ವಿಜಯವಾಣಿ ಸುದ್ದಿಜಾಲ ಗದಗ
ಭಾರತೀಯ ಹಬ್ಬಗಳು, ಆಚರಣೆಗಳು ನೆಲಮೂಲದ ಸಂಸತಿಗಳನ್ನು ಪಸರಿಸುತ್ತವೆ. ಸಾಮರಸ್ಯದೆಡೆಗೆ ನಮ್ಮನ್ನು ಕೊಂಡೊಯ್ಯುತ್ತವೆ ಎಂದು ಆಧ್ಯಾತ್ಮ ವಿಧ್ಯಾಶ್ರಮದ ಶರಣೆ ಮೈತ್ರಾದೇವಿ ಹೇಳಿದರು.
ನವನಗರ ೇಮಾಭಿವೃದ್ಧಿ ಸಂದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸೀಗೆ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ಬದುಕಿಗೆ ಮಣ್ಣೇ ಮೂಲ ಆಧಾರ. ಮಣ್ಣಿನಿಂದ ವಿವಿಧ ಮೂತಿರ್ಗಳನ್ನು ನಿಮಿರ್ಸುವ ಮೂಲಕ ಮಣ್ಣಿನ ಆರಾಧನೆಯನ್ನು ಮಾಡಲಾಗುತ್ತಿದೆ. ಭೂಮಿತಾಯಿಯನ್ನು ಆರಾಈಜಿಸುವ ಮೂಲಕ ಋಣವನ್ನು ತೀರಿಸುವ ಆಶಯದೊಂದಿಗೆ ಈ ಹಬ್ಬವನ್ನು ಸಡಗರದಿಂದ ಆಚರಿಸುತ್ತ ಬಂದಿದ್ದೇವೆ. ಭಾರತೀಯ ಹಬ್ಬ ಹರಿದಿನಗಳು ಸಾಮರಸ್ಯದ ಸಂಕೇತಗಳಾಗಿವೆ ಎಂದು ತಿಳಿಸಿದರು.
ಭಾರತೀಯ ಸಂಸತಿ ಕುರಿತು ಉಪನ್ಯಾಸ ನೀಡಿದ ಸಾಹಿತಿ ಮಾ ವಸ್ತ್ರದ, ಸಂಸತಿಯನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವ ಮಹತ್ತರ ಜವಾಬ್ದಾರಿ ಹೆಣ್ಣುಮಕ್ಕಳದ್ದಾಗಿದೆ. ಬಹುತೇಕ ಹಬ್ಬಗಳು ಸ್ತ್ರೀಶಕ್ತಿಯ ಆರಾಧನೆಯಾಗಿದೆ. ಸಂತೋಷ, ಸಡಗರ, ಸಾಮರಸ್ಯಗಳನ್ನು ಇಮ್ಮಡಿಗೊಳಿಸುವದು ಹಬ್ಬದ ಮೂಲ ಉದ್ದೇಶಗಳಾಗಿವೆ. ಈ ಹಿನ್ನೆಲೆಯಲ್ಲಿ ನಮ್ಮ ಹಿರಿಯರು ವೈಜ್ಞಾನಿಕವಾಗಿ ಈ ಆಚರಣೆಗಳನ್ನು ಜಾರಿತರುವ ಮೂಲಕ ಸಮಾಜದಲ್ಲಿ ಐಕ್ಯತೆಯನ್ನು ಮೂಡಿಸುವ ಕಾರ್ಯವನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಲ್. ಡಿ. ಚಂದಾವರಿ, ನಗರಸಭೆಯ ಇಂಜನೀಯರ ಬಂಡಿವಡ್ಡರ, ಕವಿವಿ ಸಿಂಡಿಕೇಟ ಸದಸ್ಯ ಬಿ. ಬಿ. ಹೊಳಗುಂದಿ, ಜಗದೀಶ ಪೂಜಾರ, ವಿಶ್ವನಾಥ ಕಮ್ಮಾರ, ಲಾವಣ್ಯ ಬ್ಯಾಗೋಟಿ ಅವರನ್ನು ಸನ್ಮಾನಿಸಲಾಯಿತು. ಡಿ. ಎಸ್.ತಳವಾರ, ಜಿಲ್ಲಾ ಕಸಾಪ ಅಧ್ಯ ವಿವೇಕಾನಂದಗೌಡ ಪಾಟೀಲ, ಪಿ. ಡಿ. ಕನ್ಯಾಳ, ಉಮೇಶ ದಲಭಂಜನ, ಪಿ. ಬಿ. ಹೊಂಬಾಳಿಮಠ, ವೀಣಾ ಸೋನಾರ, ಮಲ್ಲಿಕಾರ್ಜುನ ಚಳಗೇರಿ, ಕಿರಣ ಬಸರಿ, ಗಂಗಾ ಬೆಲೇರಿ, ವಿಜಯಲಕ್ಷಿ$್ಮ ಮಾಂಡ್ರೆ, ಪರಿಮಳಾ ಸಾಸ್ವಿಹಳ್ಳಿ, ಮಾಲಾ ಶಿರೋಳ ಇತರರು ಇದ್ದರು.