ಗದಗ: ಬೆಟಗೇರಿ ಲಾಯನ್ಸ ಶಿಕ್ಷಣ ಸಂಸ್ಥೆಯುಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ನಿಮಿತ್ಯ ನರ್ಸರಿಯಿಂದ ಎರಡನೇ ತರಗತಿಯವರೆಗೆ ರಾಧಾ ಕೃಷ್ಣ ವೇಷಭೂಷಣ ಶ್ಲೋಕ ಪಠಣ, ಹಾಡು ಮುಂತಾದ ಚಟುವಟಿಕೆಗಳನ್ನು ಏರ್ಪಡಿಸಲಾಯಿತು. ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿ/ನಿಯರು ಸಂಭ್ರಮದಿAದ ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು.
ಶಾಲೆಯ ಕಾರ್ಯದರ್ಶಿಗಳಾದ ಲಾ ಡಾ.ಜೆ.ಸಿ.ಶಿರೋಳ, ಮಾಜಿ ಚೇರಮನ್ನರಾದ ಲಾ.ಎಸ್.ಬಿ.ಬಾಕಳೆ, ಲಾಯನ್ಸ್ ಕ್ಲಬನ ಅಧ್ಯಕ್ಷರಾದ ಲಾ. ನಿತೀಶ ಸಾಲಿ ಲಾ ರಮೇಶ ಶಿಗ್ಲಿ ಕಾರ್ಯದಲ್ಲಿ ಭಾಗವಹಿಸಿದ್ದರು. ಲಾ. ಸಾವೀತ್ರಿ ಆರ್ ಶಿಗ್ಲಿ ಲಾ. ವೀಣಾ ಸುಲಾಖೆ ಅವರು ತಿರ್ಪುಗಾರರಾಗಿ ಆಗಮಿಸಿ ರಾಧಾ ಕೃಷ್ಣ ಆಗಿದ್ದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದ ಎಲ್ಲ ಪಾಲಕರಿಗೆ ಲಾಯನ್ಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀಮತಿ ಜಿ.ಬಿ. ಬೇವಿನಕಟ್ಟಿ, ಮುಖ್ಯೋಪಾಧ್ಯಯರಾದ ಶ್ರೀ ಸಿ. ಯು. ಹುಲಿಕಂತಿಮಠ, ಶ್ರೀಮತಿ. ಎಸ್. ವಿ. ಶಿಗ್ಲಿ ಹಾಗೂ ಶಾಲಾ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದರು.