ಜಿಲ್ಲೆ

ಪೌಷ್ಠಿಕ ಆಹಾರ ಸೇವನೆಯಿಂದ ಆರೋಗ್ಯವಂತ (ಶಿಶು) ಮಕ್ಕಳನ್ನು ಪಡೆಯಲು ಸಾಧ್ಯ : ಶಿದ್ದಪ್ಪ ಲಿಂಗದಾಳ

Gadag - Shivanand Hiremath

ಗದಗ: ಪೌಷ್ಠಿಕ ಆಹಾರಗಳನ್ನು ಸೇವಿಸುತ್ತಿಲ್ಲವಾದ್ದರಿಂದ ಅಶಕ್ತ ಮತ್ತು ಅನಾರೋಗ್ಯ ಶಿಶುಗಳು ಜನನವಾಗುತ್ತಿವೆ ಆದ್ದರಿಂದ ಗರ್ಭಿಣಿಯರು ಗರ್ಭಾವಸ್ತೆಯಲ್ಲಿ ಉತ್ತಮ ಪೌಷ್ಠಿಕ ಆಹಾರ ಸೇವಿಸುವುದರಿಂದ ತಾಯಿ ಮಗುವಿನ ಆರೋಗ್ಯ ಉತ್ತಮ ಗೊಳ್ಳುತ್ತದೆ, ಹೆರಿಗೆ ಸಹಜವಾಗುತ್ತದೆ ಆರೋಗ್ಯವಂತ ಶಿಶು ಮಕ್ಕಳನ್ನು ಪಡೆಯಲು ಸಾಧ್ಯವೆಂದು ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶಿದ್ದಪ್ಪ ಎನ್.ಲಿಂಗದಾಳ ಹೇಳಿದರು

ಅವರು ಕರ್ನಾಟಕ ಸರ್ಕಾರ ಜಿಲ್ಲಾಆಡಳಿತ ಜಿಲ್ಲಾಪಂಚಾಯತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ,ಗದಗ ತಾಲೂಕ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಟಗೇರಿ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ ೮.೧೦.೨೦೨೪ ರಂದು ಅಡವಿಸೋಮಾಪೂರ ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯವಂತ ಶಿಶು(ಮಕ್ಕಳ) ಪ್ರದರ್ಶನ (ಬೇಬಿ ಶೋ) ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಕುಟುಂಬ ಯೋಜನೆಯ ಮಾರ್ಗದರ್ಶದಂತೆ ಪ್ರತಿಯೊಂದು ಕುಟುಂಬ ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ೩ ವರ್ಷ ಅಂತರವನ್ನು ಕಾಪಾಡಿಕೊಂಡರೆ ತಾಯಿ ಹಾಗೂ ಮಗುವಿನ ಆರೋಗ್ಯವು ಉತ್ತಮಗೊಳ್ಳುತ್ತದೆ. ಗರ್ಭಿಣಿಗೆ ೨ಟಿಟಿ ಮಗುವಿಗೆ ಲಸಿಕೆಗಳನ್ನು ಕಾಲಕಾಲಕ್ಕೆ ತಪ್ಪದೆ ಹಾಕಿಸಿಕೊಳ್ಳಬೇಕು. ಹೆಣ್ಣು ಮಕ್ಕಳಿಗೆ ೧೮ ವರ್ಷ ಪೂರೈಸಿದ ನಂತರ ವಿವಾಹ ವಿವಾಹ ಮಾಡಬೇಕು. ಇದರಿಂದ ಮುಂದೆ ಹೆಣ್ಣುಮಗುವು ಆರೋಗ್ಯದ ಬಗ್ಗೆ, ಪ್ರಭುದ್ದತೆ ಹೊಂದಲು ಸಾಧ್ಯ ಎಂದರು. ಕುಟುಂಬ ಕಲ್ಯಾಣಕ್ಕಾಗಿ ಅಗತ್ಯವಿರುವ ಎಲ್ಲ ಸೌಲಭ್ಯಗಳು ಲಭ್ಯವಿವೆ, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.

ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಶೀಲಾ ಮಳೇಕರ ಮಾತನಾಡಿ ಉತ್ತಮ ಆರೋಗ್ಯವಂತಹ ಶಿಶುಗಳನ್ನು ಪಡೆಯಲು ಗರ್ಭಿಣಿಯರು ಪೌಷ್ಠಿಕ ಆಹಾರ ಸೇವೆ,ಆರೋಗ್ಯ ತಪಾಸಣೆ ಮತ್ತು ಒಳ್ಳೆಯ ವಿಚಾರ ದಿಂದ ಆರೋಗ್ಯ ವಂತ ಮಕ್ಕಳನ್ನು ಪಡೆಯಬಹುದಾಗಿದೆ. ಆದ್ದರಿಂತ ತಾವೇಲ್ಲರು ವೈದ್ಯರ ಮಾರ್ಗದರ್ಶನದಂತೆ ಪ್ರತಿಯೊಂದು ಹೆರಿಗೆಗಳು ಆಸ್ಪತ್ರೆಯಲ್ಲಿ ಆಗಬೇಕು ನಿಮ್ಮ ಸೇವೆಗಾಗಿ ಆರೋಗ್ಯ ಇಲಾಖೆಯು ಸದಾ ಸನ್ನದ್ದವಾಗಿರುತ್ತದೆ. ಹೆಣ್ಣಾಗಲಿ ಗಂಡಾಗಲಿ ಎರಡು ಮಕ್ಕಳು ಸಾಕು ಎಂದು ಹೇಳಿದರು
ಹಿರಿಯ ಆರೋಗ್ಯ ನಿರಿಕ್ಷಣಾಧಿಕಾರಿ ವಾಯ್ ಎನ್ ಕಡೆಮನಿ ಮಾತನಾಡಿ ಪೌಷ್ಠಿಕ ಆಹಾರ ವೈದ್ಯಕಿಯ ಸೇವೆ ಪಡೆಯುವುದರಿಂದ ತಾಯಿ ಮತ್ತು ಶಿಶುವಿನ ಮರಣ ತಪ್ಪಿಸಲು ಸಾಧ್ಯ ಆದ್ದರಿಂದ ಆರೋಗ್ಯ ಇಲಾಖೆಯು ನೀಡುವ ವೈದ್ಯಕಿಯ ಸೇವೆಗಳ ಸೌಲಭ್ಯಗಳನ್ನು ಪಡೆಯಬೇಕು ಯಾವುದೇ ಮಗು ಲಸಿಕೆಯಿಂದ ವಂಚಿತವಾಗಬಾರದುಮತ್ತು ಯಾವುದೇ ಹೆರಿಗೆ ಮನೆಯಲ್ಲಿ ಆಗಬಾರದು ಆಶಾ ಕಾರ್ಯಕರ್ತೆಯರು ಉತ್ತಮ ಸೇವೆಗೆ ಮತ್ತು ದಾಖಲಾತಿಗೆ ಹೆಚ್ಚು ಮಹತ್ವವನ್ನು ನೀಡಬೇಕೆಂದು ಹೇಳಿದರು
ಹಿರಿಯ ಆರೋಗ್ಯ ನಿರಿಕ್ಷಣಾಧಿಕಾರಿ ನಾಗರಾಜ ಜ್ಯೋಷಿ ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸವಿತಾ ಪವಾರ ಮಾತನಾಡಿ ಪ್ರತಿ ಕುಟುಂಬ ಮಗುವಿನ ಅಂತರವನ್ನು ಕಾಪಾಡಿಕೊಳ್ಳಬೇಕು. ಶಿಶುವಿಗೆ ಮೊದಲನೆಯ ಎದೆಹಾಲನ್ನೂಣಿಸಬೇಕು ಅದರಲ್ಲಿ ರೋಗನಿರೋಧ ಶಕ್ತಿ ಇರುತ್ತದೆ ಶಿಶುಗಳು ಆರೋಗ್ಯವಂತರಾಗಿ ಬೇಳೆಯುತ್ತಾರೆ ಎಂದು ಹೇಳಿದರು.

ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ವರ್ಷಾ ಬ್ಯಾಲಿಹಾಳ ಅಧ್ಯಕ್ಷತೆಯನ್ನು ವಹಿಸಿದ್ದರು ಕಾರ್ಯಕ್ರಮದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆಯನ್ನು ಅಭಿನಂದಿಸಿ ಪ್ರೋತ್ಸಾಹಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಶ್ರೀಮತಿ ಅನಸವ್ವ ಲಿಂಗಾಪೂರ. ಸಮುದಾಯ ಆರೋಗ್ಯಾಧಿಕಾರಿ ಶ್ರೀಮತಿ ಲೂದಿಯಾ ಕೆ ಮೀನಾಕ್ಷಿ ವಡ್ಡರ ಲಲಿತಾ ಅಂಗಡಿ ಸಾವಿತ್ರಿ ಜಡಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು