ಜಿಲ್ಲೆ

ಭಟ್ಕಳದಲ್ಲಿ ಎಲೆ ಮಾನವರ ಬಂಧನ

Uttara Kannada - Subash Hegde

ಭಟ್ಕಳ: ತಾಲೂಕಿನ ಬೆಳ್ಳೆ ಗ್ರಾಮದಲ್ಲಿಅಕ್ರಮವಾಗಿ ಅಂದರ್ ಬಾಹರ್ ಆಡುತ್ತಿದ್ದ ಸ್ಥಳದ ಮೇಲೆ ಪೊಲೀಸರು ದಾಳಿನಡೆಸಿ ಹಲವರ ವಿರುದ್ದ ಪ್ರಕರಣ ದಾಖಲಿಸಿ, ನಗದು ಸೇರಿದಂತೆ ವಿವಿದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಕಲ್ಬಂಡಿ ಭೂಮಿಕಾ ಫ್ರೆಂಡ್ಸ್ ರೀಕ್ರಿಯೆಶನ್ ಕ್ಲಬ್ ನಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಆಟವನ್ನು ಆಡಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಗ್ರಾಮೀಣ ಠಾಣೆ ಪೊಲೀಸರು ಪಿಐ ಮಂಜುನಾಥ ರೆಡ್ಡಿ ಅವರು ದಾಳಿ ನಡೆಸಿದ್ದರು. ಆರೋಪಿ ಕ್ಲಬ್ ಮಾಲೀಕ ಮಾದೇವ ನಾಯ್ಕ ಸಹಿತ 25 ಆರೊಪಿಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಗಣಪತಿ ಈರಪ್ಪ ನಾಯ್ಕ ಕುಕನೀರ್ ಹೆಬ್ಳೆ ಪರಮೇಶ್ವರ ದುರ್ಗಪ್ಪ ನಾಯಕ್ ಶಿರಾಲಿ ಸಾರದಹೊಳೆ, ದಿನೇಶ್ ಮಂಜುನಾಥ್ ನಾಯ್ಕ ಬೆಳಕೆ, ನಾಗರಾಜ್ ಮಂಜಯ್ಯ ಬಂಡಾರಿ ಬೆಳಕೆ, ವೆಂಕಟೇಶ್ ನಾರಾಯಣ ನಾಯ್ಕ ಮುರ್ಡೇಶ್ವರ, ನಾಗಪ್ಪ ಗೋವಿಂದ ನಾಯ್ಕ ಕಲ್ಬಂಡಿ, ಗೋವಿಂದ ಗಣಪತಿ ಮೋಗೇರ ಅಳ್ವೆಕೊಡಿ, ಭರ್ಮಯ್ಯ ಮಾಸ್ತಪ್ಪ ನಾಯ್ಕ ಮುಂಡಳ್ಳಿ, ಶನಿಯಾರ ನಾರಾಯಣ ನಾಯ್ಕ ಗೋಳಿಬೀಳೂರು, ಶ್ರೀಧರ ತಿಮ್ಮಪ್ಪ ಮೊಗೇರ, ಬಾಲಚಂದ್ರ ಖಾರ್ವಿ, ವಸಂತ್ ಚಳ್ಳ ಮೊಗೇರ್, ಶಿವರಾಜ ವೆಂಕಟ್ರಮಣ ನಾಯ್ಕ ಮುಂಡಳ್ಳಿ, ನಾಗರಾಜ್ ಲಚ್ಚಯ್ಯ ನಾಯ್ಕ ಮುಂಡಳ್ಳಿ, ಪಾಂಡು ಮಂಜು ಮೊಗೇರ ಹೆರ್ತಾರ್, ಶ್ರೀಧರ್ ಜಟ್ಟ ನಾಯ್ಕ ಮುರ್ಡೇಶ್ವರ, ಹರೀಶ್ ದಯಾನಂದ ಮೊಗೇರ ಮುಂಡಳ್ಳಿ, ನಾಗೇಶ ದುರ್ಗಪ್ಪ ನಾಯ್ಕ ಮುಂಡಳ್ಳಿ ನೀರ್ಗದ್ದೆ ಪ್ರಶಾಂತ್ ಶೇಖರ್ ಶೇಟ್ ಬೈಂದೂರು, ನಾರಾಯಣ ಕುಪ್ಪಯ್ಯ ನಾಯ್ಕ ಆಸರಕೇರಿ ಭಟ್ಕಳ, ಯೋಗೇಶ ವೆಂಕಟರಮಣ ಮೊಗೇರ ಮಾವಿನಕುರ್ವೆ ಭಟ್ಕಳ, ಆನಂದ್ ಮಾದೇವ ನಾಯ್ಕ ಬೆಳ್ಳಿ, ಭಾಸ್ಕರ ಬೈರಪ್ಪ ನಾಯ್ಕ ಶಿರಾಲಿ, ರವಿ ವೆಂಕಟರಮಣ ನಾಯ್ಕ ಮುಟ್ಟಳ್ಳಿ ಇವರ ಮೇಲೆ ಪ್ರಕರಣ ದಾಖಲಾಗಿದೆ.

ದಾಳಿ ಸಂದರ್ಭದಲ್ಲಿ 2000 ನಗದು, ಆಟದ ಕಾರ್ಡುಗಳು, ಟೋಕನ್, ಕ್ಲಬ್ ಮೆಂಬರ್ಸ್ ಲೇಟರ್, ಬಿಳಿ ಬಣ್ಣದ ಹುಂಡೈ ವೆರ್ನ ಕಾರು, ನೀಲಿ ಬಣ್ಣದ ಮಾರುತಿ ಸುಜುಕಿ ಸ್ವಿಫ್ಟ್ ಕಾರು, ಬಜಾಜ್ ಆಟೋರಿಕ್ಷಾ, ಹೀರೋ ಹೋಂಡಾ ಸ್ಪೆಂಡರ್ ಬೈಕ ಹೀಗೆ ವಿವಿಧ ತರದ ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ