ಉಡುಪಿ: ರಾಜ್ಯದ ಎಲ್ಐಸಿ ವಿಭಾಗಗಳಲ್ಲಿ ಪ್ರತಿಷ್ಠಿತವಾಗಿರುವ ಉಡುಪಿ ವಿಭಾಗೀಯ ಕಚೇರಿಗೆ ಜಿ.ಎನ್. ಭಟ್ ಅವರನ್ನು ಹಿರಿಯ ವಿಭಾಗಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದ್ದು, ಇತ್ತೀಚೆಗೆ ಅಧಿಕಾರ ಸ್ವೀಕರಿಸಿದರು. ಶಿವಮೊಗ್ಗ ವಿಭಾಗದಲ್ಲಿ ಅಧಿಕಾರಿಯಾಗಿದ್ದ ಅವರಿಗೆ ಮುಂಬಡ್ತಿ ನೀಡಲಾಗಿದೆ.
ಗ್ರಾಹಕರಿಗೆ ಸಂಸ್ಥೆಯು ಈಗಾಗಲೇ ಉತ್ತಮವಾದ ಸೇವೆ ನೀಡುತ್ತಲೇ ಇದೆ. ಉಡುಪಿ ವಿಭಾಗ ವ್ಯಾಪ್ತಿಯ ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸಲು ಎಲ್ಲ ರೀತಿಯಲ್ಲೂ ಕ್ರಮ ಕೈಗೊಳ್ಳಲಾಗುವುದು ಎಂದು ಜಿ.ಎನ್. ಭಟ್ ತಿಳಿಸಿದ್ದಾರೆ.