ಜಿಲ್ಲೆ

ಅಡವಿಸೋಮಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮ ಬಹು ನಿವೇಶನ ಸೃಷ್ಟಿ

Gadag - Shivanand Hiremath

ಶಿವಾನಂದ ಹಿರೇಮಠ, ಗದಗ

ಗದಗ ತಾಲೂಕಿನ ಅಡವಿಸೋಮಾಪುರ ಗ್ರಾಪಂ ವ್ಯಾಪ್ತಿಯ ಪಾಪನಾಶಿ ಗ್ರಾಮದಲ್ಲಿ ನಗರಾಭಿವೃದ್ಧಿ ಇಲಾಖೆ ಅನುಮತಿ ಇಲ್ಲದೇ ಏಕನಿವೇಶನ ಭೂಮಿಯನ್ನು ಬಹು ನಿವೇಶನಕ್ಕೆ ಅನುಮತಿ ನೀಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ ಗ್ರಾಪಂ. ಅಧ್ಯೆ ಕೀತಿರ್ ಪ್ರಶಾಂತಗೌಡ ಪಾಟೀಲ ಮತ್ತು ಗ್ರಾಪಂ ಪಿಡಿಓ ಪ್ರೇಮಾ ಹಟ್ಟಿ ಅವರ ಮೇಲೆ ಅಧಿಕಾರ ರ್ದುಬಳಕೆ ಆರೋಪ ಕೇಳಿ ಬಂದಿದೆ. ಪ್ರಕರಣ ಬೆಳಕಿಗೆ ಬಂದ ನಂತರ ಅಧ್ಯಕ್ಷರ ಹಣಕಾಸಿನ ಹಿತಾಸಕ್ತಿ ಮತ್ತು ಪಂಚಾಯಿತಿ ಆಡಳಿತದಲ್ಲಿ ಅಧ್ಯಕ್ಷರ ಪತಿಯು ಹಸ್ತಕ್ಷೇಪ ಮಾಡುತ್ತಿರುವ ಬಗ್ಗೆಗೂ ತನಿಕೆ ಮತ್ತು ಹಸ್ತಕ್ಷೇಪ ಮಾಡಂದತೆ ಕ್ರಮ ಕೈಗೊಳ್ಳಲು ಮತ್ತು ಗ್ರಾಪಂನಲ್ಲಿನ ದಾಖಲೆಗಳಲ್ಲಿ, ತೆರಿಗೆ ಪುಸ್ತಕ, ಸಂಪನ್ಮೂಲಗಳ ಕ್ರೂಢಿಕರಣ ಸೇರಿಂದತೆ ತನಿಖೆ ನಡೆಸಿ ವರದಿ ಸಲ್ಲಿಸಲು ಜಿಪಂ ಸಿಇಓ ಭರತ್​ ಎಸ್​ ಅವರು ಜಿಪಂ ಸಹಾಯಕ ಕಾರ್ಯದಶಿರ್ಗೆ ಆದೇಶಿಸಿದ್ದಾರೆ. ಈ ಪ್ರಕರಣ ಬಗ್ಗೆ ಲೋಕಾಯುಕ್ತದಲ್ಲೂ ದೂರು ದಾಖಲಾಗಿದೆ.

ಗ್ರಾಪಂ ವ್ಯಾಪ್ತಿಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ತಾಪಂ ನಿಂದ ಪಿಡಿಓ ಪ್ರೇಮಾ ಹಟ್ಟಿ, ಕಾರ್ಯದಶಿರ್ ವಿ.ಸಿ. ಹಿರೇಮಠ, ದ್ವೀತಿಯ ದರ್ಜೆ ಲೆಕ್ಕಸಹಾಯಕ ಸಿ.ಬಿ. ಜ್ಞಾನೋಪಂತರ ಅವರಿಗೆ ಉತ್ತರ ನೀಡುವಂತೆ ತಾಪಂ ನಿಂದ ನೋಟೀಸ್​ ಕೂಡ ಜಾರಿ ಮಾಡಲಾಗಿತ್ತು. ಉತ್ತರ ಪಡೆದ ತಾಪಂ ಅಧೀಕಾರಿಗಳು ಜಿಪಂ ಗೆ ವರದಿ ಸಲ್ಲಿಸಿದ್ದಾರೆ. ಈ ವರದಿ ಆಧರಿಸಿ ಜಿಪಂ ಸಿಇಓ ಭರತ್​ ಅವರು ಆಡಳಿತಾತ್ಮಕ ತನಿಖೆಗೆ ಆದೇಶ ನೀಡಿದ್ದಾರೆ.

ಏನಿದು ಪ್ರಕರಣ:

ಅಡವಿಸೋಮಾಪು ವ್ಯಾಪ್ತಿಯ ಪಾಪನಾಶಿ ಗ್ರಾಪಂ ವ್ಯಾಪ್ತಿಯಲ್ಲಿ ಸ.ನಂ 28/1 ರಲ್ಲಿ 1 ಎಕರೆ 15 ಗುಂಟೆ, 28/2ಬಿ ರಲ್ಲಿ 3 ಎಕರೆ 28 ಗುಂಟೆ, 31/2ಎ ರಲ್ಲಿ 7 ಎಕರೆ 30 ಗುಂಟೆ, 31/2ಬಿ ನಲ್ಲಿ 2 ಎಕರೆ 27 ಗುಂಟೆ ಹಾಗೂ 31/3 ಸರ್ವೇ ನಂಬರಿನ 3 ಎಕರೆ 21 ಗುಂಟೆ ಸೇರಿ ಒಟ್ಟು 18 ಏಕರೆ ಜಮೀನಿನ ಏಕ ನಿವೇಶನವನ್ನು ಬಹು ನಿವೇಶನ ಭೂಮಿಗೆ ಪಿಡಿಓ ಪ್ರೇಮಾ ಹಟ್ಟಿ ಅವರು ಅನಧಿಕೃತವಾಗಿ 87 ಉತಾರ ನೀಡಿದ ಪ್ರಕರಣ ಇದಾಗಿದೆ.

ಆದೇಶದಲ್ಲಿ ಏನಿದೆ?

ಅಧ್ಯಕ್ಷ ಮತ್ತು ಸರ್ವಸದಸ್ಯರು ಒಟ್ಟುಗೂಡಿ 2024ರ ನ.11 ರಂದು ಪಿಡಿಓ(ಅಂದಿನ ಪಿಡಿಓ ರಾಜಕುಮಾರ ಭಜಂತ್ರಿ) ಬದಲಾವಣೆ ಮಾಡಿ ಗ್ರಾಪಂ ನಿಂದ ಆದೇಶ ಮಾಡಿರುತ್ತಾರೆ. ಪಿಡಿಓ ಸ್ಥಳಕ್ಕೆ ಅಮೀರ ನಾಯಕ ಎಂಬುವರು ವರ್ಗಾವಣೆ ಆಗಿರುತ್ತಾರೆ. ಆದರೆ, ಅಮೀರ ನಾಯಕ ಅವರಿಗೆ ಅಧಿಕಾರ ಹಸ್ತಾಂತರಿಸದೇ ಹಿಂದಿನ ಪಿಡಿಓ(ರಾಜಕುಮಾರ) ಅವರನ್ನು ಒತ್ತಾಯಿಸಿ 15ನೇ ಹಣಕಾಸಿನ ಖಾತೆಗಳಿಂದ ಲಕ್ಷಗಟ್ಟಲೇ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಪಾಪನಾಶಿ ಗ್ರಾಮದಲ್ಲಿ ಅಧಿಕಾರ ಬಳಸಿ ಬಹುನಿವೇಶನಕ್ಕೆ ಸಂಬಂಧಿಸಿದಂತೆ ಉತಾರಗಳನ್ನು ನೀಡಲಾಗಿದೆ. ಈ ಪ್ರಕರಣದ ಸಂರ್ಪೂಣ ತನಿಖೆ ನಡೆಸಬೇಕು. ಅಧ್ಯೆ ಪತಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸರ್ವಸದಸ್ಯರು ಕಾರ್ಯಾಲಯಕ್ಕೆ ಸೂರು ಸಲ್ಲಿಸಿದ್ದಾರೆ. ದೂರು ಆಧರಿಸಿ ತನಿಖೆ ನಡೆಸಿ ವರದಿ ಸಲ್ಲಿಸಲು ಜಿಪಂ ಸಹಾಯಕ ಕಾರ್ಯದಶಿರ್ ಎಸ್​.ಎಸ್​. ಕಲ್ಮನಿ ಅವರಿಗೆ ಸಿಇಓ ಆದೇಶಿಸಿದ್ದಾರೆ.

ಪ್ರಕರಣ ಕುರಿತು ತನಿಖೆ ನಡೆಸುವಂತೆ ಸದಸ್ಯರೇ ದೂರು ಸಲ್ಲಿಸಿದ್ದಾರೆ. ಮೇಲ್ನೋಟಕ್ಕೆ ಅಕ್ರಮ ನಡೆದಿದೆ ಎಂಬುದು ಸಾಭಿತಾಗುತ್ತಿದೆ. ನಿಯಮಗಳನ್ನು ಮೀರಿ ಅಧಿಕಾರ ರ್ದುಬಳಕೆ ಮಾಡಿದ್ದರ ಬಗ್ಗೆ ತನಿಕೆ ನಡೆಸಲು ಜಿಪಂ ಸಹಾಯಕ ಕಾರ್ಯದಶಿರ್ಗೆ ಆದೇಶಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು.

- ಭರತ್​ ಎಸ್​, ಸಿಇಓ ಗದಗ