ಗದಗ: ಮನೆ ಬಿಟ್ಟು ಓಡಿಹೋಗಿ ಅಲ್ಲಿ-ಇಲ್ಲಿ ಬಿದ್ದು ಸಾಯುತ್ತಿರುವುದು ತುಂಬಾ ದುಃಖದಾಯಕವಾದುದು ಎಂದು ಖ್ಯಾತ ನಾಟಕಕಾರ, ನಿರ್ದೇಶಕ ಪ್ರೊ. ಆರ್.ಎನ್. ಕುಲಕರ್ಣಿ ಸಂಕಟ ವ್ಯಕ್ತಪಡಿಸಿದರು.
ಪ್ರೊ. ಆರ್.ಎನ್. ಕುಲಕರ್ಣಿ ಜನಜಾಗೃತಿ ಚಿಂತನ ವೇದಿಕೆಯ ಸಾಪ್ತಾಹಿಕ ಜನಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ ದಿನದಿಂದ ದಿನಕ್ಕೆ ಜನ-ಜೀವನ ಅಶಾಂತಿ, ಅಸಹನೀಯವಾಗುತ್ತ ಸಾಗುತ್ತಿರುವುದು ತುಂಬಾ ಚಿಂತನೀಯವಾದುದು, ಅದರಲ್ಲಿ ಮಕ್ಕಳು, ಯುವಕರು, ವೃದ್ಧರು ಮನೆಬಿಟ್ಟು ಹೋಗಿ ಅಲ್ಲಿ-ಇಲ್ಲಿ ಬಿದ್ದು ಸಾಯುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ.
ದಿನ ಬೆಳಗಾಗಿ ಪತ್ರಿಕೆ ತೆಗೆದರೆ ಅಲ್ಲಿ-ಇಲ್ಲಿ ಬಿದ್ದು ಸಾಯುತ್ತಿರುವುದು ಅನಾಥ ಅನೇಕ ಶವಗಳು ಪತ್ತೆಯಾಗುತ್ತಿವೆ.
ಮಕ್ಕಳು ಡಾಕ್ಟರ್, ಇಂಜಿನೀಯರ ಆಗಬೇಕೆಂದು ಪಾಲಕರು ನಿರಂತರ ಅಧ್ಯಯನ ಮಾಡಲು ಪೀಡಿಸುವುದು ಕಡಿಮೆ ಅಂಕಗಳು ಬಂದರೆ ಹೀಯಾಳಿಸಿ ಹೊಡಿ ಬಡಿ ಮಾಡಿದಾಗ ಮಕ್ಕಳು ಮನೆ ಬಿಟ್ಟು ಓಡಿ ಹೋಗಿ ಆತ್ಮಹತ್ಯೆಗೆ ತುತ್ತಾಗುತ್ತಾರೆ.
ಸದಾಕಾಲ ಮನೆಯಲ್ಲಿ ಗಂಡ-ಹೆAಡತಿಯ ಮಧ್ಯೆ ಕಲಹ, ಅಶಾಂತಿ, ಅಭಾವ, ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ಹೊಡಿ-ಬಡಿ ಮಾಡುವುದು ಇತ್ಯಾದಿ ಅವರು ಮನೆ ಬಿಟ್ಟು ಹೋಗಲು ಕಾರಣವಾಗುತ್ತದೆ.
ಅತಿರೇಕದ ಚಟದಿಂದ ಮನೆಯಲ್ಲಿ ಬಡತನ, ವಾದ, ಕಲಹಗಳು ಹಸಿವೆ ತಾಂಡವವಾಡುತ್ತವೆ. ಇದಕ್ಕೆ ಬೇಸತ್ತು ಮನೆಬಿಟ್ಟು ಹೋಗಿ ಎಲ್ಲಾದರೂ ಆತ್ಮಹತ್ಯೆ ಮಾಡಿಕೊಳ್ಳುವರು.
ಆಫೀಸಗಳಲ್ಲಿ ಮೇಲಾಧಿಕಾರಿಗಳ ನಿರಂತರ ಚುಚ್ಚುವಿಕೆ, ದುಷ್ಟ ಮಾತುಗಳಿಂದ ಕೆಳಗಿನ ಕೆಲಸಗಾರರು ಜೀವ ಕೊಡುವರು. ಶಾಲೆ, ಕಾಲೇಜುಗಳಲ್ಲಿ ಸಹಿಸಲಾರದಷ್ಟು ಪೀಡೆ ಇತ್ಯಾದಿ.
ಮನಸ್ಸಿಗೆ ವಾದ, ವಿವಾದ ಹೀಗೆ ಅನೇಕ ಕಾರಣಗಳಿಂದ ಮನೆ ಬಿಟ್ಟು ಓಡಿ ಹೋಗುವುದು, ಜೀವನದಲ್ಲಿ ಇವೆಲ್ಲ ನಡೆಯುತ್ತಲೆ ಇರುತ್ತದೆ. ಆದ್ದರಿಂದ ಎಲ್ಲವನ್ನು ಖಾತ್ರಿ ಸಮಾಧಾನ, ಪ್ರೀತಿಯಿಂದ ಬಗೆಹರಿಸಿಕೊಳ್ಳಬೇಕು. ಜೀವನ ಹರಿಯುವ ನೀರು, ಇಂದಿಲ್ಲ ನಾಳೆ ದಿನಗಳು ಕಳೆದು ಸುಂದರ ಬೆಳಗು ಉದಯಸುತ್ತವೆ ಎಂದರು.
ಇನ್ನೋರ್ವ ಅತಿಥಿ ಕಿರುಚಿತ್ರಗಳ ನಿರ್ಮಾಪಕ, ನಿರ್ದೇಶಕ ಮೌನೇಶ ಬಡಿಗೇರ ಮಾತನಾಡಿ ಎಲ್ಲದಕ್ಕೂ ಆತ್ಮಹತ್ಯೆ ಮನೆ ಬಿಟ್ಟು ಹೋಗುವುದು ಒಂದೇ ಮಾರ್ಗವಲ್ಲ, ರಾತ್ರಿ ಕಳೆದ ಮೇಲೆ ಹಗಲು ಬಂದೇ ಬರುತ್ತದೆ. ಅದಕ್ಕಾಗಿ ಸಮಾಧಾನದಿಂದ ಕಾಯಬೇಕೆಂದರು.
ವೇದಿಕೆಯ ಮೇಲೆ ಜನಜಾಗೃತಿ ಚಿಂತನ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರೊ. ಅಜೀತ ಮೋಡಕ ಸರ್ವರನ್ನು ಸ್ವಾಗತಿಸಿ, ಆಭಾರ ಮನ್ನಿಸಿದರು. ಪ್ರೊ. ದತ್ತಪ್ರಸನ್ನ ಪಾಟೀಲ ಕಾರ್ಯಕ್ರಮವನ್ನು ನಿರೂಪಿಸಿದರು.