ಇಂಧನ, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ನಿಂದ ಸಿರವಾರದಲ್ಲಿ ಸೋಮವಾರ ಸೈಕಲ್ ಜಾಥಾ ನಡೆಸಲಾಯಿತು. 
ಜಿಲ್ಲೆ

ಇಂಧನ, ಅಡುಗೆ ಅನಿಲ ಬೆಲೆ ಏರಿಕೆಗೆ ಖಂಡಿಸಿ ಕಾಂಗ್ರೆಸ್‌ನಿಂದ ಸೈಕಲ್ ಜಾಥಾ

ಸಿರವಾರ: ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಸೈಕಲ್ ಜಾಥಾ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ವೃತ್ತ (ಮಾನ್ವಿ ಕ್ರಾಸ್) ದಿಂದ ಬಸವ ವೃತ್ತದವರೆಗೆ ನಡೆದ ಮೆರವಣಿಗೆಯಲ್ಲಿ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಮಾಜಿ ಶಾಸಕ ಜಿ.ಹಂಪಯ್ಯ ನಾಯಕ ಮಾತನಾಡಿ, ಬಿಜೆಪಿ ಸರ್ಕಾರ ಜನರಿಗೆ ನಾನಾ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದೆ. ನಂತರ ಇಂಧನ, ಅಡುಗೆ ಅನಿಲ, ದಿನ ಬಳಕೆ ವಸ್ತುಗಳ ಬೆಲೆ ಏರಿಸಿದೆ. ಇದರಿಂದ ಜನ ಸಾಮಾನ್ಯರು ಜೀವನ ನಡೆಸುವುದು ಕಷ್ಟವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಜೀವನದ ಜತೆ ಆಡವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕರ್ತರಾದ ಬಸವರಾಜ ನಾಯಕ, ಮೌಲಾಸಾಬ್ ವರ್ಚಸ್ಸು, ದೇವಣ್ಣ ನವಲಕಲ್, ಚಂದ್ರು ಸಾಹುಕಾರ ನೀಲಗಲ್, ನಾಗಪ್ಪ ಸಾಹುಕಾರ ಪತ್ತಾರ್, ಮೆಹಬೂಬ್‌ಸಾಬ್ ದೊಡ್ಡಮನಿ, ಅಬ್ರಾಹಂ ಹೊನ್ನಟಗಿ, ಜಯಪ್ಪ, ಹಾಜಿಮಲಂಗ್, ನಾಗರಾಜ ಚಿನ್ನಾನ್, ಸೂರಿ ದುರಗಣ್ಣ ನಾಯಕ, ಮಾರ್ಕಪ್ಪ, ವಲೀಸಾಬ್ ಗುತ್ತೇದಾರ ಇತರರು ಇದ್ದರು.