ಗದಗ: ಕ.ವಿ.ಮಂ. ನಿವೃತ್ತ ನೌಕರರ ಮಾಸಿಕ ಸಭೆ ನೂತನ ಸಮುದಾಯ ಭವನದಲ್ಲಿ ಜಿ.ಎಂ.ಯಾನಮಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿಗಳು ಆದ ಡಾ.ರಾಜೇಂದ್ರ ಗಡಾದ ಅವರು ಹಿರಿಯ ನಾಗರಿಕರು ಹಾಗೂ ಆರೋಗ್ಯದ ಬಗ್ಗೆ ಉಪನ್ಯಾಸ ನೀಡುತ್ತಾ ಹಿರಿಯ ನಾಗರಿಕರು ಸಕ್ಕರೆ ಕಾಯಿಲೆ, ಹೃದಯ ರೋಗ, ಬೊಜ್ಜು, ಹೃದಯಾಘಾತ, ಕ್ಯಾನ್ಸರ್, ಲಕ್ವಾ, ಅಂಧತ್ವ, ಮಾನಸಿಕ ಕಾಯಿಲೆಗಳು, ಕೀಲುನೋವು ಜಠರ ಸಂಬAಧಿತ ರೋಗಗಳು ಮುಂತಾದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವದು ಕಂಡು ಬರುತ್ತಿದ್ದು ಅವುಗಳ ಮುನ್ನೆಚ್ಚರಿಕೆ ಕ್ರಮಗಳು ಪರಿಹಾರೋಪಾಯಗಳ ಕುರಿತು ವಿವರವಾಗಿ ತಿಳಿಸುತ್ತ ವೃದ್ಧಾಪ್ಯವೆಂದರೆ, ಕಾಯಿಲೆ ನೋವು ನರಳಾಟವಲ್ಲ. ಆರೋಗ್ಯಪೂರ್ಣವಾದ ಕ್ರಮಬದ್ಧವಾದ ಜೀವನಶೈಲಿ ಮಾಡಿಕೊಳ್ಳುವ ಮೂಲಕ ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ಹೇಳಿದರು. ಎಸ್.ವ್ಹಿ. ಮೆಣಸಿನಕಾಯಿ ಹಿರಿಯ ಸದಸ್ಯರು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ದಾಸೋಹ ಸೇವೆಯನ್ನು ವಹಿಸಿಕೊಂಡಿದ್ದರು. ಎಲ್ಲರಿಗೂ ಶಾಲು ಹೊದಿಸಿ, ಫಲಪುಷ್ಪ ನೀಡಿ, ಗೌರವಪೂರ್ವಕ ಸನ್ಮಾನಿಸಲಾಯಿತು. ಈ ತಿಂಗಳಲ್ಲಿ ಜನಿಸಿದ ಸದಸ್ಯರ ಹುಟ್ಟು ಹಬ್ಬ ಆಚರಿಸಲಾಯಿತು. ವಾಯ್.ಬಿ.ಭಾನಾಪೂರ ಅವರು ಶರಾವತಿ ಪತ್ತಿನ ಸಹಕಾರಿ ಸಂಘ, ಹಾಗೂ ಸಮುದಾಯ ಭವನದ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಎಸ್.ಬಿ.ಓಲಿ ಅವರು ಕೇಂದ್ರ ಸಮಿತಿಯ ಚಟುವಟಕೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಹೊಸ ಸದಸ್ಯರಿಗೆ ಸದಸ್ಯತ್ವ ಕಾರ್ಡ ವಿತರಿಸಲಾಯಿತು. ಎನ್.ವ್ಹಿ.ಹೇಮಗಿರಿಮಠ, ವ್ಹಿ.ಪಿ.ಸವಡಿ, ಆಯ್.ಎಸ್.ಸರೂರ, ಬಿ.ಎಂ. ಬಾಣಿ, ಜಿ.ಆರ್.ಅಗಸಿಯವರ, ಎಸ್.ಎಸ್.ಹಿರೇಮಠ, ಜೆ.ಡಿ.ನದಾಫ, ಎಸ್.ಎಸ್.ಸ್ಥಾವರಮಠ, ಫಕ್ಕೀರಪ್ಪ ತುಪ್ಪದ, ಎಂ.ಎ.ನಮಾಜಿ, ಎನ್.ಎಸ್.ಕೊಪ್ಪರದ, ಎಸ್.ಎ.ಉಪ್ಪಿನ, ಬಿ.ಎಂ.ಕAಬಿ, ಸಿ.ವ್ಹಿ.ಬೋಳನವರ, ಎಂ.ಜೆ.ಫತ್ತೇನವರ, ಎಸ್.ಆರ್.ಕಲಾಲ, ಸಿ.ಜಿ.ಸಿಂಗಟಾಲೂರ, ಜೆ.ಬಿ. ಕೊಪ್ಪಳ, ಆರ್.ಜಿ.ಕುಲಕರ್ಣಿ, ಎಸ್.ವಾಯ್.ಹುಂಬಿ, ಶ್ರೀಮತಿ ಅನ್ನಪೂರ್ಣ ರಾಠೋಡ, ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಎನ್.ಎಂ.ಬಾಗಲಿ, ಪ್ರಾರ್ಥಿಸಿದರು. ಜಿ.ಎನ್.ಹವಳೆ, ಸ್ವಾಗತಿಸಿದರು. ಎ.ಎನ್.ಬಸ್ತಿ, ವಂದಿಸಿದರು. ವಾಯ್.ಬಿ.ಭಾನಾಪೂರ ನಿರೂಪಿಸಿದರು ಎಂದು ಬಿ.ಎನ್.ಘಾಳಿ, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.