ ಮಂದಿರ ನಿರ್ಮಾಣ ಅನಿವಾರ್ಯ ಇದೆ ಎಂದರು.

ಸಮಾನತೆ ರಥಯಾತ್ರೆಯು ಯಾವುದೇ ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ. ರಾಜಕೀಯ ಹೊರತುಪಡಿಸಿ ಈ ರಥಯಾತ್ರೆ ನಡೆಸಲಾಗುವುದು. ರಥಯಾತ್ರೆ ಜತೆಗೆ ಬುತ್ತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ವಿವಿಧ ಗ್ರಾಮದಿಂದ ಬುತ್ತಿಯನ್ನು ಸಮರ್ಪಿಸಲು ಸ್ವಯಂ ಪ್ರೇರಿತರಾಗಿ ಮುಂದೆ ಬರುತ್ತಿದ್ದಾರೆ. ಈ ಯಾತ್ರೆಗೆ ಪಕ್ಷಾತೀತ, ಧರ್ಮಾತೀತವಾಗಿ ಎಲ್ಲರಿಗೂ ಆಹ್ವಾನ ಇದೆ ಎಂದು ಅನಿಲ ಮೆಣಸಿನಕಾಯಿ ತಿಳಿಸಿದರು.

ಜಿಲ್ಲಾಸ್ಪತ್ರೆಗೆ ಕೆ.ಎಚ್. ಪಾಟೀಲ ಅವರ ಹೆಸರು ನಾಮಕರಣ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅನಿಲ ಮೆಣಸಿನಕಾಯಿ, ಜನರ ಮನಸ್ಸಿನಲ್ಲಿ ಚಿರಸ್ಮರಣೀಯ ಕೆಲಸ ಮಾಡಿದ್ದೇ ಆದರೆ ಕಟ್ಟಡಗಳಿಗೆ ಹೆಸರು ನಾಮಕರಣ ಅವಶ್ಯಕತೆ ಇಲ್ಲ. ಹೆಸರಿಟ್ಟ ಮಾತ್ರಕ್ಕೆ ಜನರಿಗೆ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದಷ್ಟೇ ಉತ್ತರಿಸಿದರು.

ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ಅನಿಲ ಮೆಣಸಿನಕಾಯಿ ನೇತೃತ್ವದಲ್ಲಿ ಹಲವು ಕಾರ್ಯಕ್ರಮ ಜರುಗಿವೆ. ಕಳೆದ ವರ್ಷ ಅಂಬೇಡ್ಕರ್ ಜಯಂತಿ ದಿನದಂದೇ ಸಮಾನತೆ ಮಂದಿರ ನಿರ್ಮಾಣಕ್ಕೆ ಘೋಷಣೆ ಮಾಡಿದ್ದರು. ಈ ಹಿನ್ನೆಲೆ ಅಖಿಲ ಭಾರತ ಸಮಾನತೆ ಪ್ರತಿಷ್ಠಾನದ ವತಿಯಿಂದ ಸಮಾನತೆ ರಥಯಾತ್ರೆ 15 ದಿನಗಳ ಕಾಲ ಜಿಲ್ಲೆಯಾದ್ಯಂತ ನಡೆಸಲಿದ್ದೇವೆ. ಕನಕದಾಸ, ಶಿಶುನಾಳ ಷರೀಫ್ ಸೇರಿದಂತೆ ಹಲವು, ದಾರ್ಶನಿಕರ ಮಹನೀಯರ ಪ್ರತಿಮೆಗಳ ಮೆರವಣಿಗೆ ನಡೆಲಸಾಗುವುದು ಎಂದರು.

ರಾಘವೇಂದ್ರ ಯಳವತ್ತಿ ಮಾತನಾಡಿ, ಅನಿಲ ಮೆಣಸಿನಕಾಯಿ ಅವರು ಜನರ ಮನಸ್ಸಿನಲ್ಲಿ ಇದ್ದಾರೆ. ಅವರ ನಿರ್ಧಾರದಂತೆ ಸಮಾನತೆ ಯಾತ್ರೆ ಯಶಸ್ವಿ ಎಲ್ಲರೂ ಶ್ರಮಿಸೋಣ ಎಂದು ಹೇಳಿದರು.

ಪರಮೇಶ ಲಮಾಣಿ, ಮುತ್ತು ಮುಷಿಗೇರಿ, ವಸಂತ ಪಡಗದ, ರುದ್ರಣ್ಣ ಗುಳಗುಳಿ ಇತರರು ಇದ್ದರು.