ಜಿಲ್ಲೆ

10 ಶಾಲೆಗಳಿಗೆ ಪೀಠೋಪಕರಣ

Chitradurga

ಹರಿಹರ: ಧರ್ಮಸ್ಥಳದ ಜ್ಞಾನ ದೀಪ ಕಾರ್ಯಕ್ರಮದಡಿ ತಾಲೂಕಿನ 10 ಶಾಲೆಗಳಿಗೆ ರೂ.90 ಲಕ್ಷ ಮೌಲ್ಯದ ಪೀಠೋಪಕರಣಗಳನ್ನು ನೀಡಲಾಗಿದೆ ಎಂದು ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ ಹೇಳಿದರು.

ತಾಲೂಕಿನ ಬಿಳಸನೂರು ಸರ್ಕಾರಿ ಪ್ರೌಢಶಾಲೆಗೆ ಜ್ಞಾನದೀಪ ಕಾರ್ಯಕ್ರಮದಡಿ ಧರ್ಮಸ್ಥಳ ಸಂಸ್ಥೆ ನೀಡಿದ ಪೀಠೋಪಕರಣಗಳ ಹಸ್ತಾಂತರ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಕೊರತೆ ಇರುವ ಮೂಲಸೌಕರ್ಯಗಳಾದ ಪೀಠೋಪಕರಣ, ಪಾಠೋಪಕರಣ, ಕಟ್ಟಡ ರಚನೆ, ಶೌಚಾಲಯಗಳ ನಿರ್ಮಾಣ ಮಾಡುವುದು ಈ ಯೋಜನೆಯ ಉದ್ದೇಶ ಎಂದರು.

ಪ್ರಸ್ತುತ ವರ್ಷ ರಾಜ್ಯದ 372 ಶಾಲೆಗಳಿಗೆ 2 ಕೋಟಿ 40 ಲಕ್ಷ ಮೌಲ್ಯದ ಪೀಠೋಪಕರಣಗಳನ್ನು ಸರ್ಕಾರಿ, ಅನುದಾನಿತ ಶಾಲೆಗಳಿಗೆ ವಿತರಿಸಲಾಗಿದೆ. ಜತೆಗೆ, ವೃತ್ತಿಪರ ಮತ್ತು ತಾಂತ್ರಿಕ ವಿದ್ಯಾಭ್ಯಾಸ ಮಾಡುತ್ತಿರುವ ರಾಜ್ಯದ 25000 ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯವೇತನ ನೀಡುವ ಮಾಡುವ ಮೂಲಕ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೇರಣೆ ನೀಡುವ ಕಾರ್ಯ ಮಾಡುತ್ತಿದ್ದಾರೆ ಎಂದರು.

ಹಿರಿಯ ಶಿಕ್ಷಕಿ ಕುಸುಮ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕರಾದ ವಿ. ವಿಜಯಕುಮಾರ್ ನಾಗನಾಳ, ಸಮುದಾಯ ಅಭಿವೃದ್ಧಿ ವಿಭಾಗದ ಯೋಜನಾಧಿಕಾರಿ ಪುಷ್ಪರಾಜ್, ತಾಲೂಕು ಯೋಜನಾಧಿಕಾರಿ ಗಣಪತಿ ಮಾಳಂಜಿ, ಗ್ರಾಮಸ್ಥರಾದ ಹನುಮಂತ ರೆಡ್ಡಿ, ರಾಜಪ್ಪ, ವೀರೇಶ್, ಪ್ರಕಾಶ್, ಒಕ್ಕೂಟ ಅಧ್ಯಕ್ಷರಾದ ರೇಣುಕಾ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ರೇಖಾ, ಒಕ್ಕೂಟ ಪದಾಧಿಕಾರಿಗಳಾದ ಶಶಿರೇಖಾ, ಮೇಲ್ವಿಚಾರಕರಾದ ಸಂತೋಷ ಕೆ., ಪ್ರಸನ್ನ, ಸೇವಾ ಪ್ರತಿನಿಧಿ ರೇಣುಕಾ, ಶಿಕ್ಷಕರಾದ ಶಂಕ್ರಪ್ಪ, ಜಗದೀಶ್, ಗಂಗಾಧರ್ ಇತರರಿದ್ದರು.