ಗದಗ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಡವಿಸೋಮಾಪೂರ ಸಣ್ಣ ತಾಂಡೆ ಶಾಲೆಯಲ್ಲಿ ಮಹರ್ಷಿ ಭಗೀರಥರ ಜಯಂತಿಯನ್ನು ಆಚರಿಸಲಾಯಿತು.
ಮುಖ್ಯಶಿಕ್ಷಕ ಮಲ್ಲೇಶ ಡಿ ಎಚ್ ಮಾತನಾಡಿ ಮಹರ್ಷಿ ಭಗೀರಥರ ಕಠಿಣ ತಪಸ್ಸಿನ ಫಲವಾಗಿ ಭುವಿಗೆ ಗಂಗೆಯನ್ನು ಬರುವಂತೆ ಮಾಡಿ ಸಕಲ ಜೀವರಾಶಿಗೆ ಜೀವಜಲ ನೀಡಿದ ಮಹಾನ ತಪಸ್ವಿ ಮಹರ್ಷಿ ಭಗೀರಥರು ಇಂದಿಗೂ ಅವರ ಜೀವನ ಮತ್ತು ಸಂದೇಶ ನಮಗೆಲ್ಲ ಆದರ್ಶ ಎಂದು ಹೇಳಿದರು.
ಶಿಕ್ಷಕರಾದ ಎಸ್ ಜಿ ಅಮ್ಮಿನಭಾವಿ ಎಸ್ ಟಿ ಹಳಕಟ್ಟಿ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಶ್ರೀಮತಿ ಪಾರವ್ವ ಉಮೇಶ ಲಮಾಣಿ, ವೆಂಕಟೇಶ ರಾಠೋಡ, ಸೋಮನಾಥ ಲಮಾಣಿ,ಶಾಲಾ ಮಕ್ಕಳು ಇದ್ದರು.