ಮರೆಯಾಗಲಿ ಕಹಿ ಟನೆ! ಮರೆಯದಿರಲಿ ಶುಭ ಳಿಗೆ
ಶಿವಾನಂದ ಹಿರೇಮಠ, ಗದಗ
ಇನ್ನೂ ಕೆಲವೇ ದಿನಗಳಲ್ಲಿ 2024 ಕ್ಯಾಲೆಂಡರ್ ವರ್ಷ ಕೊನೆಗೊಳ್ಳಲಿದೆ. ಎಂದಿನಂತೆ ಹೊಸ ಕ್ಯಾಲೆಂಡರ್ ವರ್ಷದ ಸ್ವಾಗತಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಹಲವು ನೆನಪಿನ ಬುತ್ತಿಗಂಟಿನೊಂದಿಗೆ 2024 ಕೊನೆಗೊಳ್ಳುವ ಮುಂಚೆ ನೆನಪುಗಳನ್ನು ಮೆಲಕು ಹಾಕೋಣ. ನಗರಸಭೆ ಅಕ್ರಮ, ಮರಳು ದಂಧೆ, ಮುಗಿಯದ ಕಳಸಾ ಬಂಡೂರಿ ಯೋಜನೆ, ಬಜೆಟ್ನಲ್ಲಿ ಜಿಲ್ಲೆಗೆ ಏನು ಎಂಬ ಕಹಿ&ಸಿಹಿ ಅನುಭವಗಳನ್ನು ಮತ್ತೊಮ್ಮೆ ಸ್ಮರಿಸಿ 2024ಕ್ಕೆ ವಿಧಾಯ ಹೇಳೋಣ.
ನಗರಸಭೆಯಲ್ಲಿ ನಾನಾ ವಿಗ್ನಗಳು:
ವರ್ಷದ ಆರಮಭದಲ್ಲೇ ನಗರಸಭೆಯಲ್ಲಿ ನಾನಾ ಪ್ರಕರಣಗಳು ಬೆಳಕಿಗೆ ಬಂದವು. ಪ್ರತಿ ತಿಂಗಳು ಅಂದಾಜು 45 ಲಕ್ಷ ರೂ. ಕೊರತೆ ಅನುಭವಿಸುತ್ತಿರುವ ನಗರಸಭೆ ಸಾಮಾನ್ಯ ನಿಧಿಯಿಂದ ವಾಷಿರ್ಕ 1 ಕೋಟಿಗೂ ಅಧಿಕ ವೆಚ್ಚದ ಬೀದಿ ದೀಪ ನಿರ್ವಹಣೆ ಗುತ್ತಿಗೆಯಲ್ಲಿ ಭ್ರಷ್ಟಾಚಾರದ ಪ್ರಕರಣ 2024ರ ಜನವರಿಯಲ್ಲಿ ಬೆಳಕಿಗೆ ಬಂದಿತ್ತು. ಆಥಿರ್ಕ ಬಿಡ್ ತೆರೆಯುವ ಪೂರ್ವದಲ್ಲೇ ಗುತ್ತಿಗೆ ದರಕ್ಕೆ ಅನುಮೋದನೆ ನೀಡಿದ್ದ ಪ್ರಕರಣ ಜಿಲ್ಲೆಯಾದ್ಯಂತ ಸದ್ದು ಮಾಡಿತ್ತು. ನಗರಸಭೆ ಅಂದಿನ ಅಧಿಕಾರಿಗಳಿಗೆ ಜಿಲ್ಲಾಡಳಿತು ಕೆಸಿಎಸ್ ನಿಯಮಗಳ ಪ್ರಕಾರ ಅಗತ್ಯ ಶಿಸ್ತು ಕ್ರಮಕ್ಕೆ ಶಿಾರಸ್ಸು ಮತ್ತು ಕ್ರಮದ ಎಚ್ಚರಿಕೆ ನೀಡಿತ್ತು. ವಿಜಯವಾಣಿ ದಿನಪತ್ರಿಕೆ ನಿರಂತರ ವರದಿ ಪರಿಣಾಮ ಬೀದಿ ದೀಪ ನಿರ್ವಹಣೆ ಟೆಂಡರ್ ಅನ್ನು ಜಿಲ್ಲಾಡಳಿತ ರದ್ದು ಮಾಡಿತ್ತು.
ನಿಯಮ ಬಾಹಿರ ಹಕ್ಕುಪತ್ರ:
ಗದಗ ಬೆಟಗೇರಿ ನಗರಸಭೆಯಲ್ಲಿ ಅಭಿವೃದ್ಧಿ ಕಾಣದ ನಿವೇಶನಗಳಿಗೂ ಫಾರ್ಮ ನಂ 3(ಹಕ್ಕು ಬದಲಾವಣೆ ಪತ್ರ/ ಉತಾರ) ವಿತರಣೆ ಮಾಡಿದ ಬಹುದೊಡ್ಡ ಭ್ರಷ್ಟಾಚಾರ ಬಯಲಾಯಿತು. ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರ ನೀಡುವ ನಿರಪೇಾ ಪತ್ರ (ಸಿಸಿ) ಇಲ್ಲದಿದ್ದರೂ ನಗರಸಭೆಯಲ್ಲಿ ಉತಾರ ನೀಡಿದ ಪ್ರಕರಣ ಇದಾಗಿದೆ. ಹೀಗೆ ಸಿಸಿ ಇಲ್ಲದೆ 1063 ನಿವೇಶನಗಳಿಗೆ ಗದಗ ಬೆಟಗೇರಿ ನಗರಸಭೆ 2023& 2024ನೇ ಸಾಲಿನಲ್ಲಿ ಫಾರ್ಮ 3 ವಿತರಣೆ ಮಾಡಿತ್ತು. ಅಕ್ರಮ ಬಯಲಾಗುತ್ತಿದ್ದಂತೆ ಎಚ್ಚೆತ್ತ ನಗರಸಭೆ ನಿಯಮಗಳನ್ನು ಪಾಲಿಸುತ್ತಿದೆ.
6 ತಿಂಗಳು ಖಾಲಿ ಇತ್ತಯ ಜಿಪಂ ಸಿಇಒ ಹುದ್ದೆ:
ಪ್ರಸಕ್ತ ವರ್ಷ ಜಿಪಂ ಸಿಇಒ ಹುದ್ದೆ 6 ತಿಂಗಳುಗಳ ಕಾಲ ಖಾಲಿ ಇತ್ತು ಎಂಬುದೇ ವಿಶೇಷ. ಗದಗ ಜಿಪಂ ಸಿಇಒ ಆಗಿದ್ದ ಬಿ. ಸುಶೀಲಾ ಅವರು 2023 ಜು. 18 ರಂದು ಯಾದಗಿರಿ ಜಿಲ್ಲಾಕಾಧಿರಿಯಾಗಿ ವರ್ಗಾವಣೆ ಆಗಿದ್ದಾರೆ. ಅಂದಿನಿಂದ 6 ತಿಂಗಳ ವರೆಗೆ ಹುದ್ದೆ ಖಾಲಿ ಇತ್ತು. ಜಿಲ್ಲಾಧಿಕಾರಿ ಆಗಿದ್ದ ವೈಶಾಲಿ ಎಂ.ಎಲ್. ಅವರು ಸಿಇಒ ಹುದ್ದೆ ಪ್ರಭಾರ ವಹಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದರು. ಬರಗಾಲ ನಿರ್ವಹಣೆಯಲ್ಲಿ ಜಿಪಂ ಸಿಇಓ ಹುದ್ದೆ ಅತ್ಯಂತ ಪ್ರಮುಖವಾಗಿತ್ತು. 6 ತಿಂಗಳು ಖಾಲಿ ಇದ್ದದ್ದು ಏಕೆ ಎಂಬ ಯಕ್ಷ ಪ್ರಶ್ನೆಗೆ ಜಿಲ್ಲೆಯಲ್ಲಿ ಇನ್ನೂ ಉತ್ತರ ಸಿಗದಂತಾಗಿದೆ.
ಅಕ್ರಮ ನೇಮಕಾತಿ:
ನಗರಸಭೆ ಪದವಿಪೂರ್ವ ಕಾಲೇಜಿನಲ್ಲಿ ಖಾಲಿ ಇದ್ದ ದೈಹಿಕ ಶಿಕ್ಷಕ ನೇಮಕಾತಿಯಲ್ಲಿ 40 ಲಕ್ಷ ರೂ. ಅವ್ಯವಹಾರ ನಡೆದಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಅಬ್ಬರಿಸಿ ಬೊಬ್ಬೆರದ ನಗರಸಭೆ ಪ್ರತಿಪಕ್ಷವು ಕಾಳ ಕಳೆದಂತೆ ಮೌನವಾಗಿದ್ದು ನಗರಾದ್ಯಂತ ಹಲವು ಅನುಮಾನಗಳನ್ನು ಸೃಷ್ಟಿಸಿತು. ಮೆರಿಟ್ ಆಧಾರದಲ್ಲಿ ನೇಮಕವಾಗುವ ಶಿಕ್ಷಕರ ನೇಮಕಾತಿಯ ಅಂಕಗಳನ್ನು ಶೇ. 55ಕ್ಕೆ ಮಿತಿಗೊಳಿಸಿ ನೋಟೀಫಿಕೇಷನ್ ಹೊರಡಿಸಿದ್ದು ನಗರಸಭೆಯ ಮೊದಲ ಪ್ರಮಾದವಾಗಿದೆ ಎಂಬುದು ವಿಪಕ್ಷದ ಆರೋಪವಾಗಿತ್ತು. ಮೆರಿಟ್ ಮೇಲೆ ನೇಮಕ ಮಾಡಬೇಕು ಎಂಬುದು ಸರ್ಕಾರದ ನಿಯಮವೇ ಇದೆ. ಇಲ್ಲಿ ಸರ್ಕಾರದ ನಿಯಮ ಉಲ್ಲಂನೆ ಆಗಿದೆ ಎಂದು ಕಾಂರೆಸ್ ಆರೋಪಿಸಿತ್ತು.
ದರ ದುಪ್ಪಟ್ಟು:
ರಾಜ್ಯ ಸರ್ಕಾರ ನೋಂದಣಿ ದರಗಳನ್ನು ಏಕಾಏಕಿ ದುಪ್ಪಟ್ಟು ಮಾಡಿದ ಹಿನ್ನೆಲೆ ಜಿಲ್ಲೆಯ ರೈತಾಪಿ ವರ್ಗ ತೊಂದರೆ ಅನುಭವಿಸಿದೆ. ಸಾಮನ್ಯ ಅಫೀಡವಿಟ್ ಪಡೆಯಲು ಈ ಮೊದಲು 20 ರೂ. ಸ್ಟಾಂಪ್ ಬಳಸಲಾಗುತ್ತಿತ್ತು. ಹೊಸ ದರದ ಅನ್ವಯ 100 ರೂ. ಸ್ಟಾಂಪ್ ಕಡ್ಡಾಯವಾಗಿದೆ. ವಿವಿಧ ಪರಿಕರಗಳನ್ನು ಸಹಾಯಧನದಲ್ಲಿ ಪಡೆಯಲು 20 ರೂ. ಬದಲಾಗಿದೆ 100 ರೂ. ಸ್ಟಾಂಪ್(ನೋಟರಿ) ಮಾಡಿಸುವುದು ಕಡ್ಡಾಯವಾಗಿದೆ. ಜಮೀನಿನ ಖರೀದಿ, ವಚನ ಪತ್ರಗಳಿಗೆ ಜಮೀನಿನ ಮೂಲ ಮಾರುಕಟ್ಟೆ ದರಕ್ಕೆ ಶೇ.1 ರಷ್ಟು ಭರಿಸಬೇಕಿದ್ದ ದರವನ್ನು ಈಗ ಶೇ 0.5ರಷ್ಟು ಭರಿಸಬೇಕಿದೆ. ರೂ.ಗಳ ಪಾವತಿಯಲ್ಲಿ ಈ ಬೆಲೆ ಲಕ್ಷಕ್ಕೂ ಅಧಿಕವಾಗುವುದರಿಂದ ರೈತರು ಸೇರಿದಂತೆ ಎಲ್ಲ ವರ್ಗಕ್ಕೂ ಹೊರೆ ಆಗಲಿದೆ. ವಿವಿಧ ಪ್ರಾಧಿಕಾರದಿಂದ ಕೇಳಲ್ಪಡಿವ ಮುಚ್ಚಳಿಕೆ ಪತ್ರ, ದತ್ತಕ ಪತ್ರ, ಜನನ ಪ್ರಮಾಣ ಪತ್ರ, ಮೂಲ ದಾಖಲೆ ಪಡೆಯಲು. ಕೋರ್ಟ್ ಗೆ ಅಫಿಡಿವಿಟ್ ಸಲ್ಲಿಸಲು ಇನ್ಮುಂದೆ 100 ರೂ. ಸ್ಟಾಂಪ್ ಕಡ್ಡಾಯ. ರೈತರು ತಮ್ಮ ಹೊಲ ಗದ್ದೆಗಳ ಪಾಲುದಾರಿಕೆ ಪಡೆಯಲು ಈ ಮೊದಲು ಏಕರೆ ಲೆಕ್ಕದಲ್ಲಿ 200 ರೂ. ನಿಂದ 1000 ರೂ. ವರೆಗೆ ಸ್ಟಾಂಪ್ ದರ ಪಾವತಿಸಬೇಕಿತ್ತು. ಈಗ ಪ್ರತಿ ಹಿಸ್ಸಾಗೆ(ಪ್ರತಿ ಪಾಲುದಾರಿಕೆ) 1000 ರೂ. ನಿಂದ 5000 ರೂ. ವರೆಗೆ ಸ್ಟಾಂಪ್ ದರ ಪಾವತಿಸಲಾಗುತ್ತಿದೆ. ಸ್ಟಾಂಪ್ ದರದಲ್ಲಿ ಶೇ. 20 ರಷ್ಟು ಏರಿಕೆ ಆಗಿದೆ. ಹೀಗಾಗಿ ರೈತವರ್ಗ ದರಗಳ ಪಾವತಿಯಿಂದ ಬೇಸತ್ತಿದೆ.
2024ರ ಬಜೆಟ್ನಲ್ಲಿ ಜಿಲ್ಲೆಗೆ ಏನೆನು?
* ಗದಗನಲ್ಲಿ ನೂತನವಾಗಿ ನಿಮಿರ್ಸಿದ 450 ಹಾಸಿಗೆಗಳ ಆಸ್ಪತ್ರೆಗೆ ವೈದ್ಯಕಿಯ ಉಪಕರಣ ಮತ್ತು ಪಿಠೋಪಕರಣ ಖರೀದಿಗೆ ಅನುದಾನ(ಗದಗ, ಕೊಪ್ಪಳ, ಚಾಮರಾಜ ನಗರ ಸೇರಿ 150 ಕೋಟಿ)
* ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ
* ಜಿಲ್ಲೆಯ ರೋಣ ಪಟ್ಟಣದಲ್ಲಿ ನಬಾರ್ಡ್ ಸಹಯೋಗದೊಂದಿಗೆ 150 ಕೋಟಿ ವೆಚ್ಚದಲ್ಲಿ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ) ಸ್ಥಾಪನೆ.
* ಜಿಲ್ಲೆಯ ರೋಣ&ಮಲ್ಲಾಪುರ ರಸ್ತೆ ಅಭಿವೃದ್ಧಿ
* ಗದಗ ಜಿಲ್ಲಾಸ್ಪತ್ರೆಯಲ್ಲಿ 10 ಕೋಟಿ ವೆಚ್ಚದಲ್ಲಿ ಸುಪರ್ ಸ್ಪೆಷಾಲಿಟಿ ಕಾಡಿರ್ಕ್ ಟಕ ಸ್ಥಾಪನೆ ಮತ್ತು ಅನಸ್ತೆಷಿಯಾ ಟಕ
* ಗದಗ ಜಿಲ್ಲೆಯ ಜಾಲವಾಡಗಿ ಏತ ನೀರಾವರಿಗೆ ಅನುದಾನ
* ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೀತಲಗೃಹ
* ಜವಳಿ ಪಾರ್ಕ್, ಶಿರಹಟ್ಟಿ ಯಲ್ಲಿ 100 ಹಾಸಿಗೆ ಸಾಮರ್ಥ್ಯ ತಾಲೂಕು ಆಸ್ಪತ್ರೆ ನಿರ್ಮಾಣ