ಜಿಲ್ಲೆ

ವೀರಭದ್ರೇಶ್ವರ ಜಾತ್ರಾಮಹೋತ್ಸವ ಧರ್ಮಸಭೆ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ ಗ್ರಾಮದಲ್ಲಿ ವೀರಭದ್ರೇಶ್ವರ ರಥೋತ್ಸವದ ನಿಮಿತ್ಯ ಗುರುವಾರ ಸಾಮೂಹಿಕ ವಿವಾಹ, ಕುಂಭ ಮೆರವಣಿಗೆ, ಮುಂತಾದ ಕಾರ್ಯಕ್ರಮಗಳು ಜರುಗಿದವು.
ಧರ್ಮಸಭೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಚನ್ನಮಲ್ಲ ಶಿವಾಚಾರ್ಯ ಶ್ರೀಗಳು, ಸದ್ಭಕ್ತರಲ್ಲಿ ಆಗಾಧ ಶಕ್ತಿಯಿದೆ. ವೀರಭದ್ರೇಶ್ವರನಲ್ಲಿ ಕೃಪೆಗೆ ಎಲ್ಲರು ಪಾತ್ರರಾಗಬೇಕು. ಇದು ಪುಟ್ಟರಾಜ ಕವಿಗವಾಯಿಗಳವರ ತವರೂರು. ಅವರ ಅಪಾರ ಆಶಿರ್ವಾದ ಈ ಗ್ರಾಮಕ್ಕೆ ಇದೆ. ದಾನ ಧರ್ಮ ಶ್ರದ್ಧೆ, ಹೊಂದಿದ ಭಕ್ತಾಧಿಗಳು ಇಲ್ಲಿ ನೆಲೆಸಿದ್ದಾರೆ ಎಂದರು.
ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಮಾತನಾಡಿ, ಉರಿಬಿಸಿಲಿನಲ್ಲೂ ಎಲ್ಲರೂ ಸೇರಿ ಅದ್ಭುತ ಕಾರ್ಯಕ್ರಮ ನೆರವೇರಿಸಿದ್ದಾರೆ. ಈ ಪುಣ್ಯ ಕಾರ್ಯಕ್ರಮ ಮುಂದಿನ ಪಿಳಿಗೆಗೆ ಲಭಿಸುತ್ತದೆ. ಇಂದಿನ ಮಕ್ಕಳು ಸದಾಸನ್ಮಾರ್ಗದಲ್ಲಿ ನಡೆದು ಸಮಾಜಕ್ಕೆ ಮಾದರಿಯಾಗಬೇಕು ಎಂದರು,
ಬಳಗಾನೂರಿನ ಶಿವಶಾಂತ ಶರಣರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪಿಯುಸಿ, ಎಸ್ಸೆಸ್ಸೆಲ್ಸಿ ಪರೀೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾಥಿರ್ಗಳನ್ನು ಸನ್ಮಾನಿಸಲಾಯಿತು.
ಆನಂದಯ್ಯ ಭೂಪಾಳಾಪೂರಮಠ, ಪುಟ್ಟರಾಜ ಹಿರೇಮಠ, ರಾಜು ಹಿರೇಮಠ, ಸಂಕಪ್ಪ ಕುರಹಟ್ಟಿ, ಎಸ್​. ಎಸ್​. ಹಾಲಭಾವಿ. ವಿರೂಪಾಯ್ಯ ಪೂಜಾರ ಇತರರು ಇದ್ದರು.