ಜಿಲ್ಲೆ

ಇನ್ನರ್ ವ್ಹೀಲ್ ಸಂಸ್ಥೆ ಗದಗ ಬೆಟಗೇರಿಯ ಹೊಲಿಗೆ ಯಂತ್ರ ಕೊಡುಗೆ

Gadag - Shivanand Hiremath


Gadag: ಮಹಿಳೆಯರಿಗೆ ಸೀಮಿತ ಶಿಕ್ಷಣವು ಉತ್ತಮ ಗುಣಮಟ್ಟದ ಉದ್ಯೋಗಗಳನ್ನು ಹುಡುಕುವಲ್ಲಿ ಅಡ್ಡಿಪಡಿಸುತ್ತದೆ. ಉತ್ತಮ ಗುಣಮಟ್ಟದ ಉದ್ಯೋಗವು ದೊರಕದಿದ್ದಾಗ ಸಹಜವಾಗಿ ಕುಟುಂಬವು ಬಡತನದಲ್ಲಿ ಬದುಕುವುದು ಅನಿವಾರ್ಯವಾಗುತ್ತದೆ. ಇಂತಹ ಮಹಿಳೆಯರು ಕೌಶಲ್ಯ ತರಬೇತಿ ಪಡೆದು ತಮ್ಮದೆ ಉದ್ಯೋಗವವನ್ನು ಪ್ರಾರಂಭಿಸುವುದರಿAದ ಕುಟುಂಬದ ಆರ್ಥಿಕ ಪ್ರಗತಿಯಾಗುವದರ ಜೊತೆಗೆ ಸ್ವಾವಲಂಬಿ ಜೀವನ ನಡೆಸಬಹುದು. ಬಟ್ಟೆ ಹೊಲಿಯುವ ಕೌಶಲ್ಯವನ್ನು ಹೊಂದಿದ ಶ್ರೀಮತಿ ಅನಿತಾ ಶಿವಾಜಿ ಎಂಬ ಮಹಿಳೆಗೆ ಇನ್ನರ್ ವ್ಹೀಲ್ ಸಂಸ್ಥೆ ಗದಗ ಬೆಟಗೇರಿಯ ವತಿಯಿಂದ ಹೊಲಿಗೆ ಯಂತ್ರವನ್ನು ನೀಡಿ ಆಕೆಗೆ ಸ್ವ ಉದ್ಯೋಗ ಹೊಂದಲು ಸಹಾಯ ಮಾಡಿದೆ. ಪ್ರತಿಯೊಬ್ಬ ಮಹಿಳೆಯು ಸ್ವಾವಲಂಬಿಯಾಗಿ ತಮ್ಮ ಕುಟುಂಬಕ್ಕೆ ಪ್ರೀತಿ ಹಾಗೂ ವಾತ್ಸಲ್ಯದ ಜೊತೆಗೆ ಆರ್ಥಿಕ ಪ್ರಗತಿಹೊಂದಲು ಸಹಾಯಮಾಡಬೇಕಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ನಾಗರತ್ನ ಮಾರನಬಸರಿಯವರು ಹೊಲಿಗೆ ಯಂತ್ರವನ್ನು ನೀಡಿ ತಮ್ಮ ಅನಿಸಿಕೆಯನ್ನು ತಿಳಿಸಿದರು. ಸಂಸ್ಥೆಯ ಸದಸ್ಯೆ ಶ್ರೀಮತಿ ಸುವರ್ಣಾ ಮದರಿಮಠರವರು ಈ ಹೊಲಿಗೆ ಯಂತ್ರದ ಪ್ರಾಯೊಜತ್ವವನ್ನು ನೀಡದ್ದರು ಅವರಿಗೆ ಅಧ್ಯಕ್ಷರು ಧನ್ಯವಾದಗಳನ್ನು ತಿಳಿಸುತ್ತ ತಾವು ಶ್ರೀಮತಿ ಅನಿತಾ ಶಿವಾಜಿಯವರಿಗೆ ನೀಡಿದ ಹೊಲಿಗೆ ಯಂತ್ರದಿAದ ಅವರ ಜೀವನದ ಆರ್ಥಿಕ ಮಟ್ಟವು ಉನ್ನತಮಟ್ಟಕ್ಕೇರಲಿದೆಯೆಂದರು. ಈ ಸಂಧರ್ಭದಲ್ಲಿ ಇನ್ನರ್ ವ್ಹೀಲ್ ಜಿಲೆ ೩೧೭ದ ಮಾಜಿ ಚೇರಮನ್ನರಾದ ಶ್ರೀಮತಿ ಪ್ರೇಮಾ ಗುಳಗೌಡರ ವೇದಿಕೆಯಮೇಲೆ ಉಪಸ್ಥಿತರಿದ್ದರು.
ಇನ್ನರ್ ವ್ಹೀಲ್ ಸಂಸ್ಥೆ ಗದಗ ಬೆಟಗೇರಿಯ ಕಾರ್ಯದರ್ಶಿಗಳಾದ ಶ್ರೀಮತಿ ವೀಣಾ ತಿರ್ಲಾಪೂರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಐಎಸ್‌ಓ ಶ್ರೀಮತಿ ಪುಷ್ಪಾ ಭಂಡಾರಿ, ಸದಸ್ಯರಾದ ಶ್ರೀಮತಿ ಶಾಂತಾ ನಿಂಬಣ್ಣವರ, ಶ್ರೀಮತಿ ಶ್ರೀಯಾ ಪವಾಡಶೆಟ್ಟರ, ಶ್ರೀಮತಿ ಶಾಂತಾ ಗೌಡರ, ಶ್ರೀಮತಿ ಸುಮಾ ಪಾಟೀಲ, ಶ್ರೀಮತಿ. ಶಾಂತಾ ಮುಂದಿನಮನಿ, ಶ್ರೀಮತಿ ಪ್ರತಿಭಾ ಭದ್ರಶೆಟ್ಟಿ, ಜಂಟಿ ಕಾರ್ಯದರ್ಶಿ ಜ್ಯೋತಿ ದಾನಪ್ಪಗೌಡರ್, ಪ್ರೇಮಾ ಹಂದಿಗೋಳ್, ಶ್ರೀಮತಿ ಸರೋಜ ಆಲೂರ, ಶ್ರೀಮತಿ ಅಬ್ಬಿಗೇರಿ ಮುಂತಾದವರು ಉಪಸ್ಥಿತರಿದ್ದರು.