ಮೇಲುಕೋಟೆ ಗ್ರಾಮ ಪಂಚಾಯಿತಿ ಪ್ರಭಾರಿ ಅಧ್ಯಕ್ಷರಾಗಿ ಜಿ.ಕೆ ಕುಮಾರ್ ಅಧಿಕಾರ ಸ್ವೀಕರಿದರು. 
ಜಿಲ್ಲೆ

ಮೇಲುಕೋಟೆ ಗ್ರಾಪಂಗೆ ಜಿ.ಕೆ.ಕುಮಾರ್ ಪ್ರಭಾರ ಅಧ್ಯಕ್ಷ

ಮೇಲುಕೋಟೆ : ಗ್ರಾಮ ಪಂಚಾಯಿತಿ ಪ್ರಭಾರ ಅಧ್ಯಕ್ಷರಾಗಿ ಹಾಲಿ ಉಪಾಧ್ಯಕ್ಷ ಜಿ.ಕೆ.ಕುಮಾರ್ ಸೋಮವಾರ ಅಧಿಕಾರ ವಹಿಸಿಕೊಂಡರು.

ಮಣಿ ಮುರುಗನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಅಂಗೀಕರಿಸಿದ ಪಾಂಡವಪುರ ಉಪವಿಭಾಗಾಧಿಕಾರಿ ಮುಂದಿನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆವರೆಗೆ ಪ್ರಭಾರಿ ಅಧ್ಯಕ್ಷರಾಗಿ ಉಪಾಧ್ಯಕ್ಷರು ಮುಂದುವರೆಯಬೇಕು ಎಂದು ಆದೇಶಿದ್ದರು. ಈ ಹಿನ್ನೆಲೆಯಲ್ಲಿ ಜಿ.ಕೆ.ಕುಮಾರ್ ಸೋಮವಾರ ಅಧಿಕಾರ ವಹಿಸಿಕೊಂಡರು. ಈ ವೇಳೆ ನಿರ್ಗಮಿತ ಅಧ್ಯಕ್ಷೆ ಮಣಿ ಮುರುಗನ್, ಸದಸ್ಯರಾದ ಲಕ್ಷ್ಮಮ್ಮ, ಜಯರಾಮೇಗೌಡ, ಪಿಡಿಒ ರಾಜೇಶ್ವರ್ ನರೇಗಾ ಇಂಜಿನಿಯರ್ ಇದ್ದರು.