ಜಿಲ್ಲೆ

ಅಪಘಾತ: ಓರ್ವ ಸಾವು

Gadag - Shivanand Hiremath

ಗದಗ: ಸೋಮವಾರ ರಾತ್ರಿ ಪೊಲೀಸ್​ ವಾಹನ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ ಗಂಭೀರವಾಗಿ ಗಾಯಗೊಂಡಿದ್ದ ನಿಖಿಲ್​ ಗೌಡರ್​(22) ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಭಾನುವಾರ ರಾತ್ರಿ ಚಿತ್ರನಟ ಯಶ್​ ಅವರ ರ್ಬತಡೇ ಬ್ಯಾನರ್​ ಕಟ್ಟುವಾಗ ವಿದ್ಯುತ್​ ಸ್ಪಶಿರ್ಸಿ ನಡೆದ ಮೃತಪಟ್ಟಿದ್ದ ಅಭಿಮಾನಿಗಳ ಮನೆಗೆ ಸಮವಾರ ಯಶ್​ ಭೇಟಿ ನೀಡಿದ್ದರು. ಈ ವೇಳೆ ಭದ್ರತೆಗಾಗಿ ನಿಯೋಜಿಸಿದ್ದ ಡಿಆರ್​ ಪೊಲೀಸ್​ ಸಿಬ್ಬಂದಿ ಇರುವ ವಾಹನ ಕರ್ತವ್ಯ ಮುಗಿಸಿ ಮರಳುವ ಸಂದರ್ಭದಲ್ಲಿ ನಿಖಿಲ್​ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಪೊಲೀಸ್​ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ನಿಖಿಲ್​ ಗೆ ಗಂಭಿರ ಗಾಯಗಳಾಗಿದ್ದವು. ಚಿಕಿತ್ಸೆಗಾಗಿ ಜಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಲಕಾರಿ ಆಗದೇ ಮಂಗಳವಾರ ಬೆಳಗ್ಗೆ ನಿಖಿಲ್​ ಸಾವನ್ನಪ್ಪಿದ್ದಾರೆ.