ಜಿಲ್ಲೆ

ಅ. 3 ರಿಂದ ಅಡವೀಂದ್ರ ಸ್ವಾಮಿ ಮಠದಲ್ಲಿ ದಸರಾ ಮಹೋತ್ಸವ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ನಗರದ ಅಡವೀಂದ್ರ ಸ್ವಾಮಿ ಮಠದಲ್ಲಿ ಅ.3 ರಿಂದ 12ರವರೆಗೆ ದಸರಾ ಮಹೋತ್ಸವದ 44ನೇ ವರ್ಷದ ಪುರಾಣ ಪ್ರವಚನ ಹಾಗೂ 10ನೇ ವರ್ಷದ ಅನ್ನಪೂರ್ಣೇಶ್ವರಿ ದೇವಿಯ ಮಹಾರಥೋತ್ಸವದ ಅಂಗವಾಗಿ ವಿವಿಧ ಧಾಮಿರ್ಕ ಕಾರ್ಯಕ್ರಮಗಳು ಜರುಗಲಿವೆ ಎಂದು ಜಾತ್ರಾ ಮಹೋತ್ಸ ಸಮಿತಿ ಅಧ್ಯ ಬಸವರಾಜ ಪಲ್ಲೇದ ಹೇಳಿದರು.
ರವಿವಾರ ಮಠದಲ್ಲಿ ಜಾತ್ರಾ ಮಹೋತ್ಸವ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಡಾ.ರಾಜಗುರು ಗುರುಸ್ವಾಮಿ ಕಲಕೇರಿ, ಚನ್ನಬಸಯ್ಯಶಾಸ್ತ್ರಿ ಹೇಮಗಿರಿಮಠ ಅವರಿಂದ ಪುರಾಣ ಪಠಣ, ಸುಕ್ರುಸಾಬ ಮುಲ್ಲಾ, ಜಗನ್ನಾಥ ಕಲಬುಗಿರ್, ಗುರುನಾಥ ಸುತಾರ, ಎಸ್​. ಜಿ. ಭಜಂತ್ರಿ ಸಂಗೀತ ಕಲಾ ಬಳಗದಿಂದ ಸಂಗೀತ ಜರುಗುವದು. ಅ. 3 ರಂದು ಗುರುವಾರ ಬೆಳಗ್ಗೆ 9 ಗಂಟೆಗೆ ಧರ್ಮ ಧ್ವಜಾರೋಹಣ ಕಾರ್ಯಕ್ರಮವು ಅಡ್ನೂರ ಅಭಿನವ ಪಂಚಾರ ಶಿವಾಚಾರ್ಯ ಶ್ರೀಗಳು ಮತ್ತು ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ ಅವರ ಸಾನ್ನಿಧ್ಯದಲ್ಲಿ ಜರಗುವುದು ಎಂದರು.
ಸಂಜೆ 6&30 ಗಂಟೆಗೆ ಟಸ್ಥಾಪನೆ ಹಾಗೂ ಪುರಾಣ ಪ್ರಾರಂಭೋತ್ಸವದ ಸಾನ್ನಿಧ್ಯವನ್ನು ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಶ್ರೀಗಳು ವಹಿಸುವರು. ಶೋಭಾ ಬಿರಾದಾರ ಉದ್ಘಾಟನೆ ನೆರವೇರಿಸುವರು ಎಂದು ತಿಳಿಸಿದರು.
ಮಹಿಳಾ ಸಮಿತಿಯ ಅಧ್ಯೆ ಲೀಲಾವತಿ ಬಿಳೇಯಲಿ, ಪೂಜಾ ಸಮಿತಿಯ ಅಧ್ಯ ಶರಣಯ್ಯ ಶಾಸ್ತ್ರಿ ಶಿವಪ್ಪಯ್ಯನಮಠ, ಶಿವಾನುಭವ ಗೋಷ್ಠಿ ಸಮಿತಿ ಅಧ್ಯ ಡಾ. ಎಸ್​. ಕೆ. ನಾಲತ್ವಾಡಮಠ ಇತರರು ಇದ್ದರು. ಮಹಿಳಾ ಸಮಿತಿಯ ಪ್ರಧಾನ ಕಾರ್ಯದಶಿರ್ ಗೀತಾ ಹೂಗಾರ, ಕೋಶಾಧ್ಯೆ ಸುವರ್ಣಾ ಮದರಿಮಠ, ಶಾಂತಾಬಾಯಿ ಬಾಕಳೆ ಇತರರು ಇದ್ದರುೋ