ಜಿಲ್ಲೆ

Gadag: ಎಬಿವಿಪಿ ಸದಸ್ಯತ್ವ

Gadag - Shivanand Hiremath
Gadag: ವಿದ್ಯಾರ್ಥಿಗಳು ಎಬಿವಿಪಿ ಸದಸ್ಯತ್ವ ಪಡೆಯುವ ಮೂಲಕ  ರಾಷ್ಟ್ರ ಸೇವೆಯ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿದರು.
ನಗರದ ಜಗದ್ಗುರು ತೋಂಟದಾರ್ಯ ಕಾಲೇಜಿನಲ್ಲಿ ಮಹಾ ಸದಸ್ಯತ್ವ ದಿನದ ಅಂಗವಾಗಿ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿದ ಅವರು ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ ಪ್ರಾರಂಭವಾಗಿದೆ ಕಾಲೇಜು ವಿದ್ಯಾರ್ಥಿಗಳು ಎಬಿವಿಪಿ ಸದಸ್ಯತ್ವ ಪಡೆದುಕೊಳ್ಳುವ ಮೂಲಕ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಉತ್ತಮ ವೇದಿಕೆಯನ್ನು ಎಬಿವಿಪಿ ಕಲ್ಪಿಸಿಕೊಡುತ್ತದೆ, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸದಾ ಧ್ವನಿಯಾಗಿ ಸಮಸ್ಯೆಗಳ  ಪರಿಹಾರಕ್ಕೆ ಹಲವಾರು ಹೋರಾಟಗಳನ್ನು ಎಬಿವಿಪಿ ಕಟ್ಟಿದೆ, ಗುಣಮಟ್ಟ ಶಿಕ್ಷಣಕ್ಕೆ ಅವಶ್ಯವಿರುವ ಮೂಲಭೂತ ಸೌಕರ್ಯ, ವಿದ್ಯಾರ್ಥಿ ವೇತನ, ಸಮರ್ಪಕ ಬಸ್ಗಳ ಸೌಲಭ್ಯ, ಹಾಸ್ಟೆಲ್ ಗಳ ಮೂಲಭೂತ ಸೌಲಭ್ಯ ಹೀಗೆ ಹಲವಾರು ಸಂದರ್ಭಗಳಲ್ಲಿ ಎಬಿವಿಪಿ ಹೋರಾಟವನ್ನು ಮಾಡಿಕೊಂಡು ಬಂದಿದೆ. ಹೋರಾಟಗಳ ಜೊತೆಗೆ ವಿದ್ಯಾರ್ಥಿಗಳಿಗೆ ಹಲವಾರು ಕಾರ್ಯಕ್ರಮಗಳನ್ನು ದೇಶದ ಹಲವಾರು ಮಹಾನ್ ಪುರುಷರ ಜಯಂತಿ ಕಾರ್ಯಕ್ರಮಗಳನ್ನ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಶಿಬಿರಗಳು, ಉಚಿತ ಸಿಇಟಿ ನೀಟ್ ತರಬೇತಿ ಶಿಬಿರ, ವಿದ್ಯಾರ್ಥಿನಿಯರಿಗೆ ಉಚಿತ  ಕರಾಟೆ ತರಬೇತಿ ಶಿಬಿರ ಹೀಗೆ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿ ಪರಿಷತ್ ಮಾಡಿಕೊಂಡು ಬಂದಿದೆ ಎಂದರು.
ವಿಶ್ವದಲ್ಲಿ ಅತೀ ಹೆಚ್ಚು ಸದಸ್ಯರನ್ನು ಒಳಗೊಂಡ ವಿದ್ಯಾರ್ಥಿ ಸಂಘಟನೆ ಎಬಿವಿಪಿಯಾಗಿದೆ, 2025 ರಲ್ಲಿ 59 ಲಕ್ಷಕ್ಕೂ ಅಧಿಕ ಸದಸ್ಯತ್ವವನ್ನು ವಿದ್ಯಾರ್ಥಿಗಳು ದೇಶದಲ್ಲಿ ಪಡೆದುಕೊಂಡಿದ್ದಾರೆ,  ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣದ ಜೊತೆಗೆ ದೇಶದ ಕಾರ್ಯವನ್ನು ಮಾಡಲು ಒಳ್ಳೆಯ ಅವಕಾಶ ಅದು ಎಬಿವಿಪಿ ಸಂಘಟನೆ, ಯಾವುದೇ ವಿಶ್ವ ವಿದ್ಯಾಲಯಗಳು ಕಲಿಸದೇ ಇರುವ ಉತ್ತಮ ವ್ಯಕ್ತಿತ್ವದ ನಾಯಕತ್ವ ಗುಣವನ್ನು ಎಬಿವಿಪಿ ಕಳಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಎಬಿವಿಪಿಯ ಪ್ರಮುಖರಾದ ಗಿರೀಶ ನರಗುಂದ, ಸಚಿನ ಕುಂದರಗಿ, ನಿಖಿತಾ ಸುತಾರ, ಭದ್ರಿನಾಥ ಅಂಗಡಿ, ಮಲ್ಲಿಕಾರ್ಜುನ, ವೀರೇಶ ಇತರರು ಉಪಸ್ಥಿತರಿದ್ದರು.