ಸಿಂಧನೂರು: ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೇ, ಏಕಾಗ್ರತೆಯಿಂದ ಅಭ್ಯಾಸ ಮಾಡಿದರೆ ಸಾಧನೆ ಸಾಧ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಶೇಖರ್ ಶೆಟ್ಟಿ ಹೇಳಿದರು.
ಇದನ್ನೂ ಓದಿ: 38 ವಿದ್ಯಾರ್ಥಿಗಳಿಂದ ಸಂಗೀತದ ರಸದೌತಣ
ತಾಲೂಕಿನ ವಿರುಪಾಪುರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅತಿಥಿ ಶಿಕ್ಷಕರು ಹಮ್ಮಿಕೊಂಡಿದ್ದ ವಿಶೇಷ ಬೋಧನಾ ತರಗತಿ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.
ಜೀವನದಲ್ಲಿ ಯಾವುದು ಕಷ್ಟವಲ್ಲ. ಶ್ರಮಪಟ್ಟರೆ ಎಲ್ಲವುದು ಸಾಧ್ಯ. ಈಗ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಯಾರು ನಿರಂತರ ಅಧ್ಯಯನ ಮಾಡಿದ್ದಿರಿ ಅವರಿಗೆ ಸರಳ, ಓದದೇ ಇದ್ದವರಿಗೆ ಕಷ್ಟವಾಗಲಿದೆ. ಭವಿಷ್ಯದ ದೃಷ್ಟಿಯಿಂದ ಓದಿ ಎಂದರು.
ಮುಖ್ಯಶಿಕ್ಷಕಿ ರಮಾದೇವಿ ಶಂಭೋಜಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಇವರಿಂದ ಶೈಕ್ಷಣಿಕ, ಪರಿಸರ ಜಾಗೃತಿ, ಆರೋಗ್ಯ ಹಾಗೂ ಸಮಾಜಮುಖಿ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿವೆ. ಇದೀಗ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ಬೋಧನಾ ತರಗತಿ ಹಮ್ಮಿಕೊಂಡಿರುವುದು ಹೆಚ್ಚಿನ ಉಪಯೋಗ ಎಂದರು.
ಗ್ರಾಪಂ ಅಧ್ಯಕ್ಷ ಬುಡ್ಡಪ್ಪ, ಎಸ್ಡಿಎಂಸಿ ಸದಸ್ಯ ಬಸವರಾಜ ಪಗಡದಿನ್ನಿ, ತುರ್ವಿಹಾಳ ಸರ್ಕಾರಿ ಪ್ರಥಮ ದರ್ಜೆ ಕನ್ನಡ ಸಹಾಯಕ ಪ್ರಾಧ್ಯಾಪಕ ಮೌಲಾಸಾಬ, ಶಿಕ್ಷಕರಾದ ನಾಗರಾಜ, ಸುನೀತಾ ಅರಮನಿ, ಶ್ವೇತಾ, ಪಂಪಾಪತಿ, ವಲಯದ ಮೇಲ್ವಿಚಾರಕ ಪರಶುರಾಮ ಪ್ರಮುಖರಾದ ಪೂಜಾರಿ, ವಿದ್ಯಾ ಇದ್ದರು.