ಜಿಲ್ಲೆ

ಗದಗ ಜಿಲ್ಲೆಯ ಗೃಹರಕ ದಳದಿಂದ ಮಹಾರಾಷ್ಟ್ರದಲ್ಲಿ ಕನಕದಾಸರ ಜಯಂತಿ ಆಚರಣೆ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಜಾತಿ ವ್ಯವಸ್ಥೆಯನ್ನು ದೂರೀಕರಿಸಿ ಸಮಾನತೆಯನ್ನು ಸಾರಿದ ದಾಸಶ್ರೇಷ್ಠ ಭಕ್ತ ಕನಕದಾಸರು ಕನ್ನಡ ಸಾಹಿತ್ಯಕ್ಕೆ ಮಹಾನ ಕೀರ್ತನೆಗಳ ಕೊಡುಗೆ ನೀಡಿದ್ದಾರೆ ಎಂದು ಗ್ರಹರಕ ದಳದ ಗದಗ ಜಿಲ್ಲಾ ಬೋಧಕ ಕಿರಣಕುಮಾರ ಹೇಳಿದರು.

ಮಹಾರಾಷ್ಟ್ರದ ದಾರೋಶಿ ಜಿಲ್ಲೆಯಲ್ಲಿ ಗದಗ ಜಿಲ್ಲೆಯ ನರೇಗಲ್​ ಗೃಹರಕ ಟಕದಿಂದ ಹಾಗೂ ಗದಗ ಜಿಲ್ಲಾ ಟಕದಿಂದ ಹಮ್ಮಿಕೊಂಡ ಬುಧವಾರ ಏರ್ಪಡಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ದಾಸ ಶ್ರೇಷ್ಠ ಕನಕದಾಸರು ಬರಿ ಕನ್ನಡ ಸಾಹಿತ್ಯಕ್ಕೆ ಅಲ್ಲದೆ, ಮನುಕುಲದ ಒಳಿತಿಗಾಗಿ ಸಾಮರಸ್ಯ, ಭೇದ ಭಾವ, ಉಚ್ಚ ನೀಚ, ಮೇಲು ಕೀಳು ಎಂಬ ತಾರತಮ್ಯ ಹೋಗಲಾಡಿಸಲು 16ನೇ ಶತಮಾನದಲ್ಲಿ ಶ್ರೇಷ್ಠತೆ ಮೆರೆದು ಸಾಹಿತ್ಯದ ಮೂಲಕ ಜನರ ಮನ ತಲುಪಿ ಸಾಹಿತ್ಯಕ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಸುಮಾರು 316 ಕೃತಿಗಳನ್ನು ರಚಿಸಿದ್ದಾರೆ. ಇವರ ಕೃತಿಗಳಲ್ಲಿ ಜನತೆಯ ಮೌಡ್ಯ, ಕಂಧಾಚಾರ, ಪೊಳ್ಳು ನಂಬಿಕೆ, ವರ್ಣ ವ್ಯವಸ್ಥೆಯನ್ನು ಖಂಡಿಸಿದ್ದಾರೆ. ದೈವಭಕ್ತಿ, ಜೀವನದರ್ಶನ, ಸಮಾಜ ವಿಮರ್ಶೆ, ಲೋಕಾನುಭವಗಳ ಭಾವಗಳು ಕಾವ್ಯಾತ್ಮಕವಾಗಿ ಹೊರಹೊಮ್ಮಿದೆ ಎಂದರು.

ಗೃಹರಕ ಜಗದೀಶ ಬಂಡಿವಡ್ಡರ ಮಾತನಾಡಿ, ಕನ್ನಡದ ಕಂಪು ಮಹಾರಾಷ್ಟ್ರದಲ್ಲಿ ಮೂಡಿಸಿ ಸಾಮರಸವೇ ಜೀವನ, ಸಮಬಾಳು ಸಮಪಾಲು ಎಂದು ಕನಕದಾಸರು ಹೇಳಿದ್ದರು. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಶ್ರೇಷ್ಠತೆ ಇರುತ್ತದೆ. ಆದ್ದರಿಂದ ಭಾವ್ಯಕ್ಯತೆ ಕಾಣಬಹುದು. ಕನಕದಾಸರ ಮೋಹನ ತರಂಗಿಣಿ, ನಳ ಚರಿತ್ರೆ, ರಾಮಧ್ಯಾನ ಚರಿತೆ, ಹರಿಭಕ್ತಸಾರ ಇತ್ಯಾದಿ ಕೃತಿಗಳಿವೆ, ಇವುಗಳಲ್ಲಿ ನಳಚರಿತ್ರೆ ಭಾಮಿನಿ ಷಟ್ಪದಿಯಲ್ಲಿದ್ದು, 9 ಸಂಧಿಗಳು 480 ಪದ್ಯಗಳು ಇವೆ ಂದು ಹೇಳಿದರು.

ಗದಗ ಜಿಲ್ಲೆಯ ನರೇಗಲ್​ ಗೃಹರಕ ದಳ ಟಕದ ಸುಮಾರು 25ಕ್ಕೂ ಹೆಚ್ಚು ಗೃಹರಕರು ಮತ್ತು ಗದಗ ಜಿಲ್ಲೆಯಿಂದ 400 ಗೃಹರಕರು ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಬಂದೋಬಸ್ತಗಾಗಿ ಕರ್ನಾಟಕದಿಂದ ತೆರಳಿ ಅಲ್ಲಿ ಕನಕದಾಸರ ಜಯಂತಿಯನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಪರಶುರಾಮ ಸಾಬಳೆ, ಪಿ. ಕೆ. ಹಡಪದ, ವೀರುಪಾ ಇಟಗಿ, ಎಸ್​. ವಿ. ಮುಶಿಗೇರಿ, ಎಂ. ಬಿ. ಕಡೆತೋಟದ, ತೌಫಿಕ್​ ಮುಲ್ಲಾ, ಎಸ್​. ಬಿ. ಮಡಿವಾಳರ, ಬಿ. ಬಿ. ನೆಲ್ಲೂರ, ಎಸ್​. ಐ. ತಳವಾರ, ಚನ್ನಪ್ಪ ಕೊಪ್ಪದ, ಎಂ. ಕೆ. ಅರಮನಿ, ಬಸವರಾಜ ಕರಡಿ, ಮಂಜು ಸಾಬಳೆ ಇತರರು ಇದ್ದರು.