ಹುಬ್ಬಳ್ಳಿ: ಕನ್ನಡ ರಾಜ್ಯೋತ್ಸವ ಅಂಗವಾಗಿ ಧಾರವಾಡ ಕರೋಕೆ ವತಿಯಿಂದ ಕನ್ನಡ ಗಾನ ಕೌಸ್ತುಭ ಐದನೇ ಆವೃತ್ತಿಯ ಚಲನಚಿತ್ರ ಗೀತೆಗಳ ಅಂತಿಮ ಸುತ್ತಿನ ಸ್ಪರ್ಧೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಇತ್ತೀಚೆಗೆ ಧಾರವಾಡದ ಆಲೂರ ವೆಂಕಟರಾವ್ ಭವನದಲ್ಲಿ ಏರ್ಪಡಿಸಲಾಗಿತ್ತು.
ಸಮಾರಂಭ ಉದ್ಘಾಟಿಸಿದ ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಮಾತನಾಡಿ, ಸಂಗೀತಕ್ಕೆ ಯಾವುದೇ ಜಾತಿ, ಲಿಂಗ, ಭೇದವಿಲ್ಲ, ಒತ್ತಡ ನಿರ್ವಹಣೆಗೆ ಸಂಗೀತ ಬಹಳ ಮುಖ್ಯ ಸಾಧನವಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಉಪ್ಪಿನಬೆಟಗೇರಿಯ ಶ್ರೀಕುಮಾರ ವಿರುಪಾಕ್ಷ ಸ್ವಾಮೀಜಿ, ಹೊನ್ನಾಪುರದ ಧಾಮಿರ್ಕ ಗುರು ಸೈಯದ್ ಮೊಹಿದ್ದಿನ್ ಮುಲ್ಲಾ, ಕೇಶ್ವಾಪುರದ ಡಾ. ಮೈಕಲ್ ಅವರು ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಧಾರವಾಡ ಕರೋಕೆ ಮಾಲೀಕ ಮೈನುದ್ದಿನ ಶಿರವಾಡಿ ಮಾತನಾಡಿದರು.
ಮನೋಜ ಕರ್ಜಗಿ, ಮನೋಹರ ಮಲ್ಲಿಗವಾಡ, ಮಹಾದೇವ ದಂಡಿನ, ಸುರೇಶ ಬೇದರೆ, ಮನೋಹರ ಅರ್ಕಸಾಲಿ, ಮಹ್ಮದ ಇಸ್ಮಾಯಿಲ್, ಸೀಮಾ ಸಾಣಿಕೊಪ್ಪ, ಶಿವಾಜಿ ಬೀಸೆ, ಮೌನೇಶ ಪತ್ತಾರ, ಅನುಪಕುಮಾರ, ಇತರರು ಪಾಲ್ಗೊಂಡಿದ್ದರು.
ಗಾನ ಕೌಸ್ತುಭ ಸ್ಪರ್ಧೆಯಲ್ಲಿ ಬೆಳಗಾವಿಯ ದರ್ಶನ ಪ್ರಥಮ, ರೋಹಿತ್ ಪೂಜಾರ ದ್ವೀತಿಯ, ಜಯಲಕ್ಷಿ$್ಮ ಬಳ್ಳಾರಿ ತೃತೀಯ, ಅಮಿತ್ ದಾಂಡೇಲಿ ನಾಲ್ಕನೇ ಸ್ಥಾನ ಪಡೆದರು.
ಬಾಬಾಜಾನ ಮುಲ್ಲಾ ಸ್ವಾಗತಿಸಿದರು. ಎನ್.ಬಿ. ದ್ಯಾಪುರ ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ ಕುಲಕರ್ಣಿ, ಶ್ರೀನಿವಾಸ ಕುಲಕರ್ಣಿ, ಧಮೇರ್ಂದ್ರ ಮುರಾರಿ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು.