ಜಿಲ್ಲೆ

ಜಿ.ಎಂ. ಪಾಟೀಲ ಕಾರ್ಯ ಅನುಕರಣೀಯ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ವಿದ್ಯಾರ್ಥಿಗಳಲ್ಲಿ ಹಾಗೂ ಬೋಧಕರಲ್ಲಿ ಬದ್ಧತೆಯಿದ್ದರೆ ಮಾತ್ರ ಜ್ಞಾನ ಪ್ರವಾಹ ಹರಿಯಲು ಸಾಧ್ಯ. ಯಾವುದೇ ಭೇದ ಭಾವ ಮಾಡದೆ ಕಲಿಯುವ ಆಸಕ್ತಿಯಿಂದ ಬಂದವರಿಗೆ ಕಾನೂನು ಶಿಕ್ಷಣ ನೀಡಿದ ಡಾ. ಜಿ.ಎಂ. ಪಾಟೀಲರ ಕಾರ್ಯ ಅನುಕರಣೀಯ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಹೇಳಿದರು.

ನಗರದ ಡಾ. ಜಿ.ಎಂ. ಪಾಟೀಲ ಕಾನೂನು ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೆಪಿಇ ಸಂಸ್ಥೆ ಸಂಸ್ಥಾಪಕ ಡಾ. ಜಿ.ಎಂ. ಪಾಟೀಲ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜಿ.ಎಂ. ಪಾಟೀಲ ಅವರದ್ದು ಉದಾತ್ತ ಹೃದಯ. ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ಗುಣ ಅವರದ್ದು. ನನ್ನಲ್ಲಿರುವ ಪ್ರತಿಭೆ ಗುರುತಿಸಿದ ಪಾಟೀಲರು ಬರೆಯಲು ಪ್ರೇರಣೆ ನೀಡಿದರು.ನನ್ನ ಸಾಹಿತ್ಯ ಕೃಷಿಗೆ ನೀರೆರೆದ ಧಾರವಾಡವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ಕಾನೂನು ಸಚಿವ ಎಚ್​.ಕೆ. ಪಾಟೀಲ ಮಾತನಾಡಿ, ಧಾರವಾಡಕ್ಕೆ ಹೈಕೋರ್ಟ್​ ಪೀಠ ಬರುವಲ್ಲಿ ಜಿ.ಎಂ. ಪಾಟೀಲರ ಪ್ರಯತ್ನವನ್ನು ಮರೆಯಲು ಸಾಧ್ಯವಿಲ್ಲ. ಸಮಾಜದ ಒಳಿತಿಗೆ ಚಿಂತಿಸುತ್ತಿದ್ದ ಅವರು ಕಾಲೇಜು ಆರಂಭಿಸಿ ಯಶಸ್ವಿಯಾಗಿ ನಡೆಸಿ ಈಗ ದೊಡ್ಡ ಸಂಸ್ಥೆಯಾಗಿ ಬೆಳೆಸಿದ್ದು ಅಗಾಧ ಸಾಧನೆ ಎಂದರು.

ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಸಂಜೀವಕುಮಾರ ಹಂಚಾಟೆ ಮಾತನಾಡಿದರು.

ಅಶೋಕ ಹಾರನಹಳ್ಳಿ, ಯು.ಬಿ. ವೆಂಕಟೇಶ, ಸಚಿವ ಆರ್​.ಬಿ. ತಿಮ್ಮಾಪುರ, ಡಿ.ಆರ್​. ಪಾಟೀಲ, ನ್ಯಾಯಮೂರ್ತಿ ಕೆ. ಶ್ರೀಧರರಾವ್​, ಬಿ.ಆರ್​. ಯಾವಗಲ್​ ಮಾತನಾಡಿದರು. ವೇದಿಕೆ ಮೇಲೆ ಶಾಸಕ ಎನ್​.ಎಚ್​. ಕೋನರಡ್ಡಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಬಿ.ವಿ. ಸೋಮಾಪುರ, ಮಲ್ಲಮ್ಮ ಪಾಟೀಲ, ಪ್ರತಾಪ ಚವ್ಹಾಣ, ಮಹೇಂದ್ರ ಸಿಂಘಿ, ಇತರರು ಇದ್ದರು.