ಜಿಲ್ಲೆ

ವಿಡಿಎಸ್ ಕ್ಲಾಸಿಕ್ ಸಿಬಿಎಸ್ಇ ಶಾಲೆಯಲ್ಲಿ ಶಾಲಾ ಸಂಸತ್ತು ರಚನೆ.

Gadag - Shivanand Hiremath
ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಕ್ಲಾಸಿಕ್ ಆಂಗ್ಲ ಮಾಧ್ಯಮ ಸಿಬಿಎಸ್ಇ ಶಾಲೆಯಲ್ಲಿ 2025-26 ನೇ ಸಾಲಿನ ಶಾಲಾ ಸಂಸತ್ತು ಚುನಾವಣೆ ನಡೆಸಲಾಯಿತು.
ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ ರವರು ಮಾತನಾಡಿ ಭವ್ಯ ಭಾರತದ ಭವಿಷ್ಯದ ಪ್ರಜೆಗಳಿಗೆ ಪ್ರಜಾಪ್ರಭುತ್ವದ ಮಹತ್ವವನ್ನು ಪ್ರಾಯೋಗಿಕವಾಗಿ ತಿಳಿಸಲು ಶಾಲೆಯ ಸಿಬ್ಬಂದಿ ವರ್ಗದವರು ಮೊಬೈಲ್ ಇವಿಎಂ ಬಳಸಿ ಮತದಾನ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಳ್ಳುವಂತೆ ಶಾಲಾ ಸಂಸತ್ತು ಹಮ್ಮಿಕೊಳ್ಳಲಾಗಿದೆ. ಜೊತೆಗೆ ಪ್ರಜಾಪ್ರಭುತ್ವದ ಮೌಲ್ಯ ಮತದಾನದ ಮಹತ್ವ ಹಾಗೂ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಸುವ ಸಲುವಾಗಿ ಶಾಲೆಯಲ್ಲಿ ಶಾಲಾ ಸಂಸತ್ತು ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿ ಚುನಾವಣೆ ನಡೆಸಲಾಗಿದೆ ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಗದಗ ಶಹರ ವಲಯದ ಬಿ ಆರ್ ಪಿ ಗಳಾದ ಶ್ರೀ ಪ್ರಕಾಶ ಮಂಗಳೂರು ರವರು ಮಾತನಾಡಿ ವಿಡಿಎಸ್ ಕ್ಲಾಸಿಕ್ ಆಂಗ್ಲ ಮಾಧ್ಯಮ ಸಿಬಿಎಸ್ಇ  ಶಾಲೆಯಲ್ಲಿ ಶಾಲಾ ಸಂಸತ್ತು ಚುನಾವಣೆಯನ್ನು ಲೋಕಸಭಾ ಹಾಗೂ ವಿಧಾನಸಭಾ ಚುನಾವಣಾ ಮಾದರಿಯಲ್ಲಿ ನಡೆಸಲಾಗಿದೆ.  ಚುನಾವಣಾ ಆಯೋಗ ನೀಡುವ ರೀತಿಯಲ್ಲಿ ಮಕ್ಕಳಿಗೆ ಆಧಾರ್ ಕಾರ್ಡ್ ಗುರುತಿನ ಚೀಟಿ ನೀಡಲಾಗಿದೆ. ಚುನಾವಣಾ ಆಯೋಗದ ಇವಿಎಂ ರೀತಿಯಲ್ಲೇ ಮಾದರಿ ಇವಿಎಂ ತಯಾರಿಸಿ ವಿದ್ಯಾರ್ಥಿಗಳು ಪ್ರತ್ಯಕ್ಷ ಮತದಾನದ ಅನುಭವವನ್ನು ಪಡೆದುಕೊಂಡು ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಶಾಲಾ ಸಂಸತ್ತು ರಚನೆ ಮಾಡಲು ಪ್ರಸ್ತುತ ದಿನಮಾನಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಮತದಾನದ ಹಕ್ಕನ್ನು ಪಾರದರ್ಶಕವಾಗಿ ಅಳವಡಿಸಲಾಗಿದೆ. ವಿದ್ಯಾರ್ಥಿ ಜೀವನದಲ್ಲಿಯೇ ಮಕ್ಕಳಿಗೆ ಮತದಾನದ ಪ್ರಕ್ರಿಯೆ ಮತ್ತು ಅದರ ಮಾಹಿತಿಯನ್ನು ಒದಗಿಸಿದರೆ ಭವಿಷ್ಯದ ಚುನಾವಣೆಗಳಲ್ಲಿ ಎಲ್ಲರೂ ಆಸಕ್ತಿಯಿಂದ ಮತದಾನ ಮಾಡಲು ಮುಂದಾಗುತ್ತಾರೆ ಎಂದರು.
ಮುಖ್ಯ ಚುನಾವಣಾ ಅಧಿಕಾರಿಗಳಾಗಿ ಶಾಲಾ ಶೈಕ್ಷಣಿಕ ಮಾರ್ಗದರ್ಶಕರಾದ ಶ್ರೀ ಪ್ರತೀಕ. ಎಸ್. ಹುಯಿಲಗೋಳ ರವರು ವಹಿಸಿಕೊಂಡಿದ್ದರು. ಪ್ರಾಚಾರ್ಯರಾದ ಶ್ರೀ ಎಂ. ಆರ್. ಡೊಳ್ಳಿನ ಹಾಗೂ ಉಪ ಪ್ರಾಚಾರ್ಯರಾದ ಶ್ರೀ ಅಕ್ಷಯ್. ಜಿ. ರವರು ಚುನಾವಣಾ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು. ಇದಕ್ಕೂ ಮುನ್ನ ಚುನಾವಣೆಯ ಅಧಿಕಾರಿಗಳಿಗೆ ವಿದ್ಯಾರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದರು. ಬಾಲಕರು 14 ಅಭ್ಯರ್ಥಿಗಳು, ಬಾಲಕಿಯರು 16 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ನಂತರ ಚುನಾವಣೆ ಅಧಿಕಾರಿಗಳು ಮತಗಟ್ಟೆ ಅಧಿಕಾರಿಗಳಿಗೆ ಮತ ಪೆಟ್ಟಿಗೆ ನೀಡಿದರು. ಮತದಾನ ಮಾಡಲು 2 ಮತಗಟ್ಟೆಗಳನ್ನು ತೆರೆಯಲಾಗಿತ್ತು.  ಮತದಾನ ಮಾಡುವ ವಿದ್ಯಾರ್ಥಿಗಳ ಎಡಗೈ ತೋರು ಬೆರಳಿಗೆ ಶಾಯಿ ಹಾಕಲಾಯಿತು. 4 ರಿಂದ 10ನೇ ತರಗತಿಯ ಎಲ್ಲಾ ಮಕ್ಕಳು ಶಾಂತರೀತಿ ಮತದಾನ ಮಾಡಿದರು. ಮಧ್ಯಾಹ್ನದ ವೇಳೆಗೆ ಮತ ಎಣಿಕೆ ಮಾಡಲಾಯಿತು. ಒಟ್ಟು 29 ಅಭ್ಯರ್ಥಿಗಳ ಪೈಕಿ 16 ಅಭ್ಯರ್ಥಿಗಳು ಹೆಚ್ಚು ಮತಗಳನ್ನು ಪಡೆದು ಶಾಲಾ ಸಂಸತ್ತಿಗೆ ಆಯ್ಕೆಯಾದವರು ಅಕುಲ ಪೂಜಾರ, ಮೆಹರ್ನಾಜ್ ಕೊಟ್ಟೂರ, ನಸ್ರೀನ್ ಹಂಚಿನಾಳ, ಸಿದ್ದಾರ್ಥ ಜಿರಾಳ,  ಆದಿತ್ಯ ಹಿರೇಮಠ, ತೇಜಸ್ವಿನಿ ಬಾಗಾಡೆ, ಬೀರಪ್ಪ ಇದ್ಲಿ , ಸೃಜನ್ ಆರಟ್ಟಿ, ಕೋಮಲ್ ತಿರ್ಲಾಪುರ, ಅರ್ಪಿತಾ ನಿಕ್ಕಮ್, ಮಧುಶ್ರೀ ಬೇಲೇರಿ, ಸಂಜನಾ ಆರಟ್ಟಿ, ಸಂಪ್ರೀತ್ ಧರ್ಮಾಯತ್, ಸಂತೋಷ ಬೆಳ್ಳಿಕೊಪ್ಪ ಹಾಗೂ ಶಿವಾನಂದ ಕೆ. ಆಯ್ಕೆಯಾದರು.
ಮತಗಟ್ಟೆಯ ಮುಖ್ಯ ವ್ಯವಸ್ಥಾಪಕರಾದ ಶ್ರೀಮತಿ ಗಾಯತ್ರಿ ಅಸುಂಡಿ, ಮತಗಟ್ಟೆ 1 ರಲ್ಲಿ ಶಿಕ್ಷಕಿಯರಾದ ಶ್ರೀಮತಿ ರೇಣುಕಾ ವೆಂಕಟಾಪುರ, ಕು. ನಂದಿನಿ ಮಡಿವಾಳರ, ವೀಣಾ ಹುಬ್ಬಳ್ಳಿ, ಮಂಜುಳಾ. ಎಸ್, ಸೈನಾಜ್.  ಎನ್, ಗೋಪಾಲ ಎನ್, ಶ್ರವಣಕುಮಾರ ಆರ್, ಶ್ವೇತಾ ಎಂ, ಸುಶ್ಮಿತಾ ವೈ, ಬೃಂದಾ ರವರು ಜೊತೆಗೆ ಮತಗಟ್ಟೆ 2 ರಲ್ಲಿ ಪಂಪಣ್ಣ ರೊಡ್ಡಣ್ಣವರ, ವಿದ್ಯಾ ಪಾಟೀಲ,  ಅನಿತಾ, ಮೇಘನಾ ಮುನವಳ್ಳಿ, ಕವಿತಾ ಹೊಸಕೇರಿ, ಭಾರತಿ ರವರು ಮತಗಟ್ಟೆಯ ಅಧಿಕಾರಗಳಾಗಿ ಕಾರ್ಯನಿರ್ವಹಿಸಿದರು. ಶ್ರೀಮತಿ ಅಫೀಜಾ ಬಾಗಲಕೋಟೆ ರವರು ಆರೋಗ್ಯ ಅಧಿಕಾರಿಗಳಾಗಿ ಹಾಗೂ ದೈಹಿಕ ಶಿಕ್ಷಕಿಯರಾದ ಶ್ರೀಮತಿ ವೀಣಾಶ್ರೀ. ಪಿ. ರವರು ಚುನಾವಣೆಗೆ ಸೂಕ್ತ ಭದ್ರತೆಯನ್ನು ಒದಗಿಸಿದ್ದರು. ಒಟ್ಟಾರೆಯಾಗಿ ಶಾಲಾ ಸಂಸತ್ತು ಕಾರ್ಯಕ್ರಮವು ಅಚ್ಚುಕಟ್ಟಾಗಿ ನೆರವೇರಿತು.