ಜಿಲ್ಲೆ

ಬಿಜೆಪಿ, ಜೆಡಿಎಸ್​ ಕಾರ್ಯಕರ್ತರಿಗೆ ಅಭಿನಂದನೆ: ರಾಜು ಕುರಡಗಿ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಬಸವರಾಜ ಬೊಮ್ಮಾಯಿ ಹಾಗೂ ಪಿ.ಸಿ.ಗದ್ದಿಗೌಡ್ರ ಅವರ ಗೆಲುವಿಗೆ ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೆ, ಮತದಾರರಿಗೆ ಬಿಜೆಪಿ ಜಿಲ್ಲಾಧ್ಯ ರಾಜು ಕುರುಡಗಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್​ ಗ್ಯಾರಂಟಿ ಭರದ ಮಧ್ಯೆಯೂ ಹಾವೇರಿ&ಗದಗ ಮತ್ತು ಬಾಗಲಕೋಟೆ ಲೋಕಸಭಾ ೇತ್ರಗಳಲ್ಲಿ ಬಿಜೆಪಿ ಅಭ್ಯಥಿರ್ಗಳನ್ನು ಗೆಲ್ಲಿಸುವ ಮೂಲಕ ಜಿಲ್ಲೆಯ ಜನತೆ ತಮ್ಮ ಪ್ರಜಾಮತ ಶಕ್ತಿಯನ್ನು ಪ್ರದರ್ಶನ ಮಾಡಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದಿರುವ ಜನತೆಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಗದಗ ನಗರದ 35 ವಾರ್ಡ್​ಗಳಲ್ಲಿ ಪದ ಸಂಟನೆಗೆ ಬೆನ್ನೆಲಬಾಗಿ ಕಾರ್ಯಕರ್ತರಿಗೆ ಹುಮ್ಮಸ್ಸನ್ನು ತುಂಬಿರುವ ನರಗುಂದ ಶಾಸಕ ಸಿ.ಸಿ.ಪಾಟೀಲ, ಲೋಕಸಭಾ ಸಂಚಾಲಕ ಕಳಕಪ್ಪ ಬಂಡಿ, ವಿ.ಪ. ಸದಸ್ಯ ಎಸ್​. ವಿ. ಸಂಕನೂರ, ಶಿರಹಟ್ಟಿ ಶಾಸಕ ಚಂದ್ರು ಲಮಾಣಿ, ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ, ಜೆಡಿಎಸ್​ ಪದ ಸರ್ವ ಮುಖಂಡರು, ಬಿಜೆಪಿ ಹಾಗೂ ಜೆಡಿಎಸ್​ ಮೈತ್ರಿ ಪಗಳ ಎಲ್ಲ ಹಿರಿಯರ ಮಾರ್ಗದರ್ಶನ ಪರಿಶ್ರಮದಿಂದ ಪಕ್ಕೆ ಲೋಕಸಭೆ ಚುನಾವಣೆಯಲ್ಲಿ ಗದಗ ನಗರದಿಂದ 10 ಸಾವಿರ ಮತಗಳ ಅಧಿಕ ಮತಗಳು ಲಭಿಸಿವೆ. ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.