Gadag: ನೇಕಾರಿಕೆ ಮೂಲವೃತ್ತಿಯ ಕುಟುಂಬದಲ್ಲಿ ಜನಿಸಿದ ದೇವರ ದಾಸಿಮಯ್ಯನವರು ಸೃಷ್ಠಿಕರ್ತ ಸಾಕ್ಷಾತ ಶಿವನಿಗೆ ಬಟ್ಟೆಯನ್ನು ನೇಯ್ದು ನೇಕಾರಿಕೆ ಮೂಲವೃತ್ತಿಯೊಂದಿಗೆ ಶ್ರದ್ದಾ ಭಕ್ತಿಯನ್ನು ಮೆರೆದು ಹಿಂಧೂ ಸಂಸ್ಕೃತಿ ಪುರಾಣಗಳಲ್ಲಿ ಶ್ರೇಷ್ಠವಾದ ಗೌರವವಾದ ಸ್ಥಾನಮಾನವನ್ನು ಹೊಂದಿರುವ ಅವರ ಆದರ್ಶ ಬದುಕು ಸರ್ವಕಾಲಕ್ಕೂ ಪ್ರಸ್ತುತವಾಗಿದೆ ಎಂದು ಗದಗ ಬೆಟಗೇರಿ ನಗರಸಭೆಯ ಮಾಜಿ ಅಧ್ಯಕ್ಷರಾಗಿರುವ ಶಿವಪ್ಪ ಮುಳಗುಂದ ಶ್ಲಾಘೀಸಿದರು.
ಬೆಟಗೇರಿಯ ಟರ್ನಲ್ ಪೇಟೆಯಲ್ಲಿರುವ ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರ ಜಯಂತಿ 2025 ರ ಅಂಗವಾಗಿ ಬುಧವಾರ ಬೆಳಿಗ್ಗೆ ದೇವರ ದಾಸಿಮಯ್ಯ ಪ್ರತಿಮೆಗೆ ಮಾಲಾರ್ಪಣೆ ಮೂಲಕ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.
12 ನೇ ಶತಮಾನದಲ್ಲಿ ಅಂದರೇ 1165 ರಲ್ಲಿ ಚೈತ್ರ ಶುದ್ದ ಪಂಚಮಿಯAದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರಿನ ರಾಮಯ್ಯ ಹಾಗೂ ಶಂಕರಿ ದಂಪತಿಗಳ ಪುತ್ರನಾಗಿ ದೇವರ ದಾಸಿಮಯ್ಯನವರು ಜನಿಸಿದರು. ಮುದನೂರಿನ ಸಮೀಪದ ಶೈವ ಕೇಂದ್ರವಾಗಿರುವ ಶ್ರೀಶೈಲದಲ್ಲಿ ಚಂದ್ರಗುAಡ ಶಿವಾಚಾರ್ಯರ ಆಪ್ತ ಶಿಷ್ಯರಾಗಿ ಜ್ಞಾನವನ್ನು ಸಂಪಾದಿಸಿದರು. ದುಗ್ಗಳೆಯೊಂದಿಗೆ ಸಪ್ತಪದಿ ತುಳಿದು ಸಂಸಾರಿಕ ಜೀವನದೊಂದಿಗೆ ನೇಕಾರಿಕೆ ವೃತ್ತಿಯ ಮೂಲಕ ಸಾಕ್ಷಾತ ಶಿವನನ್ನು ಒಲಿಸಿಕೊಂಡು ಅವನಿಗೆ ಬಟ್ಟೆ ನೇಯ್ದು ಕೊಟ್ಟು ಇತಿಹಾಸವನ್ನು ಸೃಷ್ಠಿಸಿದ್ದ ಶ್ರೇಷ್ಠ ವಚನಕಾರರು ಎಂದು ಸ್ಮರಿಸಿದರು.
ರಾಮನಾಥ ಅಂಕಿತವನ್ನು ತಮ್ಮ ವಚನದಲ್ಲಿ ಬಳಸುವ ಮೂಲಕ ಅಸಂಖ್ಯಾತ ವಚನಗಳನ್ನು ಅವರು ರಚಿಸಿದ್ದಾರೆ, ಅವುಗಳ ಪೈಕಿ 150 ಕ್ಕೂ ಹೆಚ್ಚು ವಚನಗಳು ಲಭ್ಯವಾಗಿರುವ ಬಗ್ಗೆ ಇತಿಹಾಸ ಉಲ್ಲೇಖಿಸುತ್ತಿದೆ. ಈ ಐತಿಹಾಸಿಕ ಸಾಧನೆಯ ಮೂಲಕ ವಚನ ಲೋಕದಲ್ಲಿಯೇ ವಿಖ್ಯಾತರಾಗಿದ್ದಾರೆ. ದೇವರ ದಾಸಿಮಯ್ಯನವರು ತಮ್ಮ ನೇಕಾರಿಕೆ ವೃತ್ತಿಯ ತಪೋಶಕ್ತಿಯಿಂದ ಶಿವನನ್ನು ಒಲಿಸಿಕೊಳ್ಳುವ ಮೂಲಕ ದೇವಾಂಗ ಸಮುದಾಯಕ್ಕೆ ಶಿವಶಕ್ತಿಯ ಬಲವನ್ನು ತುಂಬಿದ್ದಾರೆ. ಶಿವನಿಗೆ ಬಟ್ಟೆ ನೇಯ್ದು ಕೊಟ್ಟ ತಮ್ಮ ಸೇವೆ ಶ್ರೇಷ್ಠವಾಗಿದ್ದು, ಸೂರ್ಯ ಚಂದ್ರ ಇರುವರೆಗೂ ಅದೊಂದು ಇತಿಹಾಸ, ಆ ಪುಣ್ಯವನ್ನು ಪಡೆದ ಆ ಸಮಾಜ ಬಾಂದವರು ಬಾಗ್ಯವಂತರು, ಈಗಿನ ಯುವ ಪಿಳಿಗೆ ನೇಕಾರಿಕೆಯಲ್ಲಿ ನಿರಾಸಕ್ತಿ ವಹಿಸಿ ಆ ವೃತ್ತಿಯಿಂದ ವಿಮುಖವಾಗುತ್ತಿರುವದು ಕಳವಳದ ಸಂಗತಿಯಾಗಿದ್ದು, ಮೂಲ ಪರಂಪರೆಯ ನೇಕಾರಿಕೆ ವೃತ್ತಿಯನ್ನು ಮುಂದುವರೆಸಿರಿ. ದೇವರ ದಾಸಿಮಯ್ಯನವರ ಮೂಲಕ ಶಿವನನ್ನು ಆರಾದಿಸಿರಿ, ಬದುಕಿನಲ್ಲಿ ಮುಂದೇ ಸಾಗಿರಿ, ಯುವ ಪಿಳಿಗೆಗೆ ಶಿವ ಮತ್ತು ದೇವರ ದಾಸಿಮಯ್ಯನವರ ನಡುವಿನ ಶ್ರಧ್ದಾ ಭಕ್ತಿಯ ಸಂಬAಧದ ಸಂದೇಶವನ್ನು ಸಾರುವಂತೆ ಗದಗ ಬೆಟಗೇರಿ ನಗರಸಭೆಯ ಮಾಜಿ ಅಧ್ಯಕ್ಷರಾಗಿರುವ ಶಿವಪ್ಪ ಮುಳಗುಂದ ಕರೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ರಾಘವೇಂದ್ರ ಯಳವತ್ತಿ, ದೇವಾಂಗ ಸಮಾಜದ ಮುಖಂಡರಾದ ಅನೀಲ ಗಡ್ಡಿ, ಶಂಕರ ಕಾಕಿ, ಮಲ್ಲೇಶಿ ಬೆಲ್ಲದ, ಶ್ರೀನಿವಾಸ ಹುಬ್ಬಳ್ಳಿ, ದಶರಥ ಕೊಳ್ಳಿ, ರಾಮು ಬಾಲೇಹೋಸೂರ ಸೇರಿದಂತೆ ಹಲವರಿದ್ದರು.