ಜಿಲ್ಲೆ

ರೈಲ್ವೆ ಮೇಲು ಸೇತುವೆ ನಾಡ ಜನತೆಯ ಗೆಲುವಾಗಿದೆ: ಎಮ್. ಜಿ ಹಿರೇಮಠ

Gadag - Shivanand Hiremath

ಗದಗ: ದಶಕಗಳಿಂದ ಗ್ರಾಮದ ಕೃಷಿಗಾಗಿ ಸಾಧ್ಯವಾಗದ ಈ ಹೊಸದಾದ ರೈಲು ಮೇಲು ಸೇತುವೆ ಈ ನಾಡ ಕೃಷಿಕರ ಮತ್ತು ಜನತೆಯ ಗೆಲುವಾಗಿದೆ ಎಂದು ಗದಗ ಜಿಲ್ಲೆಯ ನಿವೃತ್ತ ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ ಹೇಳಿದರು.
ಅವರು ಭಾನುವಾರ ಗದಗ ತಾಲೂಕಿನ ಸುಕ್ಷೇತ್ರ ಬಳಗಾನೂರಿನ ಚಿಕ್ಕೇನಕೊಪ್ಪ ಶ್ರೀ ಚೆನ್ನವೀರ ಶರಣರ ೨೯ನೇ ಪುಣ್ಯ ಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವದ ಪ್ರಯುಕ್ತ ಶರಣರ ಜೀವನ ದರ್ಶನ ಪ್ರವಚನದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಬಳಗಾನೂರ ಗ್ರಾಮದ ಸಮಸ್ತ ನಾಗರಿಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸುಮಾರು ೪೫ ಗ್ರಾಮಗಳ ಜನರಿಗೆ ಉಪಯುಕ್ತವಾದ ಈ ಸೇತುವೆಯಿಂದ ಕೃಷಿಕರ ಕಾಮಧೇನು ಎನಿಸಿದೆ. ನಾನು ಜಿಲ್ಲಾಧಿಕಾರಿ ಇದ್ದಾಗ ಇಲ್ಲಿಯ ಜನರ ಸಹಕಾರ ಮರೆಯಲಾರೆ. ಹೆಣ್ಣು, ಗಂಡು ಎಂಬ ಬೇಧ, ಭಾವ ಬೇಡ ಹೆಣ್ಣು ಮಕ್ಕಳು ಮಾತೃ ಸಮಾನ. ಅವರಿಗೆ ಸರಿಯಾದ ಶಿಕ್ಷಣ ಕೊಡಿಸಿ ಅವರ ಸರ್ವಾಂಗೀಣ ಅಭಿವೃದ್ಧಿಗೆ ಹೆಗಲು ಕೊಡುವದಾಗಬೇಕು. ನಾನು ಈ ಸಮಾನತೆಯ ಭೇಟಿ ಬಾಚಾವೋ, ಭೇಟಿ ಪಢಾವೋ ಯಶಸ್ವಿ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ ನನಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನ ನೀಡಿದ್ದು ಇಲ್ಲಿಯ ಮಣ್ಣಿನ ಋಣ ಎಂದು ಭಾವಿಸಿದ್ದೇನೆ. ನಮ್ಮಲ್ಲಿರುವ ಕೀಳರಿಮೆ ಅತ್ಯಂತ ದೊಡ್ಡ ಸಾವು. ಪ್ರತಿಯೊಬ್ಬರಲ್ಲೂ ಗೆಲುವಿನ ಭಾವವಿರಲಿ. ಧನಾತ್ಮಕ ಚಿಂತನೆಯಿAದ ಎಲ್ಲವನ್ನೂ ಸಾಧಿಸಬಹುದಾಗಿದ್ದು ಆ ದಿಸೆಯಲ್ಲಿ ಸಾಗುವ ಮನಸ್ಸುಗಳಿರಬೇಕು. ಹೆಣ್ಣು ಮಕ್ಕಳಿಗೆ ಸರ್ಕಾರ ವಿಶೇಷ ಸವಲತ್ತುಗಳನ್ನು ಘೋಷಿಸಿದ್ದು ಅವುಗಳ ಸದ್ಬಳಕೆಗೆ ಮುಂದಾಗಬೇಕೆAದರಲ್ಲದೆ, ಸನ್ಮಾನ ಕೊಟ್ಟ ಗ್ರಾಮದ ಜನತೆಗೆ ಧನ್ಯವಾದ ಅರ್ಪಿಸಿದರು. ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಶಿವಶಾಂತವೀರ ಶರಣರು ಮಾನ್ಯ ಎಂ.ಜಿ.ಹಿರೇಮಠ ರವರನ್ನು ಸನ್ಮಾನಿಸಿ ಆಶೀರ್ವಚನ ನೀಡಿ ಶುಭ ಹಾರೈಸಿದರು.
ಗ್ರಾಮದ ಯುವ ಉತ್ಸಾಹಿ ಸರಳ ಸಜ್ಜನಿಕೆಯ ನಾಯಕ. ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷರಾದ ಡಾ. ಹನುಮಂತಗೌಡ ಆರ್ ಕಲ್ಮನಿಯವರು ಸರ್ವರನ್ನು ಸ್ವಾಗತಿಸಿ ಮಾತನಾಡಿ ಮಾನ್ಯ ಎಂ.ಜಿ.ಹಿರೇಮಠ ಸರ್ ಅವರು ಗದಗ ಜಿಲ್ಲಾಧಿಕಾರಿಗಳಾಗಿದ್ದ ಸಂದರ್ಭದಲ್ಲಿ ನಮ್ಮೆಲ್ಲ ಬೇಡಿಕೆಗಳು ಈಡೇರಿವೆ. ಕೃಷಿಕರ ಹೊಲ ಗದ್ದೆಗಳಿಗೆ ಹೋಗಲು ನಾಲ್ಕೈದು ಕಿ.ಮೀ.ಸುತ್ತಬೇಕಾಗಿದ್ದ ನಮಗೆ ಕೇವಲ ಅರ್ಧ ಕಿ.ಮಿನಲ್ಲಿ ನಮ್ಮ ಹೊಲಗಳಿಗೆ ತಲುಪುವ ದಾರಿ ಮಾಡಿ ಕೊಟ್ಟು ನಮ್ಮ ಪ್ರೀತಿ, ವಿಶ್ವಾಸ ಗಳಿಸುವಲ್ಲಿ ಸಫಲರಾದವರು ಇವರು ಇನ್ನೂ ನಮ್ಮಲ್ಲಿ ಇವರು ಇರಬೇಕಾಗಿತ್ತು ನಮ್ಮ ಬಳಗಾನೂರನ ಶ್ರೀ ಚನ್ನವೀರ ಶರಣರ ಮಠ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಕೊಂಡು ಅದ್ವಿತೀಯ ಕೊಡುಗೆ ನೀಡಿದೆ. ಎಂದರಲ್ಲದೆ ರೈಲು ಸೇತುವೆ ಯೋಜನೆಗೆ ಶ್ರಮಿಸಿದ. ಮತ್ತು ಸಹಕರಿಸಿದ. ಶ್ರೀ ಪೂಜ್ಯ ಶ್ರೀ ಶಿವಶಾಂತವೀರ ಶರಣರಿಗೆ ನಮನಗಳನ್ನು ಸಲ್ಲಿಸಿ ಮತ್ತು ಗ್ರಾಮಸ್ಥರಿಗೂ ಧನ್ಯವಾದ ಹೇಳಿದರು.ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಗ್ರಾಮದ ಗಣ್ಯರು ಉಪಸ್ಥಿತರಿದ್ದರು. ಅಪಾರ ಸಂಖ್ಯೆಯಲ್ಲಿ ಗ್ರಾಮದ ಹಾಗೂ ಸುತ್ತಲಿನ ಗ್ರಾಮಗಳ ಸದ್ಭಕ್ತರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದು ಶ್ರೀ ಗಳ ಆರ್ಶೀವಚನ ಪಡೆದು ಪುಣೀತರಾದರು