ಗದಗ: ಗದಗಿನ ಸಿ ಎಸ್ ಪಾಟೀಲ್ ಹೈಸ್ಕೂಲ್ ನಲ್ಲಿ 34 ವರ್ಷಗಳ ಕಾಲ ಮುಖ್ಯೋಧ್ಯಾಪಕ ರಾಗಿ ಕೆ ಬಿ ಭಜಂತ್ರಿ ಅವರು ಮಾಡಿದ ಸೇವೆ ಅನನ್ಯ ಎಂದು ಡಾ. ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ಹೇಳಿದರು, ಶ್ರೀ ಅಲ್ಲಂಪ್ರಭು ಶಿಕ್ಷಣ ಸಂಸ್ಥೆಯ ಶ್ರೀ ಸಿದ್ದೇಶ್ವರ ಕನ್ನಡ ಮಾಧ್ಯಮಿಕ ಪ್ರಾಥಮಿಕ ಶಾಲೆ ಹಾಗೂ ಶ್ರೀ ಬಸವೇಶ್ವರ ಪ್ರೌಢ ಶಾಲೆಯ 25ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು 7ನೇ ಹಾಗೂ 10ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ನಿವೃತ್ತರಾದ ಸಿ ಎಸ್ ಪಾಟೀಲ್ ಹೈಸ್ಕೂಲಿನ ಮುಖ್ಯೋಧ್ಯಾಪಕರಾದ ಶ್ರೀ ಕೆ ಬಿ ಭಜಂತ್ರಿಯವರಿಗೆ ಸನ್ಮಾನ ನೆರವೇರಿಸಿ ಅವರು ಆಶೀರ್ವಚನ ನೀಡುತ್ತಾ ಕೆ ಬಿ ಭಜಂತ್ರಿಯವರು ಮುಖ್ಯೋಧ್ಯಾಪಕರಾಗಿ ಶಿಕ್ಷಕರಾಗಿ ಮಾಡಿದ ಸೇವೆ ಸದಾ ನೆನಪಿನಲ್ಲಿ ಇಡುವಂತಾಗಿದೆ ಎಂದು ಅವರು ಹೇಳಿದರು . ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ ಬಿ ಭಜಂತ್ರಿ ಯವರು 34 ವರ್ಷಗಳ ಕಾಲ ಶಿಕ್ಷಕರಾಗಿ ಮುಖ್ಯೋಧ್ಯಾಪಕರಾಗಿ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ ಎಂದ ಅವರು ಫಲಾ ಅಪೇಕ್ಷೆ ಇಲ್ಲದೆ ಕೆಲಸ ಕಾರ್ಯಗಳನ್ನು ಮಾಡುವುದರಿಂದ ಸಮಾಜ ಅಂಥವರನ್ನು ಸದಾ ಸ್ಮರಿಸುತ್ತದೆ ಎಂದು ಅವರು ಹೇಳಿದರು. ಸಮಾರಂಭದಲ್ಲಿ ರಾಯಬಾಗ್ ಶಾಸಕ ಶ್ರೀ ಡಿ ಎಂ ಐಹೊಳೆ, ಬಿಜೆಪಿ ರಾಜ ಕಾರ್ಯದರ್ಶಿಗಳು ಶ್ರೀ ಪಿ ರಾಜೀವ್, ಬಸಪ್ಪ ಹಾಳಾಜೆ, ಆರ್ ಎಸ್ ಸೀತಾರಾಮು,