ಗದಗ: ಪ್ರವಾಸ ಮಾಡುವುದರಿಂದ ಮನುಷ್ಯನಿಗೆ ರೋಚಕ ಅನುಭವ ವಾಗುತ್ತಿದ್ದು, ದೇಶ ವಿದೇಶದ ಸಾಂಸ್ಕೃತಿಕ ಹಿರಿಮೆ ಅರಿಯಲು ಪ್ರವಾಸ ಮಾಡಬೇಕೆಂದು ನಿವೃತ್ತ ಬಿಎಸ್ಎನ್ಎಲ್ ಅಧಿಕಾರಿ ಶ್ರೀ ಎಸ್ ಎಸ್ ಪಾಟೀಲ್ ಅವರು ಹೇಳಿದರು.
ಸ್ಥಳೀಯ ವಿವೇಕಾನಂದ ನಗರದಲ್ಲಿ ಶ್ರೀ ಎಸ್ ಎಸ್ ಪಾಟೀಲ್ ಅವರು 18 ದಿನಗಳವರೆಗೆ ದೇಶ ವಿದೇಶದ ಪ್ರವಾಸವನ್ನು ಸುಖಕರವಾಗಿ ಮುಗಿಸಿ ಬಂದಿದ್ದಕ್ಕಾಗಿ ಅವರಿಗೆ ವಾಯು ವಿಹಾರ ಬಳಗದಿಂದ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಸನ್ಮಾನಗೊಂಡು ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಾ ಸನ್ಮಾನ ಮಾಡಿದ್ದಕ್ಕೆ ಎಲ್ಲರಿಗೂ ಅವರು ಹೃತ್ಪೂರ್ವಕವಾದಂತ ಕೃತಜ್ಞತೆಯನ್ನು ಸಲ್ಲಿಸಿದರು.
ನಿವೃತ್ತ ಮುಖ್ಯೋದ್ಯಾಪಕರಾದ ಶ್ರೀ ಎಸ್ ಐ ಪಟ್ಟೇದ್ ಅವರು ಮಾತನಾಡಿ ಎಸ್ ಎಸ್ ಪಾಟೀಲ್ ಅವರು ಸರಳ ಸಜ್ಜನಿಕೆಯ ವ್ಯಕ್ತಿಗಳಾಗಿದ್ದು ಸದಾ ಪ್ರವಾಸ ಮಾಡುವುದರಲ್ಲಿ ಆನಂದವನ್ನು ಅವರು ಕಾಣುತ್ತಿದ್ದು ಅವರಿಗೆ ದೇವರು ಆರೋಗ್ಯ ಐಶ್ವರ್ಯ ಕೊಟ್ಟು ಕರುಣಿಸಲೆಂದು ಅವರ ಹಾರೈಸಿದರು.
ಶ್ರೀ ಆರ್ ಆರ್ ಕಾಶಪ್ಪನವರು ಇದೇ ಸಂದರ್ಭದಲ್ಲಿ ಎಸ್ ಎಸ್ ಪಾಟೀಲ್ ಅವರಿಗೆ ಶಾಲು ಹೊದಿಸಿ ಆತ್ಮೀಯವಾಗಿ ಸನ್ಮಾನಿಸಿ ಅವರು ಮಾತನಾಡುತ್ತಾ ದೇಶವನ್ನಾದರೂ ಸುತ್ತು ಇಲ್ಲ ಕೋಶವನ್ನ ಆದರೂ ಓದಬೇಕು ಎಂಬ ನಾನ್ನುಡಿಯಂತೆ ಎಸ್ ಎಸ್ ಪಾಟೀಲ್ ಅವರು ಅನೇಕ ದೇಶಗಳನ್ನು ಸುತ್ತಿ ಭಾಷೆಗಳನ್ನು ಅರಿತು ಕೊಂಡವ ರಾಗಿದ್ದು ಅವರ ಅನುಭವ ಎಲ್ಲರಿಗೂ ಮಾರ್ಗದರ್ಶನ ನೀಡಲೆಂದವರು ಹಾರೈಸಿದರು.
ಉಪನ್ಯಾಸಕ ಗಂಗಾಧರ್ ಹಿಡ್ಕಿಮಠ ಅವರು ಮಾತನಾಡಿ ಶ್ರೀ ಎಸ್ ಎಸ್ ಪಾಟೀಲ್ ಅವರು ಸದಾ ಸ್ನೇಹಿತರ ಬಳಗದಲ್ಲಿ ಇದ್ದು ಕ್ರಿಯಾಶೀಲ ವ್ಯಕ್ತಿಗಳಾಗಿದ್ದು ಅವರು ನಿವೃತ್ತ ನಂತರವೂ ಏನಾದರೂ ಚಟುವಟಿಕೆ ಗಳಲ್ಲಿ ಮಗ್ನರಾಗಿರುತ್ತಾರೆ ಎನ್ನುವುದಕ್ಕೆ ಅವರಿಗಿರುವ ಪರಿಸರ ಪ್ರೀತಿಯಿಂದ ನಮಗೆ ತಿಳಿದು ಬರುತ್ತದೆ ಅವರು ತಮ್ಮ ಗಾರ್ಡನ್ನಿನಲ್ಲಿ ಅನೇಕ ತರನಾದ ಗಿಡಗಳನ್ನು ಬೆಳೆಸಿ ಪರಿಸರವನ್ನು ಉಳಿಸಿ ಅವುಗಳನ್ನು ರಕ್ಷಿಸಿ ಕೊಂಡು ಹೋಗುತ್ತಿರುವುದು ಅವರ ಪರಿಸರ ಪ್ರೀತಿಗೆ ಸಾಕ್ಷಿಯಾಗಿದೆ ಎಂದವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಟಿ ಮೂಲಿಮನಿಯವರು ವಹಿಸಿದ್ದರು, ನಿವೃತ್ತ ಪ್ರಾಚಾರ್ಯ ಪಿ ಎಸ್ ಕಣವಿ, ಜಿ ಎಸ್ ಯತ್ನಟ್ಟಿ, ಸಜ್ಜನರ, ಶಿಕ್ಷಕ ಶ್ರೀಧರ್ ಕುಲಕರ್ಣಿ, ಮನೋಹರ್ ಸಾಸ್ವಿಹಳ್ಳಿ, ಕೆಎಸ್ಆರ್ಟಿಸಿಯ ನಿವೃತ್ತ ನೌಕರರ ಯತ್ನಟ್ಟಿಯವರು ಕೊನೆಗೆ ವಂದಿಸಿದರು.
ವರದಿ. ವಾಯುವಿಹಾರ ಬಳಗ ಗದಗ್.