ಶಿರಹಟ್ಟಿ: ವಿದ್ಯಾರ್ಥಿ ಜೀವನ ಅಮೂಲ್ಯವಾದುದು. ಆತ್ಮವಿಶ್ವಾಸ ಹಾಗೂ ಪರಿಶ್ರಮದೊಂದಿಗೆ ಅಭ್ಯಾಸ ಮಾಡಿ ಜೀವನ ಉಜ್ವಲಗೊಳಿಸಿಕೊಳ್ಳಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ಬಿ.ಪಿ. ಪೂಜಾರ ಸರ್ಕಾರಿ ಪಿಯು ಕಾಲೇಜಿನ ಪ್ರಸಕ್ತ ಸಾಲಿನ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ‘ಯಾರು ತಂದೆ-ತಾಯಿಗಳು ಪಡುವ ಕಷ್ಟವನ್ನು ಮನವರಿಕೆ ಮಾಡಿಕೊಂಡು, ಉಪನ್ಯಾಸಕರ ಮಾರ್ಗದರ್ಶನ ದೊಂದಿಗೆ ಉತ್ತಮ ಸಂಸ್ಕಾರ ಮೈಗೂಡಿಸಿಕೊಂಡು ಆತ್ಮವಿಶ್ವಾಸದಿಂದ ಆಧ್ಯಯನ ಮಾಡುತ್ತಾರೋ ಜೀವನದಲ್ಲಿ ಯಶಸ್ಸು ಪಡೆಯುತ್ತಾರೆ’ ಎಂದರು.
ಕಾಲೇಜಿಗೆ ಅಗತ್ಯ ಮೂಲ ಸೌಲಭ್ಯ ಒದಗಿಸಲು ಹಾಗೂ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಅತಿಥಿ ಕೆ.ಎ. ಬಳಿಗೇರ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಅಂಟುಕೊಂಡು ಫೇಸ್‌ಬುಕ್, ವ್ಯಾಟ್ಸ್ ಆ್ಯಪ್ ಹವ್ಯಾಸದಿಂದ ದೂರು ಉಳಿದು ಶ್ರದ್ಧೆಯಿಂದ ಓದಿದರೆ ಗುರಿಸಾಧಿಸಬಹುದು ಎಂದರು.
ತಾಪಂ ಮಾಜಿ ಸದಸ್ಯ ತಿಪ್ಪಣ್ಣ ಕೊಂಚಿಗೇರಿ, ಕಾಲೇಜ್ ಭೂ ದಾನಿ ಪರಸಪ್ಪ ಪೂಜಾರ, ಪಪಂ ಸದಸ್ಯ ಫಕೀರೇಶ ರಟ್ಟಿಹಳ್ಳಿ, ಸಂದೀಪ ಕಪ್ಪತ್ತನವರ, ಬಸವರಾಜ ಶಾಲಿ, ಸಂದೇಶ ಗಾಣಿಗೇರ, ಶಂಕರ ಮರಾಠೆ, ಗೌತಮ್ ಕಪ್ಪತ್ತನವರ, ಮಲ್ಲಪ್ಪ ಹರ್ತಿ, ಉಪನ್ಯಾಸಕಿ ರಾಜೇಶ್ವರಿ ಕಪ್ಪತ್ತನವರ ಇತರರಿದ್ದರು. ಉಪನ್ಯಾಸಕ ಶಾಕೀರ ಮುಜಾವರ, ಕೊಟ್ರಯ್ಯ ಹೊಂಬಾಳಿಮಠ ಕಾರ್ಯಕ್ರಮ ನಿರ್ವಹಿಸಿದರು.