ವಿಜಯವಾಣಿ ಸುದ್ದಿಜಾಲ ಗದಗ
ಶಾಸಪ್ಪ ಉಪ್ಪಾರ ಅವರದ್ದು ಕಾಯಕವೇ ಕೈಲಾಸ ವೃತ್ತಿ ಎಂಬಂತೆ ಇಲಾಖೆಯಲ್ಲಿ 39 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸರಳ ಸಜ್ಜಿನಿಕೆ ವ್ಯಕ್ತಿತ್ವ ಹೊಂದಿರುವ ಅವರ ಬಿಳ್ಕೊಡುಗೆ ಒಮದೆಡೆ ಸಂತೋಷ ಮತ್ತೊಂದೆಡೆ ಬೇಸರದಿಂದ ಕೂಡಿದೆ ಎಂದು ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿ ಎಂ. ತುಂಬರಮಟ್ಟಿ ಹೇಳಿದರು
ಶನಿವಾರ ನಿವೃತ್ತಿ ಹೊಂದಿದ ರೋಣ ತಾಲೂಕು ಹಿಂದುಳಿದ ವರ್ಗಗಳ ಇಲಾಖಾ ಅಧಿಕಾರಿ ಶಾಸಪ್ಪ ಉಪ್ಪಾರ ದಂಪತಿ ಬಿಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ವಸತಿ ನಿಲಯಗಳಲ ಸಮ್ರಗ ಅಭಿವೃದ್ಧಿಗೆ ಅವರ ಸೇವೆ ಅಗ್ರಗಣ್ಯ. ತಪ್ಪ ಸೇವಾ ಅವಧಿಯಲ್ಲಿ ಎಸ್ಸೆಸೆಲ್ಸಿ, ಪಿಯುಸಿ ವಿದ್ಯಾಥಿರ್ಗಳ ಮಾರ್ಗದರ್ಶ ಮಾಡಿದ್ದಾರೆ. ವಸತಿ ನಿಲಯಗಳಲ್ಲಿ ದೇವರಾಜು ಅರಸು ಅವರ ಮೂತಿರ್ ಸ್ಥಾಪನೆ ಯೋಜನೆಯಲ್ಲಿ ಬಹುದೊಡ್ಡ ಶ್ರಮದಾನ ನೀಡಿದ್ದರು. ಅಟಲ್ ಬಿಹಾರಿ ವಾಜಪೇಯಿ ವಸತಿ ನಿಲಯ ಸ್ಥಾಪನೆಯಲ್ಲೂ ಪರಿಣಾಮಕಾರಿ ಸೇವೆ ಸಲ್ಲಿಸಿದ್ದಾರೆ. ಅವರು ಸೇವೆಯಿಂದ ನಿವೃತ್ತಿಗೊಂಡು ಸಂರ್ಪೂಣ ವೈಯಕ್ತಿಕ ಬದುಕು ಸಾಗಲು ಅಣಿಯಾಗುತ್ತಿದ್ದು ಸಂತೋಷದ ವಿಷಯವಾದರೆ, ಇಲಾಖೆಯು ಅವರ ಸೇವೆಯಿಂದ ಕಳಸಿಕೊಳ್ಳುತ್ತಿದೆ ಎಂಬುದು ಬೇಸರ ಸಂಗತಿ ಎಂದು ತುಂಬರಮಟ್ಟಿ ಹೇಳಿದರು.
ಸರ್ಕಾರಿ ನೌಕರ ಸಂದ ಜಿಲ್ಲಾಧ್ಯಕ್ಷ ರವಿ ಗುಂಜಿಕರ ಮಾತನಾಡಿ, ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಶಾಸಪ್ಪ ಅವರು ಉತ್ತಮ ಸಂಬಂಧ ಹೊಂದಿದ್ದರು ಎಂದರು. ಇಲಾಖೆಯಿಂದ ಸನ್ಮಾನಿಸಿದ ಅಧಿಕಾರಿಗಳಿಗೆ ಶಾಸಪ್ಪ ದಂಪತಿಗಳು ಕೃತಜ್ಞತೆ ಸಲ್ಲಿಸಿದರು.
ಇಲಾಖಾ ಅಧಿಕಾರಿಗಳಾದ ಬಸವರಾಜ ಬಳ್ಳಾರಿ, ಎಂ.ಕೆ. ಸುರಕೋಡ ಇತರರು ಇದ್ದು.