ಜಿಲ್ಲೆ

ಮಹಿಳೆಯರಿಗೆ ಉಡಿ ತುಂಬಿ ಗೌರವ

ರವಿ ಎಸ್. ಬಳೂಟಗಿ

ಲಕ್ಷ್ಮೇಶ್ವರ: ಪಟ್ಟಣದ ಐತಿಹಾಸಿಕ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ರಾಜ್ಯ ಸರ್ಕಾರದ ಧಾರ್ಮಿಕ ಮತ್ತು ದತ್ತಿ ಇಲಾಖೆಯ ನಿರ್ದೇಶನದಂತೆ ವರಮಹಾಲಕ್ಷ್ಮೀ ಹಬ್ಬದ ದಿನ ದೇವಸ್ಥಾನದಲ್ಲಿ ಮಹಿಳೆಯರಿಗೆ ಅರಿಷಿಣ, ಕುಂಕುಮವನ್ನು ಕಂದಾಯ ನಿರೀಕ್ಷಕ ಬಸವರಾಜ ಎಂ. ಕಾತರಾಳ ವಿತರಿಸಿದರು.

ಈ ವೇಳೆ ಮಾತನಾಡಿದ ಅವರು, ಎಲ್ಲಿ ಮಹಿಳೆಯರನ್ನು ಪೂಜ್ಯನೀಯ ಭಾವನೆಯಿಂದ ಕಾಣುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ. ಪ್ರತಿಯೊಂದು ಪೂಜ್ಯನೀಯ ವಸ್ತುವಿಗೂ ಮಹಿಳೆಯ ಹೆಸರಿನಿಂದ ಕರೆಯುವ ನಾಡಿನಲ್ಲಿ ಪವಿತ್ರ ಶ್ರಾವಣ ಮಾಸದ ವರಮಹಾಲಕ್ಷ್ಮೀ ಹಬ್ಬದ ದಿನ ದೇವಾಲಯಗಳಲ್ಲಿ ಅರಿಷಿಣ, ಕುಂಕುಮ ಮತ್ತು ಹಸಿರು ಬಳೆಗಳನ್ನು ಉಡಿ ತುಂಬಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.

ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಸುರೇಶ ರಾಚನಾಯ್ಕರ, ಎಸ್.ಎಫ್. ಆದಿ, ಸೋಮಣ್ಣ ಬಂಡಿವಾಡ, ಬಸವರಾಜ ಮೆಣಸಿನಕಾಯಿ, ವಿರೂಪಾಕ್ಷಪ್ಪ ಆದಿ, ಪರಪ್ಪ ಉಮಚಗಿ, ಮಲ್ಲೇಶಪ್ಪ ಕಣವಿ, ಜಯಪ್ರಕಾಶ ಹೊಟ್ಟಿ, ಸ್ನೇಹಾ ಹೊಟ್ಟಿ, ಸುಮಾ ಚೋಟಗಲ, ಸಂಕಲ್ಪ ಹಾಲೆವಾಡಿಮಠ, ಶಿದ್ರಾಮಗೌಡ ಬಳ್ಳೊಳ್ಳಿ, ಅರ್ಚಕರಾದ ರಾಘವೇಂದ್ರ ಪೂಜಾರ, ಸೋಮನಾಥ ಪೂಜಾರ, ಕೀರ್ತಿ ಕಾತರಾಳ, ಇತರರಿದ್ದರು.