ಜಿಲ್ಲೆ

ಗದಗ ಜಿಲ್ಲೆಗೆ ಎಂ.ಪಿ. ಮಾರುತಿ ಸೇವೆ ಅನನ್ಯ: ಡಾ. ಬಸವರಾಜ ಧಾರವಾಡ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಎಂ. ಪಿ. ಮಾರುತಿಯವರ ಸೇವೆ ಅನನ್ಯ ಎಂದು ಗದಗ ಜಿಲ್ಲಾ ಸಮಾನ ಮನಸ್ಕ ಗೆಳೆಯರ ಬಳಗದ ಡಾ. ಬಸವರಾಜ ಧಾರವಾಡ ಹೇಳಿದರು.
ಅಪರ ಜಿಲ್ಲಾಧಿಕಾರಿ ಎಂ. ಪಿ. ಮಾರುತಿಯವರಿಗೆ ವರ್ಗಾವಣೆಯಾದ ನಿಮಿತ್ಯ ಸಮಾನ ಮನಸ್ಕ ಗೆಳೆಯರ ಬಳಗದಿಂದ ಮಾರುತಿ ದಂಪತಿಗಳನ್ನು ಸನ್ಮಾನಿಸಿ ಡಾ. ಧಾರವಾಡ ಮಾತನಾಡಿದರು.
ಎಂ.ಪಿ. ಮಾರುತಿಯವರು ಸಾರ್ವಜನಿಕರು ಮತ್ತು ಸರ್ಕಾರದ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸಿದರು. ಯಾವುದೇ ೈಲ್​ಅನ್ನು ಕಾಯಿಸದೆ, ಸಾರ್ವಜನಿಕರಿಗೆ ಯಾವ ತೊಂದರೆಯೂ ಆಗದಂತೆ ಕಾರ್ಯ ನಿರ್ವಹಿಸಿದ ಅವರ ಸೇವೆ ಇನ್ನೂ ಗದಗ ಜನತೆಗೆ ಅವಶ್ಯಕವಾಗಿತ್ತು. ಆದರೆ ಸರ್ಕಾರ ನೀತಿ ನಿಯಮಗಳಿಗೆ ಅನುಗುಣವಾಗಿ ವರ್ಗಾವಣೆ ಎಂಬುದು ಅಧಿಕಾರಿಗಳಿಗೆ ಅನಿವಾರ್ಯ. ಆದ್ದರಿಂದ ಅವರನ್ನು ಈಗ ಬೀಳ್ಕೊಡಬೇಕಾದ ಸಂದರ್ಭ ಒದಗಿ ಬಂದಿದೆ ಎಂದರು.
ಲಕ್ಕುಂಡಿ ಉತ್ಸವ ಮತ್ತು ಮತ್ತಿತರ ಸರ್ಕಾರಿ ಉತ್ಸವ ಸಮಾರಂಭಗಳಲ್ಲಿ ಚಾಕಚಕ್ಯತೆಯಿಂದ ಕಾರ್ಯ ನಿರ್ವಹಿಸುತ್ತಿದ್ದ ಮಾರುತಿಯವರು ಜಿಲ್ಲೆಯ ಎಲ್ಲ ವರ್ಗದ ಅಧಿಕಾರಿಗಳ ಅಚ್ಚುಮೆಚ್ಚಿನ ಅಧಿಕಾರಿ ಆಗಿದ್ದರು. ಇಂತಹ ಅಧಿಕಾರಿಯನ್ನು ಬಿಳ್ಕೊಡುವುದು ಕಷ್ಟವಾದರೂ ಅನಿವಾರ್ಯ ಎಂದರು.
ಜಿಲ್ಲಾ ಶಿಣ ಮತ್ತು ಸಾರ ಇಲಾಖೆಯ ಉಪನಿರ್ದೇಶಕ ಜಿ.ಎಂ. ಬಸವಲಿಂಗಪ್ಪ ಮಾತನಾಡಿ ಅಪರ ಜಿಲ್ಲಾಧಿಕಾರಿ ಮಾರುತಿಯವರೊಂದಿಗೆ ಕಾರ್ಯ ನಿರ್ವಹಿಸುವುದೇ ಒಂದು ಸೊಗಸು. ಅವರೊಂದಿಗೆ ಒಂದು ವರ್ಷ ಕಾಲ ಕಾರ್ಯ ನಿರ್ವಹಿಸಿದ ತೃಪ್ತಿ ನನಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಎಂ. ಪಿ. ಮಾರುತಿ ಗದಗ ಜಿಲ್ಲೆಯ ಜನತೆಯ ಸುಮಧುರ ಸಂಬಂಧವನ್ನು ನಾನೆಂದಿಗೂ ಮರೆಯಲಾರೆ. ಅವರ ಪ್ರೀತಿ ವಿಶ್ವಾಸಗಳಿಗೆ ಬೆಲೆ ಕಟ್ಟಲು ನನ್ನಿಂದ ಸಾಧ್ಯವಿಲ್ಲ. ಇಂದು ಸಮಾನ ಮನಸ್ಕ ಗೆಳೆಯರ ಬಳಗದವರು ನೀಡಿರುವ ಈ ಸನ್ಮಾನ ನನ್ನ ಜೀವಮಾನದಲ್ಲಿ ಎಂದಿಗೂ ಮರೆಯಲಾರದ ಸಂಗತಿ. ಈ ಸ್ನೇಹಿತರ ಗೆಳೆತನ ನನ್ನೊಂದಿಗೆ ಎಂದಿಗೂ ನಿರಂತರವಾಗಿರುವಂತೆ ಭಗವಂತನು ಆಶೀರ್ವದಿಸಲಿ ಎಂದು ಹೇಳಿದರು.
ಕಾರ್ಯಕ್ರದಲ್ಲಿ ವಿಜಯ ಹಬೀಬ, ಸಂಜಯ್​ ಮಿಸ್ಕಿನ್​, ಧಾರವಾಡಮಠ ಸೇರಿದಂತೆ ಇತರರು ಇದ್ದರು.