ವಿಶ್ವವಿಖ್ಯಾತ ಹಂಪಿಯಲ್ಲಿ ಜಿ ೨೦ ಶೃಂಗಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ಶುಕ್ರವಾರ ರಸ್ತೆ, ಚರಂಡಿ ಅತಿಕ್ರಮಣವನ್ನು ತೆರವುಗೊಳಿಸಲಾಯಿತು.  
ಜಿಲ್ಲೆ

ಜಿ೨೦ ಸಮ್ಮಿಟ್‌ಗೆ ಹಂಪಿ ಭಾಗದಲ್ಲಿ ಸಿದ್ಧತೆ ಚುರುಕು - ಕಮಲಾಪುರದಲ್ಲಿ ರಸ್ತೆ ಅತಿಕ್ರಮಣ ತೆರವು

Vijayanagara - Veerendra

ಹೊಸಪೇಟೆ: ಐತಿಹಾಸಿಕ ಹಂಪಿಯಲ್ಲಿ ಮುಂದಿನ ಜುಲೈನಲ್ಲಿ ಆಯೋಜಿಸಿರುವ ಜಿ೨೦ ಶೃಂಗ ಸಭೆಗೆ ದೇಶ- ವಿದೇಶಗಳಿಂದ ಗಣ್ಯಾತಿಗಣ್ಯರು ಆಗಮಿಸುವು ದರಿಂದ ತಾಲೂಕಿನ ಕಮಲಾಪುರ ಮತ್ತು ಹಂಪಿ ಭಾಗದಲ್ಲಿ ಸ್ವಚ್ಛತಾ ಕಾರ್ಯಗಳು ಚುರುಕುಗೊಂಡಿವೆ.

ಜಿ ೨೦ ಸಮ್ಮಿಟ್ ಭಾಗವಾಗಿ ತಾಲೂಕಿನ ಕಮಲಾಪುರ ಪಟ್ಟಣದ ಅಂಬೇಡ್ಕರ್ ವೃತ್ತ ಸುತ್ತಮುತ್ತ ಹಾಗೂ ಕಂಪ್ಲಿ- ಹೊಸಪೇಟೆ ಮಾರ್ಗದ ಸಾರ್ವಜನಿಕ ರಸ್ತೆ ಮತ್ತು ಚರಂಡಿಗಳ ಮೇಲೆ ನಿರ್ಮಿಸಿದ್ದ ಕಟ್ಟಡಗಳ ಮೆಟ್ಟಿಲು, ಕಟ್ಟೆ ಹಾಗೂ ಗೋಡೆಗಳನ್ನು ಶುಕ್ರವಾರ ಜೆಸಿಬಿಗಳ ನೆರವಿನಿಂದ ಪುರಸಭೆ ಅಧಿಕಾರಿಗಳು ತೆರವುಗೊಸಿದರು. ಅದರೊಂದಿಗೆ ಮುಖ್ಯ ರಸ್ಥೆಯಲ್ಲಿ ಬೇಕಾಬಿಟ್ಟಿಯಾಗಿ ಸುರಿದಿದ್ದ ಕಟ್ಟಡಗಳ ತ್ಯಾಜ್ಯ ಮಣ್ಣುನ್ನು ಊರ ಹೊರಗೆ ಸಾಗಿಸಿದರು.

ವಿಶ್ವವಿಖ್ಯಾತ ಹಂಪಿಯಲ್ಲಿ ಜಿ ೨೦ ಶೃಂಗಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಹೊಸಪೇಟೆ ತಾಲೂಕಿನ ಕಮಲಾಪುರ - ಹಂಪಿ ಮಾರ್ಗದಲ್ಲಿ ಸಂಚಾರಕ್ಕೆ ತೊಡಕಾಗುವ ಬೃಹತ್ ಮರಗಳ ರೆಂಬೆಗಳನ್ನು ಕತ್ತರಿಸಲಾಯಿತು.

ಕಡ್ಡಿರಾಂಪುರದಿAದ ಹಂಪಿ ಮತ್ತು ಹಂಪಿಯಿದ ಕಮಲಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಕ್ಕಪಕ್ಕದಲ್ಲಿ ಬೆಳೆದಿರುವ ಬೃಹತ್ ಮರಗಳಿಂದಾಗಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು. ಸಮಸ್ಯಾತ್ಮಕ ಗಿಡಗಳನ್ನು ಗುರುತಿಸಿದ್ದ ವಲಯ ಅರಣ್ಯ ಅಧಿಕಾರಿಗಳು, ಮುನ್ನೆಚ್ಚರಿಕೆ ಕ್ರಮವಾಗಿ ಕ್ರೇನ್ ಸಹಾಯದಿಂದ ಕಡಿದು ಹಾಕಲಾಯಿತು. ಈ ಮೂಲಕ ವಾಹನಗಳ ಸಂಚಾರಕ್ಕೆ ಆಗಬಹುದಾದ ತೊಂದರೆಯನ್ನು ತಪ್ಪಿಸಿದಂತಾಗಿದೆ.