ಕಣಗಾಲು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಬಸವೇಶ್ವರ ದೇವಸ್ಥಾನಕ್ಕೆ 50,000 ರೂ.ಗಳ ಡಿಡಿಯನ್ನು ಮಹಾದೇವಮ್ಮ ಅವರಿಗೆ ಹನುಂತಪ್ಪ ಅಂಗಡಿ ಹಸ್ತಾಂತರಿಸಿದರು. ರಾಜಣ್ಣ, ರಾಣಿ ಇತರರಿದ್ದರು. 
ಜಿಲ್ಲೆ

ಬಸವಣ್ಣ ದೇವಸ್ಥಾನ ನಿರ್ಮಾಣಕ್ಕೆ ಧನಸಹಾಯ

ಅಭಿನಯ್ ಎಚ್.ಎಂ

ಶನಿವಾರಸಂತೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೊಡ್ಲಿಪೇಟೆ ವಲಯದ ಬೆಳಾರಳ್ಳಿ ಕಾರ್ಯಕ್ಷೇತ್ರ ವ್ಯಾಪ್ತಿಯ ಕಣಗಾಲು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಬಸವಣ್ಣ ದೇವಸ್ಥಾನಕ್ಕೆ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 50,000 ರೂ.ಗಳ ಡಿಡಿಯನ್ನು ಹಸ್ತಾಂತರಿಸಲಾಯಿತು.

ಯೋಜನೆಯ ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ 50,000 ರೂ.ಗಳ ಡಿಡಿಯನ್ನು ಬಸವಣ್ಣ ದೇವಸ್ಥಾನ ಸಮಿತಿ ಅಧ್ಯಕ್ಷೆ ಮಹಾದೇವಮ್ಮ ಅವರಿಗೆ ಹಸ್ತಾಂತರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ವಲಯದ ಮೇಲ್ವಿಚಾರಕ ರಾಜಣ್ಣ, ಸೇವಾ ಪ್ರತಿನಿಧಿ ರಾಣಿ, ದೇವಸ್ಥಾನ ಸಮಿತಿ ಸದಸ್ಯರು, ಸ್ವ ಸಹಾಯ ಸಂಘದ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.