ಜಿಲ್ಲೆ

ಭತ್ತದ ಕೃಷಿ ಉಳಿದರೆ ಮಾತ್ರ ಮುಂದಿನ ಜೀವನ ಉಳಿಯಲು ಸಾಧ್ಯ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಭತ್ತದ ಕೃಷಿ ಉಳಿದರೆ ಮಾತ್ರ ಮುಂದಿನ ಜೀವನ ಉಳಿಯುತ್ತದೆ. ನಾವೆಲ್ಲರೂ ಸೇರಿ ಕೃಷಿಯನ್ನು ಉಳಿಸೋಣ ಎಂದು ಹೆಬ್ರಿ ತಾಲೂಕು ಜನಜಾಗೃತಿ ಸದಸ್ಯ ಮೋಹನ್‌ದಾಸ ನಾಯಕ್ ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ತಾಲೂಕು, ಚಾರ ವಲಯದ ಶಿವಪುರ ಕಾರ್ಯಕ್ಷೇತ್ರದಲ್ಲಿ ಯಂತ್ರ ಶ್ರೀ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೆಬ್ರಿ ತಾಲೂಕು ಪಂಚಾಯಿತಿ ನಿಕಟ ಪೂರ್ವಾಧ್ಯಕ್ಷ ರಮೇಶ್ ಪೂಜಾರಿ, ಶಿವಪುರ ಗ್ರಾಪಂ ಉಪಾಧ್ಯಕ್ಷ ಶಂಕರ್ ಭಟ್, ಜನಜಾಗೃತಿ ಸದಸ್ಯರಾದ ಜಗನ್ನಾಥ್, ಕುಲಾಲ್, ದೇವಾನಂದ ಪೂಜಾರಿ, ವಲಯದ ಅಧ್ಯಕ್ಷೆ ಜ್ಯೋತಿ, ಒಕ್ಕೂಟದ ಅಧ್ಯಕ್ಷೆ ವಂದನಾ, ಮೇಲ್ವಿಚಾರಕರಾದ ರೇವತಿ, ಉಮೇಶ್ ಬಿ.ಕೆ., ಹಿರಿಯರಾದ ಚಂದು ನಾಯ್ಕ, ಯಂತ್ರ ಶ್ರೀ ನರ್ಸರಿ ತಯಾರಕರಾದ ರಮೇಶ್ ನಾಯ್ಕ, ವಾಸು ಕುಲಾಲ್, ಸೇವಾಪ್ರತಿನಿಧಿ ಲಲಿತ, ಪ್ರಗತಿಪರ ಕೃಷಿಕರು ಹಾಜರಿದ್ದರು.