ಜಿಲ್ಲೆ

ಕನ್ನಡ ಭಾಷೆ ಉಳಿಸಿ ಬೆಳೆಸುವ ಕಾರ್ಯ ಎಲ್ಲೆಡೆ ನಡೆಯಲಿ: ಶೋಭಾ ಮೇಟಿ

Gadag - Shivanand Hiremath

ಗದಗ: ಕನ್ನಡ ನಮ್ಮ ಉಸಿರು ಕನ್ನಡ ಭಾಷೆಗೆ ತನ್ನದೇ ಆದ ಅಸ್ಮಿತೆ ಇದ್ದು, ಅದು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಈಗ ಕನ್ನಡವನ್ನು ಬಳಸುವ ಅವಶ್ಯಕತೆಗಿಂತ ಎಲ್ಲರೂ ಕನ್ನಡತನವನ್ನು ಬಳಸಿಕೊಂಡಾಗ ಮಾತ್ರ ಕನ್ನಡವನ್ನು ಕಾಪಾಡಲು ಸಾಧ್ಯ ಎಂದು, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರು, ಜಿಲ್ಲಾ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕವಿತ್ರಿ ಶ್ರೀಮತಿ ಶೋಭಾ ಬಸವರಾಜ ಮೇಟಿ ಅವರು ಹೇಳಿದರು.

ನಗರದ ಮುಳಗುಂದ ನಾಕಾ ಬಳಿಯ ಶ್ರೀಅಡವಿಂದ್ರಸ್ವಾಮಿ ಮಠದ ಶಿವಾನುಭವ ಸಮಿತಿ ಜಿಲ್ಲಾ ಕರ್ನಾಟಕ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ, ಶ್ರೀಮಠದ 341ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ನಿಮಿತ್ತ ಏರ್ಪಡಿಸಿದ್ದ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಜಿಲ್ಲಾ ಮಟ್ಟದ ಮಹಿಳಾ ಕವಿಗೋಷ್ಠಿ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಕನ್ನಡ ಸಾಹಿತ್ಯ ಓದಿಕೊಳ್ಳಬೇಕು, ಕನ್ನಡ ಸಂಸ್ಕತಿ ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಿವಾನುಭವ ಸಮಿತಿ ಹಾಗೂ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಮಕ್ಕಳ ಸಾಹಿತಿ, ಕವಿಗಳಾದ ಡಾ.ರಾಜೇಂದ್ರ ಎಸ್. ಗಡಾದ ಅವರು ಕನ್ನಡ ಮತ್ತು ಭಾಷೆ ಕುರಿತು ಮಾತನಾಡಿ, ಕನ್ನಡವು ನಮ್ಮ ಬಾಂಧವ್ಯ ಹೆಮ್ಮೆ ಮತ್ತು ಅಸ್ತಿತ್ವದ ಗುರುತಾಗಿದ್ದು, ಕನ್ನಡ ನಾಡು, ನುಡಿ, ಸಂಸ್ಕöÈತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ನಾಡು ಸಾಕಷ್ಟು ರಾಜಮನೆತನಗಳನ್ನು, ಅರಸರನ್ನು ಹೊಂದಿದAತೆ ಅನೇಕ ಕವಿ, ಕಲಾವಿದರನ್ನು ಹೊಂದಿರುವ ಪುಣ್ಯ ಭೂಮಿಯಾಗಿದೆ ಎಂದು ಹೇಳಿದರು.

ಬೇಂದ್ರೆ, ಕುವೆಂಪು, ಕರ್ಕಿ ಗೋವಿಂದ್ ಪೈ, ಸಿದ್ದಯ್ಯ ಪುರಾಣಿಕ, ಹುಯಿಲಗೋಳ ನಾರಾಯಣರಾಯರು, ನಿಸಾರ್ ಅಹ್ಮದ್, ಜಿ.ಪಿ. ರಾಜರತ್ನಂ ಮೊದಲಾದವರು ತಮ್ಮ ಕಾವ್ಯದ ಮೂಲಕ ಹೇಗೆ ಕನ್ನಡವನ್ನು ಕಟ್ಟುವ ಕಾರ್ಯ ಕೈಗೊಂಡರೆAಬುದನ್ನು ಅನೇಕ ಉದಾಹರಣೆಗಳ ಮೂಲಕ ವಿವರಿಸಿ, ಕವಿಗೋಷ್ಠಿಯಲ್ಲಿ ಮಂಡಿಸಲಾದ ಕವಿತೆಗಳನ್ನು ಅವಲೋಕಿಸಿ ಇದೊಂದು ಸ್ವಾಗತಾರ್ಹ ಮಹಿಳಾ ಕವಿಗೋಷ್ಠಿಯಾಗಿದ್ದು, ಇಲ್ಲಿ ಉತ್ತಮ ಕವಿತೆಗಳ ಮಂಡನೆ ಆಗಿದೆ ಎಂದು ಕವಿತ್ರಿಯರನ್ನು ಶ್ಲಾಘಿಸಿದರು.

ಮಹಿಳಾ ಕವಿಗೋಷ್ಠಿಯಲ್ಲಿ ಪ್ರೊ.ಶಕುಂತಲಾ ಸಿಂಧೂರ, ಡಾ.ರಶ್ಮಿ ಅಂಗಡಿ, ಡಾ.ಪದ್ಮಾ ಕಬಾಡಿ, ಶ್ರೀಮತಿ ಜ್ಯೋತಿ ಎಂ. ಲೋಣಿ, ನೀಲಮ್ಮ ಅಂಗಡಿ, ರತ್ನಾ ಬದಿ, ಶಾರದಾ ಬಾಣದ, ಗೀತಾ ಹೂಗಾರ ಅವರು ಸ್ವರಚಿತ ನಾಡಪ್ರಭು ಬಿಂಬಿಸುವ ಕವಿತೆಗಳನ್ನು ಮಂಡಿಸಿದರು.

ಶ್ರೀಮತಿ ಮಂಗಳಾ ಯಾನಮಶೆಟ್ಟಿ, ಎಂ.ವಿ. ಕುಂದ್ರಾಳಹಿರೇಮಠ, ಕುಮಾರಿ ಆದ್ಯಾ, ಕುಮಾರಿ ಮನಸ್ವಿ ಅವರು ಕನ್ನಡ ನಾಡು-ನುಡಿ ಕುರಿತಾದ ಗೀತೆಗಳನ್ನು ಗಾಯನದ ಮೂಲಕ ಪ್ರಸ್ತುತಪಡಿಸಿದರು.

ಸಾನಿಧ್ಯ ವಹಿಸಿದ್ದ ಶ್ರೀಮಠದ ಧರ್ಮದರ್ಶಿಗಳಾದ ವೇ.ಮೂ. ಶ್ರೀಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ ಅವರು ಮಾತನಾಡಿ, ಕನ್ನಡ ರಾಜ್ಯೋತ್ಸವ ಆಚರಿಸುವುದು ಕನ್ನಡ ಅಭಿಮಾನದ ಸಂಕೇತ. ಕನ್ನಡ ಭಾಷೆಯು ಕರ್ನಾಟಕದ ಅಧಿಕೃತ ಭಾಷೆಯಾಗಿದ್ದು, ಇದು ಶ್ರೀಮಂತ ಸಾಹಿತ್ಯ, ಸಂಸ್ಕöÈತಿ ಮತ್ತು ಪರಂಪರೆಯ ಪ್ರತೀಕವಾಗಿದೆ ಎಂದರು.

ಗಣ್ಯ ವ್ಯಾಪಾರಸ್ಥರಾದ ವಿನೋದ್ ಕವಲನಾಯಕ್, ಕುರಟ್ಟಿ ದಂಪತಿಗಳು ವೇದಿಕೆಯಲ್ಲಿದ್ದರು.

ಶ್ರೀಮತಿ ಗೀತಾ ಹೂಗಾg ಪ್ರಾರ್ಥಿಸಿದರು. ಸಮಿತಿ ಕಾರ್ಯದರ್ಶಿಗಳಾದ ಪ್ರಭುಗೌಡ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಬಿ. ಪಾಟೀಲ ವಂದಿಸಿದರು.

ಇದೇ ಸಂದರ್ಭದಲ್ಲಿ ಅಂತಾರಾಷ್ಟಿçÃಯ ವಿಶ್ವೇಶ್ವರಯ್ಯ ಪ್ರಶಸ್ತಿಗೆ ಭಾಜನರಾದ ಸಾಹಿತಿ ಡಾ.ರಾಜೇಂದ್ರ ಗಡಾದ ಅವರನ್ನು, ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಕವಿತ್ರಿ ಶೋಭಾ ಬಸವರಾಜ ಮೇಟಿ ಅವರನ್ನು ಶ್ರೀಮಠದ ಪರವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯರಾದ ಪ್ರೊ. ಕೆ.ಎಚ್. ಬೇಲೂರು, ಬಿ.ಎಂ. ಬಿಳೆಯಲಿ, ಶ್ರೀಮತಿ ಸುಶೀಲಾ ಕೋಟಿ, ನಿಂಗಪ್ಪ ಬಳಿಗಾರ, ಎಲ್,ಎಸ್, ನೀಲಗುಂದ, ವೀರೇಶ್ವರ ಸ್ವಾಮಿಗಳು ಹೊಸಳ್ಳಿಮಠ, ನಿಡುಗುಂದಿ, ಶ್ರೀಮತಿಯಶೋಧಾ ಗಿಡ್ನಂದಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.