ಉಪ್ಪಿನಬೆಟಗೇರಿ: ಸಮೀಪದ ತಡಕೋಡ ಗ್ರಾಮದಲ್ಲಿ ಪಿಡಿಒ, ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು ಕಾಯಂ ಆಗಿ ನಿಯೋಜಿಸಬೇಕು ಎಂದು ಆಗ್ರಹಿಸಿ ತಡಕೋಡ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಧಾರವಾಡ ತಾಪಂ ಇಒ ಗಂಗಾಧರ ಕಂದಕೂರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ತಡಕೋಡ ಗ್ರೇಡ್-1 ಪಂಚಾಯಿತಿ ಆಗಿದ್ದು, ಗ್ರಾಮಕ್ಕೆ ಯೋಜನೆಗಳು ಮತ್ತು ಮೂಲ ಸೌಕರ್ಯಗಳನ್ನು ಅನುಷ್ಠಾನಗೊಳಿಸಲು ಪೂರ್ಣಾವಧಿ ಅಧಿಕಾರಿಗಳ ಅಗತ್ಯವಿದೆ. ದಿಢೀರಾಗಿ ಅಧಿಕಾರಿಗಳನ್ನು ಬೇರೆ ಗ್ರಾಪಂಗಳಿಗೆ ನಿಯೋಜಿಸುವುದರಿಂದ ನಮ್ಮ ಗ್ರಾಮದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿವೆ. ಹೀಗಾಗಿ ನಮ್ಮ ಗ್ರಾಪಂಗೆ ಪೂರ್ಣಾವಧಿ ಅಧಿಕಾರಿಗಳನ್ನು ನಿಯೋಜಿಸಬೇಕು ಮತ್ತು ಅವರ ಮೇಲಿರುವ ಬೇರೆ ಪಂಚಾಯಿತಿಗಳ ನಿಯೋಜನೆ ಆದೇಶ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಗ್ರಾಪಂ ಅಧ್ಯಕ್ಷೆ ದೊಡ್ಡವ್ವ ಕರೀಕಟ್ಟಿ, ಸದಸ್ಯರಾದ ಭೀಮಪ್ಪ ಕಾಸಾಯಿ, ಮಹಾಂತೇಶ ಅಬ್ಬಾರ, ಬಾಳಪ್ಪ ಯಲಿಗಾರ, ಈರಪ್ಪ ಕಲ್ಲೂರ, ಶ್ರೀದೇವಿ ಬೆಳವಡಿ, ಮಂಜುಳಾ ಹುಲಮನಿ, ಗೌರವ್ವ ಅಕ್ಕಿ, ಮಂಜುಳಾ ದೊಡ್ಡಸುಂಕದ, ದ್ಯಾಮವ್ವ ವಡ್ಡರ, ಅನಸೂಯಾ ವಾಲ್ಮೀಕಿ, ಈರಪ್ಪ ಸೋಪಿನ್, ಮುನಿರಾ ಜಿಗರಿ, ಶಾಂತವ್ವ ಗುರಣ್ಣಿ, ಇತರರಿದ್ದರು.