ಜಿಲ್ಲೆ

ಮಾದಕ ವಸ್ತುಗಳ ವ್ಯಸನಕ್ಕೆ ಯುವ ಸಮೂಹ ಬಲಿಯಾಗುತ್ತಿರುವುದು ಖೇದಕರ: ಹುಸೇನಸಾಬ ವಣಗೇರಿ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಮಾದಕ ವಸ್ತುಗಳ ವ್ಯಸನ ಎಂಬುದು ಸಮಾಜಕ್ಕೆ ಅಂಟಿದ ರೋಗವಾಗಿದೆ. ಆ ರೋಗಕ್ಕೆ ಯುವ ಸಮೂಹವೇ ಬಲಿಯಾಗುತ್ತಿದೆ ಎನ್ನುವುದು ಖೇದಕರ ವಿಷಯ ಎಂದು ಹುಸೇನಸಾಬ ವಣಗೇರಿ ಹೇಳಿದರು.
ನಗರದ ನವಜ್ಯೋತಿ ಸೇವಾ ಸಂಸ್ಥೆಯ ವ್ಯಸನ ಮುಕ್ತಿ ಹಾಗೂ ಪುನರ್ವಸತಿ ಕೇಂದ್ರದಲ್ಲಿ ಮಂಗಳವಾರ ನಡೆದ ಮಾದಕ ದ್ರವ್ಯ ವಿರೋಧಿ ದಿನಾಚರಣೆಯಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ತಂಬಾಕು ಮದ್ಯ ಸೇರಿದಂತೆ ಹಲವು ವ್ಯಸನಕ್ಕೆ ತುತ್ತಾಗುವ ಪದಾರ್ಥಗಳನ್ನು ಸೇವಿಸುವುದು ಅತೀ ದೊಡ್ಡ ಕಂಟಕವಾಗಿದೆ. ಅದರಿಂದ ಹೊರಬಂದು ನೆಮ್ಮದಿಯ ಬದುಕು ಸಾಗಿಸುವುದು ಅವಶ್ಯವಾಗಿದೆ. ಅದಕ್ಕಾಗಿ ಎಲ್ಲರೂ ವ್ಯಸನಮುಕ್ತರಾಗಿ ಸಶಕ್ತ ಸಮಾಜವನ್ನು ನಿಮಿರ್ಸಬೇಕು ಎಂದರು.
ಪ್ರಕಾಶ ಗಾಣಿಗೇರ ಮಾತನಾಡಿ, ವ್ಯಸನಕ್ಕೆ ನಮ್ಮ ದುರ್ಬಲ ಮನಸ್ಸೇ ಕಾರಣ. ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡು ಸರಿಯಾದ ಮಾರ್ಗದಲ್ಲಿ ನಡೆದಿದ್ದೇ ಆದರೆ ವ್ಯಸನದಿಂದ ಮುಕ್ತರಾಗಬಹುದು ಎಂದರು.
ಕಾಮಿರ್ಕ ಕಲ್ಯಾಣ ಇಲಾಖೆಯ ಅಧಿಕಾರಿ ಸಂದೇಶ ಪಾಟೀಲ್​ ಮಾತನಾಡಿ. ಅಸಂಟಿತ ವಲಯದ ಕಾಮಿರ್ಕರು ಬಹಳಷ್ಟು ಸಾರಿ ವ್ಯಸನಕ್ಕೆ ತುತ್ತಾಗಿ ಆಥಿರ್ಕವಾಗಿ ಹಿನ್ನೆಡೆ ಅನುಭವಿಸುತ್ತಾರೆ. ವ್ಯಸನದಿಂದ ವಿಮುಕ್ತರನ್ನಾಗಿ ಮಾಡಲು ಸರ್ಕಾರ ಬಹಳಷ್ಟು ಯೋಜನೆಗಳನ್ನು ಜಾರಿ ತಂದಿದೆ. ಅವುಗಳ ಉಪಯೋಗ ಪಡೆದು ಆಥಿರ್ಕವಾಗಿ ಸಬಲರಾಗಿ ವ್ಯಸನಮುಕ್ತ ಜೀವನ ನಡೆಸಬೇಕು ಎಂದರು. ಕಾರ್ಯಕ್ರಮದಲ್ಲಿ
ಕಾಮಿರ್ಕ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ಬಿ. ಆರ್​. ಜಾಧವ, ಈಶ್ವರ ಹಟ್ಟಿ, ಹನಮಂತಗೌಡ ಪಾಟೀಲ, ಬಸವರಾಜ ಕರಲಿಂಗಣ್ಣವರ ಇತರರು ಇದ್ದರು.