ಉಡುಪಿ: ಚಂದ್ರಶೇಖರ್ ನಾನಿಲ್ ಮತ್ತು ನಾಗೇಶ್ ಪೂಜಾರಿ ಅರ್ಪಿಸುವ ಮುತ್ತುಗೋಪಾಲ ಫಿಲಂಸ್ ನಿಮಾರ್ಣದ ಗಬ್ಬರ್ ಸಿಂಗ್ ತುಳು ಸಿನಿಮಾ ಕಲ್ಪನಾ ಥಿಯೇಟರ್ನಲ್ಲಿ ಶುಕ್ರವಾರ ಬೆಳಗ್ಗೆ ಬಿಡುಗಡೆಗೊಂಡಿತು.
ಶಂಕರಪುರ ಸಾಯಿ ಬಾಬ ಮಂದಿರದ ಶ್ರೀ ಸಾಯಿ ಈಶ್ವರ್ ಗುರೂಜಿ ಪ್ರಥಮ ಪ್ರದರ್ಶನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ ಅವರು, ತುಳು ಸಿನೆಮಾ ಮೂಲಕ ತುಳು ರಂಗಭೂಮಿ ಪ್ರತಿಭೆಗಳಿಗೆ ಉತ್ತಮ ಅವಕಾಶ ಲಭ್ಯವಾಗುತ್ತಿದೆ. ಹೀಗಾಗಿ ಪ್ರೇಕ್ಷಕರು ತುಳು ಸಿನೆಮಾಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು. ಸುಮಾರು ಸಮಯದಿಂದ ನಿರೀೆಯಲ್ಲಿದ್ದ ಗಬ್ಬರ್ ಸಿಂಗ್ ಸಿನೆಮಾ ಬಿಡುಗಡೆಯಾಗುತ್ತಿದ್ದು, ಯಶಸ್ಸು ಕಾಣಲಿ ಎಂದರು.
ತೊಟ್ಟಂ ಚರ್ಚ್ ಧರ್ಮಗುರು ಡೆನಿಸ್ ಡೇಸಾ, ಬೆಳಪು ಮಸೀದಿ ಧರ್ಮಗರು ಅಬ್ದುಲ್ ಹಸನ್, ನಟ ಸಂದೀಪ್ ಭಕ್ತ, ನಟಿ ವೀಣಾ ಶೆಟ್ಟಿ, ಬಾಲ ನಟಿ ಬೇಬಿ ಆದ್ಯ, ಪ್ರಮುಖರಾದ ಹರೀಶ್ ಕಿಣಿ, ಗೀತಾಂಜಲಿ ಸುವರ್ಣ, ಸುಪ್ರಸಾದ್ ಶೆಟ್ಟಿ, ಸುರೇಶ್ ನಾಯಕ್, ಪೂರ್ಣಿಮಾ ಸುರೇಶ್, ಕೃಷ್ಣಮೂರ್ತಿ ಅಚಾರ್ಯ, ರಮೇಶ್ ಕಾಂಚನ್, ಸರಳಾ ಕಾಂಚನ್, ಶಿಲ್ಪಾ ಆರ್. ಭಟ್, ಶಬರೀಶ್ ಮೊದಲಾದವರು ಉಪಸ್ಥಿತರಿದ್ದರು.